ADVERTISEMENT

ಪ್ರವಾಸಿಗರಿಗೆ ಭಯ ಮೂಡಿಸಿದ ಜೇನುಗೂಡು

​ಪ್ರಜಾವಾಣಿ ವಾರ್ತೆ
Published 2 ಜನವರಿ 2012, 8:25 IST
Last Updated 2 ಜನವರಿ 2012, 8:25 IST

ಹಳೇಬೀಡು: ಪಟ್ಟಣದ ಹೊಯ್ಸಳೇಶ್ವರ ದೇವಾಲಯದಲ್ಲಿ ಕೆಲ ವಿಗ್ರಹಗಳ ಮೇಲೆ ಜೇನುಹುಳುಗಳು ಗೂಡುಕಟ್ಟಿದ್ದು, ಪ್ರವಾಸಿಗರು ಭಯದಿಂದ ದೇವಾಲಯ ವೀಕ್ಷಿಸುವಂತಾಗಿದೆ.

ಈಗ ಇತಿಹಾಸ ಪ್ರಸಿದ್ಧ ಹೊಯ್ಸಳೇಶ್ವರ ದೇಗುಲ ವೀಕ್ಷಿಸಲು ಪ್ರವಾಸಿಗರು ಹೆಚ್ಚಾಗಿ ಆಗಮಿಸುತ್ತಿದ್ದಾರೆ. ಶೈಕ್ಷಣಿಕ ಪ್ರವಾಸದ ಸಮಯ ಆಗಿರುವುದರಿಂದ ಶಾಲೆ- ಕಾಲೇಜು ವಿದ್ಯಾರ್ಥಿಗಳು ದೇವಾಲಯಕ್ಕೆ ದಂಡಿಯಾಗಿ ಆಗಮಿಸುತ್ತಿದ್ದಾರೆ. ಬೆಳಿಗ್ಗೆಯಿಂದ ಸಂಜೆ ವರೆಗೆ ದೇಗುಲ ಪ್ರವಾಸಿಗರಿಂದ ಗಿಜಿಗುಡುತ್ತಿದೆ. ಪ್ರವಾಸಿಗರ ಶಬ್ದಕ್ಕೆ ಜೇನುಹುಳುಗಳು ಗೂಡಿನಿಂದ ಮೇಲೆದ್ದು ದಾಳಿ ಮಾಡುವ ಸಾಧ್ಯತೆಗಳು ಇಲ್ಲದಿಲ್ಲ. 

 ಕೇಂದ್ರ ಪುರಾತತ್ವ ಇಲಾಖೆ ಜೇನುಗೂಡುಗಳ ತೆರವಿಗೆ ಮುಂದಾ ಗಿಲ್ಲ. ವಿಗ್ರಹಗಳ ಮೇಲೆ ಜೇನು ಗೂಡುಕಟ್ಟುವುದರಿಂದ ಮೃದು (ಬಳಪದ) ಕಲ್ಲಿನಿಂದ ನಿರ್ಮಿಸಿರುವ ಶಿಲ್ಪಗಳಿಗೂ ಹಾನಿಯಾಗುವ ಅವಕಾಶವಿದೆ. ಗೂಡಿನಿಂದ ಜೇನು ಬೇರೆಡೆಗೆ ಸ್ಥಳಾಂತರ ಮಾಡಿದರೂ ಶಿಲ್ಪಗಳ ಮೇಲೆ ಮೇಣ ನಿಲ್ಲುವ ಸಾಧ್ಯತೆ ಇದೆ.

`ಜೇನು ಗೂಡುಕಟ್ಟಿರುವುದು ಸಿಬ್ಬಂದಿ ಗಮನಕ್ಕೆ ಬಂದಿದೆ. ಓಡಿಸುವ ಪ್ರಯತ್ನ ನಡೆಸಿದರೂ ಪ್ರವಾಸಿಗರ ಮೇಲೆ ಜೇನುಹುಳು ಆಕ್ರಮಣ ಮಾಡ ಬಹುದು. ಹೀಗಾಗಿ ಸೂಕ್ತ ಸಮಯ ನೋಡಿಕೊಂಡು ಜೇನುಹುಳು ಓಡಿಸಬೇಕು~ ಎನ್ನುತ್ತಾರೆ ಸ್ಥಳೀಯರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.