ADVERTISEMENT

ರಸಗೊಬ್ಬರ ಮಾರಾಟ ಪುನರಾರಂಭಕ್ಕೆ ಕ್ರಮ: ಬೊಮ್ಮೇಗೌಡ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2012, 7:40 IST
Last Updated 1 ಅಕ್ಟೋಬರ್ 2012, 7:40 IST

ಅರಕಲಗೂಡು: ರಸಗೊಬ್ಬರ ಮಾರಾಟ ಪುನರಾರಂಭಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಟಿ.ಎ.ಪಿ.ಸಿ.ಎಂ.ಎಸ್. ಅಧ್ಯಕ್ಷ ಪಿ.ಬೊಮ್ಮೇಗೌಡ ತಿಳಿಸಿದರು.

ಶನಿವಾರ ನಡೆದ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ರಸಗೊಬ್ಬರದ ದರ ನಿಗದಿಯಲ್ಲಿ ಉಂಟಾದ ವ್ಯತ್ಯಯದಿಂದ ಸಂಘಕ್ಕೆ ಹಾನಿ ಉಂಟಾಗುವ ಪರಿಸ್ಥಿತಿ ತಲೆದೋರಿದ ಪರಿಣಾಮ ಗೊಬ್ಬರ ಮಾರಾಟವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಈ ಬಗ್ಗೆ ಸಂಬಂಧಿಸಿದವರೊಡನೆ ಚರ್ಚಿಸಿ ಹೊಂದಾಣಿಕೆಯಾದಲ್ಲಿ ಮಾರಾಟ ಪುನರಾರಂಭಿಸಿ ರೈತರಿಗೆ ಅನುಕೂಲ ಕಲ್ಪಿಸುವುದಾಗಿ ಹೇಳಿದರು.

ಸಂಘವು ಕಳೆದ ಸಾಲಿನಲ್ಲಿ  33 ಸಾವಿರ ರೂಪಾಯಿ ನಿವ್ವಳ ಲಾಭ ಪಡೆದಿದೆ. ಕಟ್ಟಡದ ಮಳಿಗೆಗಳ ಬಾಡಿ ಗೆದಾರರ ವಿರುದ್ಧ ನ್ಯಾಯಾಲಯದಲ್ಲಿ ನಡೆಯುತ್ತಿರುವ ಪ್ರಕರಣ ಸದ್ಯದಲ್ಲೇ ಇತ್ಯರ್ಥವಾಗುವ ಹಂತಕ್ಕೆ ಬಂದಿದೆ. ಮಳಿಗೆಗಳು ಸ್ವಾಧೀನಕ್ಕೆ ಬಂದ ನಂತರ ಸಂಘದ ಕಚೇರಿ ಸ್ಥಳಾಂತರಿಸಲಾಗು ವುದು ಎಂದರು.

ರಸಗೊಬ್ಬರ ಮಾರಾಟ ನಿಲ್ಲಿಸಿರುವು ದನ್ನು ಸಂಘದ ಸದಸ್ಯರು ಆಕ್ಷೇಪಿಸಿ ರೈತರು ಖಾಸಗಿ ಅಂಗಡಿಗಳಲ್ಲಿ ಹೆಚ್ಚಿನ ಹಣ ತೆತ್ತು ಗೊಬ್ಬರಕೊಳ್ಳುವ ಪರಿಸ್ಥಿತಿ ಉಂಟಾಗಿದೆ. ಇದರಿಂದ ರೈತರಿಗೆ ಅನ್ಯಾಯವಾಗುತ್ತಿದ್ದು ಸಂಘ ರೈತರ ನೆರವಿಗೆ ಬರುವಂತೆ ಆಗ್ರಹಿಸಿದರು.

ನಿರ್ದೇಶಕರಾದ  ತಿಮ್ಮೇಗೌಡ, ಶಿವಶಂಕರ್, ಮಹದೇವ್, ನಂಜುಂಡ ಸ್ವಾಮಿ, ವಸಂತಕುಮಾರ್ ಇದರು. ಕಾರ್ಯದರ್ಶಿ ಉಮಾಂಭ ಅವರು ವಾರ್ಷಿಕ ವರದಿ ಮಂಡಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.