ADVERTISEMENT

ಸಾರ್ವಜನಿಕ ಜೀವನದಲ್ಲಿ ಪರಿಶುದ್ಧತೆ ಮುಖ್ಯ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2011, 5:35 IST
Last Updated 13 ಸೆಪ್ಟೆಂಬರ್ 2011, 5:35 IST

ಹಾಸನ: `ಸಾರ್ವಜನಿಕ ಜೀವನದಲ್ಲಿರುವವರು ಪರಿಶುದ್ಧರಾಗಿದ್ದರೆ ಮಾತ್ರ ನೈತಿಕವಾಗಿ ಬಲಿಷ್ಠರಾಗಿರಲು ಸಾಧ್ಯ~ ಎಂದು ರಾಜ್ಯಮಟ್ಟದ ಅತ್ಯುತ್ತಮ ಉಪನ್ಯಾಸಕ ಪ್ರಶಸ್ತಿ ಪುರಸ್ಕೃತ ಅಪ್ಪಾಜಿಗೌಡ ನುಡಿದರು.

ಹಾಸನದ ಸಿಎಸ್‌ಐ ಶಾಲೆಯಲ್ಲಿ ರಂಗಸಿರಿ ತಂಡದವರು ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಡಿಡಿಪಿಐ ಎ.ಟಿ. ಚಾಮರಾಜ್ ಮಾತನಾಡಿದರು. ರಾಜ್ಯ ಕಾರ್ಯ ನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯ ದರ್ಶಿ ಎನ್.ರಾಜು ಮಾತನಾಡಿದರು.

ರೈತ ಸಂಘದ ಜಿಲ್ಲಾ ಸಂಚಾಲಕ ಕೊಟ್ಟೂರು ಶ್ರೀನಿವಾಸ್ ಪ್ರಾಸ್ತಾವಿಕ ಮಾತನಾಡಿದರು.
ರಾಜ್ಯ ಪತ್ರಕರ್ತರ ಸಂಘದ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಪತ್ರಕರ್ತ ಶಿವಾನಂದ ತಗಡೂರು ಹಾಗೂ ಕರಾಟೆಯಲ್ಲಿ ಪ್ರಶಸ್ತಿ ಪಡೆದ ಕಿರಿಯ ಕಲಾವಿದ ಅಂಜನ್‌ನನ್ನು ಸನ್ಮಾನಿಸಲಾಯಿತು.

ರಂಗಸಿರಿ ಅಧ್ಯಕ್ಷ ಕೆ. ರಂಗಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿ ಪೂರ್ಣಿಮಾ ಜಗದೀಶ್ ಪ್ರಾರ್ಥನಾ ಗೀತೆ ಹಾಡಿದರು. ಎಚ್.ಡಿ.ಗುರುಪ್ರಸಾದ್ ಸ್ವಾಗತಿಸಿದರು. ಆಕಾಶವಾಣಿಯ ಹನುಮಂತ ನಾಯಕ್ ನಿರೂಪಿಸಿದರು. ಶಿಕ್ಷಕ ರುದ್ರೇಶ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.