ಹಾಸನ: ಹಾಸನಾಂಬೆ ದೇಗುಲದ ಗರ್ಭಗುಡಿಗೆ ಬೀಗ ಹಾಕುವ ಮೂಲಕ ಪ್ರಸಕ್ತ ವರ್ಷದ ಉತ್ಸವಕ್ಕೆ ಶನಿವಾರ ತೆರೆ ಬಿತ್ತು.
ಮಧ್ಯಾಹ್ನ 1.43ಕ್ಕೆ ಜಿಲ್ಲಾಧಿಕಾರಿ ಹಾಗೂ ಎಸಿ ಅವರ ಸಮ್ಮುಖದಲ್ಲಿ ಹಾಸನಾಂಬೆ ದೇಗುಲದ ಗರ್ಭಗುಡಿಗೆ ಬೀಗ ಹಾಕಲಾಯಿತು.
ಈ ವೇಳೆ ಭಕ್ತರು ದೇವಿಯ ಜಯಘೋಷ ಮೊಳಗಿಸಿದರು. ಇದರೊಂದಿಗೆ 10 ದಿನಗಳ ಈ ಬಾರಿಯ ಉತ್ಸವಕ್ಕೆ ವಿಧ್ಯುಕ್ತ ತೆರೆ ಬಿತ್ತು.
ಮುಂದಿನ ವರ್ಷ ದರ್ಶನ
ಮುಂದಿನ ವರ್ಷ ನವೆಂಬರ್ 1ರಿಂದ 9ರ ವರೆಗೆ ದರ್ಶನ ನಡೆಯಲಿದೆ.
ದೇಗುಲದ ಗರ್ಭಗುಡಿಗೆ ಬೀಗ ಹಾಕಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.