ADVERTISEMENT

ಹಳೇಬೀಡು | ಎಲ್ಲರಿಗೂ ಬದುಕುವ ಹಕ್ಕು ನೀಡಿದ ಅಂಬೇಡ್ಕರ್: ದಲಿತ ಮುಖಂಡ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2025, 11:36 IST
Last Updated 14 ಏಪ್ರಿಲ್ 2025, 11:36 IST
ಹಳೇಬೀಡಿನ ಅಂಬೇಡ್ಕರ್ ವೃತ್ತದಲ್ಲಿ ಸೋಮವಾರ ದಲಿತ ಮುಖಂಡರು ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಮುಖಂಡರಾದ ತಿರುಮಲನಹಳ್ಳಿ ಶಿವಕುಮಾರ್, ಅಪ್ಪಗೌಡನಹಳ್ಳಿ ರತೀಶ ಜಗದೀಶ್, ಮಂಜುನಾಥ್, ಪುಟ್ಟಸ್ವಾಮಿ, ಹರೀಶ್, ಸತೀಶ್, ಮಲ್ಲಾಪುರ ಅಣ್ಣಯ್ಯ, ಮೋಹನ್ ಕುಮಾರ್ ಹುಲಿಕೆರೆ ಪುಟ್ಟಸ್ವಾಮಿ ಭಾಗವಹಿಸಿದ್ದರು.

ಹಳೇಬೀಡು: ‘ಮೇಲು– ಕೀಳು ಎನ್ನದೆ ಎಲ್ಲ ವರ್ಗದವರಿಗೂ ಬದುಕುವ ಹಕ್ಕನ್ನು ಬಿ.ಆರ್‌.ಅಂಬೇಡ್ಕರ್ ನೀಡಿದ್ದಾರೆ’ ಎಂದು ದಲಿತ ಮುಖಂಡ ಅಪ್ಪಗೌಡನಹಳ್ಳಿ ರತೀಶ್ ಹೇಳಿದರು.

ಹಳೇಬೀಡಿನ ಅಂಬೇಡ್ಕರ್ ವೃತ್ತದಲ್ಲಿ ನಡೆದ ಅಂಬೇಡ್ಕರ್‌ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಸಮಾನತೆಗೆ ಮಹತ್ವ ನೀಡಿ ಸಂವಿಧಾನ ರಚನೆ ಮಾಡಿದ್ದರಿಂದ ಅಂಬೇಡ್ಕರ್ ಮಹಾನ್ ಮಾನವತಾವಾದಿ ಎನಿಸಿಕೊಂಡಿದ್ದಾರೆ’ ಎಂದು ಸ್ಮರಿಸಿದರು.

ದಲಿತ ಮುಖಂಡರಾದ ತಿರುಮಲನಹಳ್ಳಿ ಶಿವಕುಮಾರ್, ಜಗದೀಶ್, ರಾಜಗೆರೆ ಮಂಜುನಾಥ್, ಪುಟ್ಟಸ್ವಾಮಿ, ನ.ಹರೀಶ್, ಸತೀಶ್, ಮಲ್ಲಾಪುರ ಅಣ್ಣಯ್ಯ, ಮೋಹನ್ ಕುಮಾರ್, ಹುಲಿಕೆರೆ ಪುಟ್ಟಸ್ವಾಮಿ ಭಾಗವಹಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.