ADVERTISEMENT

ಅರಸೀಕೆರೆ | ರಂಜಿಸಿದ ‘ಕೆಂಪೇಗೌಡ’ ನೃತ್ಯರೂಪಕ

​ಪ್ರಜಾವಾಣಿ ವಾರ್ತೆ
Published 27 ಜೂನ್ 2025, 14:26 IST
Last Updated 27 ಜೂನ್ 2025, 14:26 IST
ಅರಸೀಕೆರೆ ತಾಲ್ಲೂಕು ಕಚೇರಿಯಲ್ಲಿ ಆಯೋಜಿಸಿದ್ದ 516ನೇ ಕೆಂಪೇಗೌಡ ಜಯಂತಿಯಲ್ಲಿ ಅನಂತ ಶಾಲೆಯ ಮಕ್ಕಳು ನೃತ್ಯ ರೂಪಕ ಪ್ರಸ್ತುತಪಡಿಸಿದರು. ಶಾಸಕ ಕೆ.ಎಂ.ಶಿವಲಿಂಗೇಗೌಡ, ತಹಶೀಲ್ದಾರ್‌ ಸಂತೋಷ್‌ ಕುಮಾರ್‌ ಭಾಗವಹಿಸಿದ್ದರು
ಅರಸೀಕೆರೆ ತಾಲ್ಲೂಕು ಕಚೇರಿಯಲ್ಲಿ ಆಯೋಜಿಸಿದ್ದ 516ನೇ ಕೆಂಪೇಗೌಡ ಜಯಂತಿಯಲ್ಲಿ ಅನಂತ ಶಾಲೆಯ ಮಕ್ಕಳು ನೃತ್ಯ ರೂಪಕ ಪ್ರಸ್ತುತಪಡಿಸಿದರು. ಶಾಸಕ ಕೆ.ಎಂ.ಶಿವಲಿಂಗೇಗೌಡ, ತಹಶೀಲ್ದಾರ್‌ ಸಂತೋಷ್‌ ಕುಮಾರ್‌ ಭಾಗವಹಿಸಿದ್ದರು   

ಅರಸೀಕೆರೆ: ‘ಮಹನೀಯರ ಚರಿತ್ರೆ ಹಾಗೂ ಇತಿಹಾಸ ಸೃಷ್ಟಿಸಿದ ಮಹಾಪುರುಷರ ಜಯಂತಿಗಳನ್ನು ಕೇವಲ ಆಚರಿಸುವುದಕ್ಕೆ ಸೀಮಿತಗೊಳಿಸಿದೆ ಅವರ ಆದರ್ಶಗಳನ್ನು ನಿಜ ಜೀವನದಲ್ಲಿ ಎಲ್ಲರೂ ಅಳವಡಿಸಿಕೊಳ್ಳಬೇಕು’ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು.

ನಗರದ ತಾಲ್ಲೂಕು ಕಚೇರಿಯ ಕಂದಾಯ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ 516ನೇ ಕೆಂಪೇಗೌಡ ಜಯಂತಿ ಮಹೋತ್ಸವದಲ್ಲಿ ಮಾತನಾಡಿದರು.

‘ಬೆಂಗಳೂರು ನಿರ್ಮಾಣ ಮಾಡಿದ ಕೆಂಪೇಗೌಡರು ಮಾದರಿ ಇತಿಹಾಸ ಪುರುಷರಾಗಿದ್ದಾರೆ. ಅವರ ದೂರದೃಷ್ಟಿಯ ಫಲದಿಂದಾಗಿಯೇ ಇಂದು ಜಾಗತಿಕ ಮಟ್ಟದಲ್ಲಿ ಸಿಲಿಕಾನ್‌ ಸಿಟಿ ಎಂದೆನ್ನಿಸಿಕೊಂಡು ಪ್ರಸಿದ್ಧ ನಗರವಾಗಿ ಹೊರಹೊಮ್ಮಿದೆ’ ಎಂದರು.

ADVERTISEMENT

‘ಯುವ ಸಮೂಹ ಶ್ರೇಷ್ಠ ಪುರುಷರ ಬದುಕನ್ನು ಮಾದರಿಯಾಗಿಟ್ಟುಕೊಳ್ಳಬೇಕು’ ಎಂದು ಹೇಳಿದರು.

ತಹಶೀಲ್ದಾರ್‌ ಎಂ.ಜಿ. ಸಂತೋಷ್‌ಕುಮಾರ್‌ ಮಾತನಾಡಿದರು.

ನಗರಸಭೆ ಆಯುಕ್ತ ಕೃಷ್ಣಮೂರ್ತಿ, ತಾಲ್ಲೂಕು ಪಂಚಾಯಿತಿ ಇಒ ಸತೀಶ್‌, ಕಸಾಪ ಅಧ್ಯಕ್ಷ ಚಂದ್ರಶೇಖರ್‌, ನಗರಸಭೆ ಸದಸ್ಯರಾದ ಗಣೇಶ್‌, ಮೇಲುಗಿರಿಗೌಡ, ದರ್ಶನ್‌, ಕರವೇ ತಾಲ್ಲೂಕು ಅಧ್ಯಕ್ಷ ಎ.ಜಿ.ಕಿರಣ್‌ಕುಮಾರ್‌, ಉಪಾಧ್ಯಕ್ಷ ಹೇಮಂತ್‌ಕುಮಾರ್‌, ತುಳಸಿದಾಸ್‌, ಭೈರವೈಕ್ಯ ಸಮಾಜದ ಯುವ ಘಟಕದ ಅಧ್ಯಕ್ಷ ಪ್ರಶಾಂತ್‌, ಮುಖಂಡರಾದ ಧರ್ಮಣ್ಣ, ರಮೇಶ್‌, ಹೈಟೆಕ್‌ ಕುಮಾರ್‌ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.