ADVERTISEMENT

ಏಕಬೆಳೆ ಪದ್ಧತಿಯಿಂದ ಹೊರಬನ್ನಿ: ರಮೇಶ್ ಕುಮಾರ್

ರೋಗ ನಿಯಂತ್ರಣಕ್ಕೆ ಮುಂಜಾಗ್ರತೆ ವಹಿಸಿ: ರಮೇಶ್ ಕುಮಾರ್.

​ಪ್ರಜಾವಾಣಿ ವಾರ್ತೆ
Published 5 ಜೂನ್ 2025, 12:47 IST
Last Updated 5 ಜೂನ್ 2025, 12:47 IST
ಆಲೂರು ಕಸಬಾ ಧರ್ಮಪುರಿ ಗ್ರಾಮದ ರೈತರ ಜಮೀನಿನಲ್ಲಿ ಬೆಳೆದಿದ್ದ ಮುಸುಕಿನ ಜೋಳ ಬೆಳೆಯನ್ನು ಕೃಷಿ ಇಲಾಖೆ ನಿರ್ದೇಶಕ ರಮೇಶ್ ಕುಮಾರ್ ಪರಿಶೀಲಿಸಿದರು
ಆಲೂರು ಕಸಬಾ ಧರ್ಮಪುರಿ ಗ್ರಾಮದ ರೈತರ ಜಮೀನಿನಲ್ಲಿ ಬೆಳೆದಿದ್ದ ಮುಸುಕಿನ ಜೋಳ ಬೆಳೆಯನ್ನು ಕೃಷಿ ಇಲಾಖೆ ನಿರ್ದೇಶಕ ರಮೇಶ್ ಕುಮಾರ್ ಪರಿಶೀಲಿಸಿದರು   

ಆಲೂರು: ತಾಲ್ಲೂಕಿನಾದ್ಯಂತ ಯಥೇಚ್ಛವಾಗಿ ಮುಸುಕಿನ ಜೋಳದ ಏಕಬೆಳೆ ಪದ್ಧತಿಯಿಂದಾಗಿ, ಕೇದಿಗೆ ರೋಗ ಶೀಲೀಂಧ್ರ ರೋಗ ಹೆಚ್ಚಾಗುವ ಸಂಭವವಿರುತ್ತದೆ. ಈ ರೋಗ ತಗುಲಿದರೆ ಶೇ 50ಕ್ಕಿಂತ ಹೆಚ್ಚು ಇಳುವರಿ ನಷ್ಟ ಉಂಟಾಗುತ್ತದೆ ಹಾಗೂ ಬೆಳೆ ಗುಣಮಟ್ಟ ಕಡಿಮೆಯಾಗುತ್ತದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ರಮೇಶ್‍ಕುಮಾರ್ ತಿಳಿಸಿದ್ದಾರೆ. 

ಎಲೆಗಳ ಮೇಲ್ಮೈಯಲ್ಲಿ ಮತ್ತು ಎಲೆಗಳ ತೊಟ್ಟುಗಳಲ್ಲಿ ಹಳದಿ, ತೆಳು ಹಳದಿ ಕಲೆ–ಗೆರೆಗಳು, ಎಲೆಗಳ ಕೆಳಭಾಗದಲ್ಲಿ ಬೂದು-ಬಿಳಿ ಬಣ್ಣದ ಶಿಲೀಂಧ್ರ ಬೆಳೆವಣಿಗೆ ರೋಗದ ಲಕ್ಷಣವಾಗಿದೆ. ಇದರಿಂದ ಮುಸುಕಿನ ಜೋಳದ ಬೆಳವಣಿಗೆ ಕುಂಠಿತ, ಅಕಾಲಿಕ ಹಳದಿ ಎಲೆಗಳ ಉದುರುವಿಕೆ, ಬಾಡುವಿಕೆ ಮತ್ತು ಮುಸಿಕಿನ ಜೋಳದ ತೆನೆ–ಕಾಳುಗಳ ಗಾತ್ರದಲ್ಲಿ ಇಳಿಮುಖವಾಗುತ್ತದೆ ಎಂದು ಹೇಳಿದರು. 

ಅಂತರ ಬೆಳೆ ಪದ್ಧತಿ ಹಾಗೂ ಬೆಳೆ ಪರಿವರ್ತನೆ ಕ್ರಮ ಅನುಸರಿಸದೆ ಇರುವುದರಿಂದ ತಂಪಾದ ವಾತಾವರಣ ಮತ್ತು ತೇವಾಂಶಯುಕ್ತ ಗಾಳಿ ವಾತಾವರಣದಲ್ಲಿ ಈ ರೋಗವು ಉಲ್ಬಣವಾಗುತ್ತದೆ. ರೋಗ ನಿರ್ವಹಣೆಗಾಗಿ ಬಿತ್ತನೆಗೆ ಬಳಸುವ ಬೀಜಗಳನ್ನು ಮೆಟಲಾಕ್ಸಿಲ್–ಒ ಶೇ4, ಶೀಲೀಂದ್ರ ನಾಶಕಕ್ಕೆ ಪ್ರತಿ ಕೆ.ಜಿ.ಗೆ 5 ಗ್ರಾಂ ನಂತೆ ಬೀಜೋಪಚಾರ ಮಾಡಬೇಕು ಎಂದರು.

ಶೀಲೀಂಧ್ರ ನಾಶಕವಾದ ಮೇಟಲಾ ಮೆಟಲಾಕ್ಸಿಲ್–ಒ ಶೇ4 ಹಾಗೂ ಮ್ಯಾಂಕೋಜೆಬ್ ಶೇ65 ಅನ್ನು ಪ್ರತಿ ಲೀಟರ್ ನೀರಿಗೆ 4 ಗ್ರಾಂನಂತೆ ಬಿತ್ತನೆಯಾದ 24 ದಿನಗಳ ನಂತರ ಬೆಳೆಗಳಿಗೆ ಸಿಂಪಡಿಸುವುದರಿಂದ ರೋಗ ಬಾರದಂತೆ ತಡೆಗಟ್ಟಬಹುದು. ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಮಾಹಿತಿ ಪಡೆಯಬೇಕು.

ADVERTISEMENT

ಪ್ರಸ್ತುತ 2025–26ನೇ ಸಾಲಿನಲ್ಲಿ ಆಲೂರು ತಾಲ್ಲೂಕಿನಾದ್ಯಂತ 11,000 ಹೆಕ್ಟೇರ್‌ ಪ್ರದೇಶದಲ್ಲಿ ಮುಸುಕಿನ ಜೋಳ ಬಿತ್ತನೆಯ ಗುರಿಯಾಗಿದ್ದು, ಈಗಾಗಲೇ 5,550 ಹೆಕ್ಟೇರ್‌ ಮುಸುಕಿನ ಜೋಳ ಬಿತ್ತನೆಯಾಗಿರುತ್ತದೆ ಎಂದು  ರಮೇಶ್‍ಕುಮಾರ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.