ADVERTISEMENT

Bengaluru Stampede | ಭೂಮಿಕ್‌ ಸಮಾಧಿ ಮೇಲೆ ಬಿದ್ದು ​ತಂದೆ ಆಕ್ರಂದನ

​ಪ್ರಜಾವಾಣಿ ವಾರ್ತೆ
Published 7 ಜೂನ್ 2025, 15:19 IST
Last Updated 7 ಜೂನ್ 2025, 15:19 IST
ಬೇಲೂರು ತಾಲ್ಲೂಕಿನ ಕುಪ್ಪಗೋಡಿನ ಮಗ ಭೂಮಿಕ್‌ ಸಮಾಧಿ ಮೇಲೆ ಬಿದ್ದು ಗೋಳಾಡುತ್ತಿರುವ ತಂದೆ ಲಕ್ಷ್ಮಣ
ಬೇಲೂರು ತಾಲ್ಲೂಕಿನ ಕುಪ್ಪಗೋಡಿನ ಮಗ ಭೂಮಿಕ್‌ ಸಮಾಧಿ ಮೇಲೆ ಬಿದ್ದು ಗೋಳಾಡುತ್ತಿರುವ ತಂದೆ ಲಕ್ಷ್ಮಣ   

ಬೇಲೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟ ತಾಲೂಕಿನ ಕುಪ್ಪಗೋಡು ಗ್ರಾಮದ ಭೂಮಿಕ್‌ ತಂದೆ, ಮಗನ ಸಮಾಧಿ ಮೇಲೆ ಬಿದ್ದು ಗೋಳಾಡಿದರು. ಇದನ್ನು ನೋಡಿದ ಜನರ ಕಣ್ಣುಗಳೂ ನೀರಾದವು.

‘ಇಪ್ಪತ್ತು ವರ್ಷಗಳಿಂದ ಬೆಂಗಳೂರಿನಲ್ಲಿ ಸ್ವಂತ ಉದ್ಯಮ ಮಾಡಿಕೊಂಡು ಸಂಪಾದನೆ ಮಾಡಿರುವ ಲಕ್ಷ್ಮಣ್​ ಮಗನಿಗಾಗಿ ಸಾಕಷ್ಟು ಕನಸು ಕಂಡಿದ್ದರು. ಮಗನೂ ಕೂಡ  ತಂದೆಯ ಮಾರ್ಗದರ್ಶನದಂತೆ ನಡೆಯುತ್ತಿದ್ದ’ ಎಂದು ಕುಟುಂಬದವರು ಹೇಳಿದರು.

ಮಗ ಇಲ್ಲದೇ ಇರುವುದನ್ನು ನೆನೆದು ಕಣ್ಣೀರಿಡುತ್ತಿರುವ ಭೂಮಿಕ್​ ತಂದೆ, ಮಗನ ಸಾವನ್ನು ಅರಗಿಸಿಕೊಳ್ಳಲು ಸಾಧ್ಯವಾಗದೇ ಗೋಳಾಡುತ್ತಿದ್ದಾರೆ. ಶನಿವಾರ ಮಗನ ಸಮಾಧಿಯ ಮೇಲೆ ಬಿದ್ದು ಹೊರಳಾಡುತ್ತಿದ್ದ ಲಕ್ಷ್ಮಣ ಅವರನ್ನು ಸಮಾಧಾನ ಪಡಿಸುವ ಧೈರ್ಯ ಯಾರಿಗೂ ಇರದಂತಾಗಿತ್ತು.

ADVERTISEMENT

‘ಆಟಗಾರರೊಂದಿಗೆ ತಮ್ಮ ಮಕ್ಕಳು, ಮೊಮ್ಮಕ್ಕಳ ಫೋಟೊ ತೆಗೆಸಿಕೊಳ್ಳುವುದಕ್ಕಾಗಿ ಮಂತ್ರಿಗಳು ನಮ್ಮ ಮಕ್ಕಳನ್ನು ಬಲಿಕೊಟ್ಟರು. ಅವರ ಸಾವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಗೃಹಸಚಿವ ಡಾ.ಪರಮೇಶ್ವರ್ ಮೊದಲಾದವರು ಕಾರಣವೇ ಹೊರತು ಪೊಲೀಸರಲ್ಲ’ ಎಂದು ಲಕ್ಷ್ಮಣ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.