ADVERTISEMENT

ಹಾಸನ ಜಿಲ್ಲೆಯಲ್ಲಿ ಬಾಲ್ಯವಿವಾಹ ಪ್ರಕರಣ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2020, 16:22 IST
Last Updated 19 ಆಗಸ್ಟ್ 2020, 16:22 IST

ಹಾಸನ: ಹೆಚ್ಚಿನ ಮದುವೆಗಳು 14 ರಿಂದ 16 ವಯಸ್ಸಿನೊಳಗಿನವರ ನಡುವೆ ನಿಶ್ಚಯವಾಗಿದ್ದವು. ಕಳೆದ ವರ್ಷ 37, ಪ್ರಸಕ್ತ ವರ್ಷ 47 ಮದುವೆ ತಡೆ ತಡೆಯುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಬಡತನ, ಪ್ರೇಮ ಪ್ರಕರಣ ಹಾಗೂ ಲಾಕ್‌ಡೌನ್‌ ಅವಧಿಯಲ್ಲಿ ಹೆಚ್ಚಿನ ಜನರು ಸೇರುವುದಿಲ್ಲ ಹಾಗೂ ಅಧಿಕಾರಿಗಳು
ಬರುವುದಿಲ್ಲವೆಂಬ ಕಾರಣಕ್ಕೆ ಸಾಮಾನ್ಯವಾಗಿ ದೇವಾಲಯಗಳಲ್ಲಿ ಬೆಳಗಿನ ಜಾವ ಮದುವೆ ನೆರವೇರಿಸಲಾಗಿದೆ. ಬೋವಿ ಹಾಗೂ ಕುರುಬ ಸಮುದಾಯದಲ್ಲಿ ಹೆಚ್ಚು ಬಾಲ್ಯವಿವಾಹ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದರು.

ಅರಸೀಕೆರೆ ತಾಲ್ಲೂಕಿನ ಬಾಣವಾರ ಹೋಬಳಿಯ ಬ್ಯಾಡರಹಳ್ಳಿ ಗೊಲ್ಲರ ಹಟ್ಟಿಯವರು ದೇವಸ್ಥಾನದಲ್ಲಿ ಬಾಲ್ಯ ವಿವಾಹ
ಮಾಡುತ್ತಾರೆ. ಅಧಿಕಾರಿಗಳು ಬರುವ ಮಾಹಿತಿ ಅರಿತು ಬಾಲಕಿಯ ಕತ್ತಿನಿಂದ ತಾಳಿ ಬಿಚ್ಚಿಸಿಡುತ್ತಾರೆ. ಪ್ರಕರಣ ಪತ್ತೆ ಹಚ್ಚುವುದೇ ಸವಾಲಾಗಿದೆ.

ADVERTISEMENT

2019ರಲ್ಲಿ ಏಪ್ರಿಲ್‌ನಿಂದ ಜೂನ್‌ ವರೆಗೆ– 12 ಪ್ರಕರಣ
2020ರಲ್ಲಿ ಏಪ್ರಿಲ್‌ನಿಂದ ಜೂನ್‌ವರೆಗೆ–56 ಪ್ರಕರಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.