ಕೊಣನೂರು: ಎಲಿಸಾ ಪರೀಕ್ಷೆಯ ಮೂಲಕ ಮಾತ್ರ ಡೆಂಗಿ ಪತ್ತೆಹಚ್ಚಲು ಸಾಧ್ಯ. ಅಗತ್ಯವಿದ್ದಲ್ಲಿ ಡೆಂಗಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಆರೋಗ್ಯ ನಿರೀಕ್ಷಕ ಆನಂದಗೌಡ ತಿಳಿಸಿದರು.
ಇಲ್ಲಿನ ಎಂಕೆಎಸ್ ಲಯನ್ಸ್ ವಿದ್ಯಾನಿಕೇತನ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಡೆಂಗಿ, ಮಲೇರಿಯಾ ಕುರಿತಂತೆ ಮಾಹಿತಿ ನೀಡಿದ ಅವರು, ಈಡಿಸ್ ಈಜಿಪ್ಟಿ ಎಂಬ ಸೊಳ್ಳೆಯ ಕಡಿತದಿಂದ ಉಂಟಾಗುವ ಡೆಂಗಿ ಜ್ವರಕ್ಕೆ ನಿರ್ದಿಷ್ಟ ಔಷಧ ಇಲ್ಲ. ಹೀಗಾಗಿ, ಡೆಂಗಿ ಜ್ವರ ಕಾಣಿಸಿಕೊಳ್ಳುವುದಕ್ಕೂ ಮುನ್ನವೇ ಮುಂಜಾಗ್ರತೆ ವಹಿಸುವುದು ಅತ್ಯಗತ್ಯ ಎಂದರು.
ಬೆಳಿಗ್ಗೆ ಸಮಯದಲ್ಲಿ ಸೊಳ್ಳೆಯು ಕಚ್ಚಿ ನಂತರದ 15 ದಿನಗಳಲ್ಲಿ ಕಾಣಿಸಿಕೊಳ್ಳುವ ಮಾಂಸಖಂಡಗಳಲ್ಲಿ ನೋವು, ಕೀಲುನೋವು, ಜ್ವರ ಸೇರಿ ಇನ್ನಿತರ ಆರೋಗ್ಯ ಸಮಸ್ಯೆಗಳು ಡೆಂಗಿ ರೋಗದ ಲಕ್ಷಣಗಳಾಗಿವೆ.
ಮನೆಯ ಒಳಗಿನ ನೀರಿನ ಸಂಗ್ರಹ ತೊಟ್ಟಿಗಳು, ಡ್ರಮ್‌ಗಳಲ್ಲಿ ಸೊಳ್ಳೆಗಳು ಸಂತಾನೋತ್ಪತ್ತಿ ನಡೆಸಲು ಅವಕಾಶವಾಗದಂತೆ ಮತ್ತು ಮನೆಯ ಹೊರಗೆ ನೀರು ಶೇಖರಣೆಯಾಗದಂತೆ ಎಚ್ಚರ ವಹಿಸಬೇಕು ಎಂದರು.
ಮುಖ್ಯ ಶಿಕ್ಷಕಿ ಎ.ಸಿ.ಶೈಲಜಾ, ಎಚ್.ಆರ್.ಗಾಯತ್ರಿ, ಸಹ ಶಿಕ್ಷಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.