ಗಂಡಸಿ: ಗ್ರಾಮ ದೇವತೆಗಳಾದ ಉಡುಸಲಮ್ಮ, ಸೋಮೇಶ್ವರಸ್ವಾಮಿ, ಬೀರಲಿಂಗೇಶ್ವರಸ್ವಾಮಿ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಎಚ್.ಡಿ. ದೇವೇಗೌಡರ 93ನೇ ಜನ್ಮದಿನವನ್ನು ಶನಿವಾರ ರಾತ್ರಿ ಹೋಬಳಿಯ ಆಲದಹಳ್ಳಿ ಗ್ರಾಮದಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು.
ಕೇಕ್ ಕತ್ತರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜೆ.ಡಿ.ಎಸ್. ಮುಖಂಡ ಎನ್.ಆರ್. ಸಂತೋಷ್, ಮಣ್ಣಿನ ಮಗ ದೇವೇಗೌಡರು ದೇಶದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಕರ್ನಾಟಕ ಮಾತ್ರವಲ್ಲದೇ ರಾಷ್ಟ್ರಮಟ್ಟದಲ್ಲೂ ನೀರಾವರಿ ಸಮಸ್ಯೆಗಳನ್ನು ಪರಿಹರಿಸಿದ್ದಾರೆ. ಹಳ್ಳಿಯ ಕನ್ನಡಿಗ, ರೈತರ ಮಣ್ಣಿನ ಮಕ್ಕಳು ಸಹ ಪ್ರಧಾನಿ ಹುದ್ದೆ ನಿಭಾಯಿಸಬಲ್ಲರು ಎಂಬುದನ್ನು ತೋರಿಸಿದ್ದಾರೆ. ದೇಶ ಕಂಡ ಮುತ್ಸದ್ದಿ ರಾಜಕಾರಣಿ ದೇವೇಗೌಡರು ಆರೋಗ್ಯವಂತರಾಗಿ ಬಾಳಿ ಬದುಕಿ, ಯುವ ನಾಯಕರಿಗೆ ಮಾರ್ಗದರ್ಶನ ನೀಡಿ ಆಶೀರ್ವದಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.
ಜೆ.ಡಿ.ಎಸ್. ಮುಖಂಡರಾದ ಹೊಸೂರು ಗಂಗಾಧರ್, ಹುಲ್ಲೆಕೆರೆ ಕುಮಾರ್, ವಕೀಲ ದೇವರಾಜು, ಕೊಂಡೆನಾಳು ವಿಜಯ್, ಬಸವರಾಜು, ನಾಗರಹಳ್ಳಿ ಮಂಜು, ಗಂಡಸಿ ಮುರುಳಿ, ಆಲದಳ್ಳಿ ಪುಟ್ಟರಾಜ್ ಮತ್ತು ಜೆ.ಡಿ.ಎಸ್ ಕಾರ್ಯಕರ್ತರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.