ADVERTISEMENT

ಆರ್‌ಐ ಸಮ್ಮುಖದಲ್ಲಿ ರಸ್ತೆ ಒತ್ತುವರಿ ತೆರವು

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2020, 2:27 IST
Last Updated 26 ಸೆಪ್ಟೆಂಬರ್ 2020, 2:27 IST
ಬೇಲೂರು ತಾಲ್ಲೂಕಿನ ಬಕ್ರವಳ್ಳಿ ಗ್ರಾಮಕ್ಕೆ ತೆರಳುವ ನಕಾಶೆ ದಾರಿ ಒತ್ತುವರಿಯನ್ನು ಅಧಿಕಾರಿಗಳ ಸಮ್ಮುಖದಲ್ಲಿ ತೆರವು ಮಾಡಲಾಯಿತು (ಎಡಚಿತ್ರ). ರಸ್ತೆ ಒತ್ತುವರಿ ತೆರವು ಮಾಡುವ ವೇಳೆ ಅಧಿಕಾರಿಗಳ ಜೊತೆಗೆ ಗ್ರಾಮಸ್ಥರು ಚರ್ಚೆ ನಡೆಸಿದರು
ಬೇಲೂರು ತಾಲ್ಲೂಕಿನ ಬಕ್ರವಳ್ಳಿ ಗ್ರಾಮಕ್ಕೆ ತೆರಳುವ ನಕಾಶೆ ದಾರಿ ಒತ್ತುವರಿಯನ್ನು ಅಧಿಕಾರಿಗಳ ಸಮ್ಮುಖದಲ್ಲಿ ತೆರವು ಮಾಡಲಾಯಿತು (ಎಡಚಿತ್ರ). ರಸ್ತೆ ಒತ್ತುವರಿ ತೆರವು ಮಾಡುವ ವೇಳೆ ಅಧಿಕಾರಿಗಳ ಜೊತೆಗೆ ಗ್ರಾಮಸ್ಥರು ಚರ್ಚೆ ನಡೆಸಿದರು   

ಬೇಲೂರು: ತಾಲ್ಲೂಕಿನ ಬಕ್ರವಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ನಕಾಶೆ ದಾರಿ ಒತ್ತುವರಿ ಮಾಡಿಕೊಂಡಿದ್ದನ್ನು ಬಿಕ್ಕೋಡು ಆರ್‌ಐ ಅಸ್ಲಂಭಾಷ ಮತ್ತು ಗ್ರಾಮ ಲೆಕ್ಕಾಧಿಕಾರಿ ಬಾಲರಾಜ್ ನೇತೃತ್ವದಲ್ಲಿ ಪೊಲೀಸರ ಬಂದೋ ಬಸ್ತ್ ನಲ್ಲಿ ತೆರವುಗೊಳಿಸಲಾಯಿತು.

ತಾಲ್ಲೂಕಿನ ಬಕ್ರವಳ್ಳಿ ಗ್ರಾಮಕ್ಕೆ ಚೌಡನಹಳ್ಳಿ, ಕರಡಗೋಡು ಮಾರ್ಗವಾಗಿ ಮತ್ತು ಬಿಕ್ಕೋಡು, ಚೊಕ್ಕನಹಳ್ಳಿ, ಕರಡಗೋಡು ಮಾರ್ಗವಾಗಿಸಂಪರ್ಕಿಸಲು ಇದ್ದ 2 ಕಿಮೀ ದೂರದ ಎಂಟುವರೆ ಅಡಿ ಅಗಲದ ರಸ್ತೆಯನ್ನು ಅಕ್ಕಪಕ್ಕದ ಜಮೀನಿನವರು ಒತ್ತುವರಿ ಮಾಡಿದ್ದರಿಂದ ಬಕ್ರವಳ್ಳಿ ಗ್ರಾಮಸ್ಥರು 6 ಕಿ.ಮೀ ಸುತ್ತಾಡಿ ಸಂಚರಿಸಿ ತಮ್ಮ ಗ್ರಾಮವನ್ನು ಮುಟ್ಟ ಬೇಕಿತ್ತು. ಸುಮಾರು ಇಪ್ಪತ್ತು ವರ್ಷದಿಂದ ಈ ಸಮಸ್ಯೆಯನ್ನು ಗ್ರಾಮಸ್ಥರು ಅನುಭವಿಸುತ್ತಿದ್ದರು.

ನಂತರ ಈ ಸಮಸ್ಯೆ ನ್ಯಾಯಾಲಯಾದಮೆಟ್ಟಿಲೇರಿ ನ್ಯಾಯಲಯ ನಕಾಶೆ ದಾರಿಯನ್ನು ತೆರವುಗೊಳಿಸಲು ಆದೇಶಿಸಿತ್ತು. ಆದರೆ, ಒತ್ತುವರಿದಾರಾರು ರಸ್ತೆ ಬಿಟ್ಟುಕೊಡದ ಕಾರಣ ಬಕ್ರವಳ್ಳಿ ಗ್ರಾಮದ ಹಾಲಯ್ಯ, ಸದಾನಂದ ಮುಂತಾದವರು ಉಪವಿಭಾಗಾಧಿಕಾರಿ, ತಹಶೀಲ್ದಾರ್ ಅವರಿಗೆ ಮನವಿ ಮಾಡಿದರಿಂದ ಅವರ ಆದೇಶದ ಮೇರೆಗೆ ಬಿಕ್ಕೋಡು ಆರ್.ಐ, ಮತ್ತು ಗ್ರಾಮ ಲೆಕ್ಕಾಧಿಕಾರಿ ಸ್ಥಳಕ್ಕೆ ತೆರಳಿ ಒತ್ತವರಿಯಾಗಿದ್ದ ರಸ್ತೆಯನ್ನು ಜೆಸಿಬಿ ಯಂತ್ರದ ಮೂಲಕ ತೆರವು ಮಾಡಿದರು.

ADVERTISEMENT

’ಬಹಳ ಹಿಂದಿನಿಂದಲೂ ನಮ್ಮ ಗ್ರಾಮಕ್ಕೆ ಚೌಡನಹಳ್ಳಿ, ಕರಡಗೋಡು ಮಾರ್ಗವಾಗಿ ನಕಾಶೆ ದಾರಿ ಇದ್ದು ಕಾಲಕ್ರಮೇಣ ರಸ್ತೆಯ ಅಕ್ಕ-ಪಕ್ಕದವರು ರಸ್ತೆಯನ್ನು ಒತ್ತುವರಿ ಮಾಡಿಕೊಂಡುಓಡಾಡಲು ದಾರಿ ಇಲ್ಲದಂತೆ ಮಾಡಿದ್ದರು. ಈಗ ಒತ್ತುವರಿ ಜಾಗವನ್ನು ತೆರವುಗೊಳಿಸಿ ರಸ್ತೆ ನಿರ್ಮಿಸುತ್ತಿರುವುದರಿಂದ ನಮ್ಮ ಗ್ರಾಮದವರು ಇಷ್ಟುದಿನ ಪಾಳು ಬಿಟ್ಟಿದ ಜಮೀನುಗಳನ್ನು ಉಳುಮೆ ಮಾಡಬಹುದಾಗಿದೆ. ಸುತ್ತಿಬಳಸಿ ಊರನ್ನು ಸೇರುವ ಕಷ್ಟ ತಪ್ಪಿದೆ. ಸುಮಾರು 500 ಕುಟುಂಬಗಳಿಗೆ ಅನುಕೂಲವಾಗುತ್ತಿದೆ ಹಾಗೂ ಚಂದಪುರ, ಮೊಗಸವಾರ, ಕುಶಾವರ ಗ್ರಾಮದವರಿಗೂ ಅನುಕೂಲವಾಗುತ್ತದೆ’ ಎಂದು ಬಕ್ರವಳ್ಳಿ ಗ್ರಾಮಸ್ಥರಾದ ಹಾಲಯ್ಯ ಮತ್ತು ಸದಾನಂದ ತಿಳಿಸಿದರು.

ಈ ಸಂದರ್ಭದಲ್ಲಿ ಕುಶಾವರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕುಮಾರಸ್ವಾಮಿ, ಎಎಸ್‍ಐ ದೇವಯ್ಯ, ಬಕ್ರವಳ್ಳಿ ಗ್ರಾಮಸ್ಥರಾದ
ಬಸವರಾಜು, ಪರಮೇಶ್, ಧರ್ಮೇಶ, ಬಿರಯ್ಯ, ಮಂಜಯ್ಯ ಹಾಗೂ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.