ADVERTISEMENT

ಹೊಳೆನರಸೀಪುರ | ಗೃಹ ರಕ್ಷಕರಿಂದ ವನಮಹೋತ್ಸವ

​ಪ್ರಜಾವಾಣಿ ವಾರ್ತೆ
Published 11 ಮೇ 2025, 13:59 IST
Last Updated 11 ಮೇ 2025, 13:59 IST
ಹೊಳೆನರಸೀಪುರ ಮಲ್ಲಪ್ಪನಹಳ್ಳಿ ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ಗೃಹರಕ್ಷಕ ದಳ ಪ್ಲಾಟೂನ್ ಕಮಾಂಡರ್ ಪ್ರದೀಪ್ ನೇತೃತ್ವದಲ್ಲಿ ಭಾನುವಾರ ಗಿಡಗಳನ್ನು ನೆಟ್ಟರು. ಕಾಂಗ್ರೆಸ್‌ ಮುಖಂಡ ಡೊನಾಲ್ಡ್ ರಂಗಸ್ವಾಮಿ, ಗೃಹ ರಕ್ಷಕರಾದ ನರಸಿಂಹಮೂರ್ತಿ, ವಸಂತ, ಬಾಬು, ರವಿಕಿರಣ ಭಾಗವಹಿಸಿದ್ದರು
ಹೊಳೆನರಸೀಪುರ ಮಲ್ಲಪ್ಪನಹಳ್ಳಿ ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ಗೃಹರಕ್ಷಕ ದಳ ಪ್ಲಾಟೂನ್ ಕಮಾಂಡರ್ ಪ್ರದೀಪ್ ನೇತೃತ್ವದಲ್ಲಿ ಭಾನುವಾರ ಗಿಡಗಳನ್ನು ನೆಟ್ಟರು. ಕಾಂಗ್ರೆಸ್‌ ಮುಖಂಡ ಡೊನಾಲ್ಡ್ ರಂಗಸ್ವಾಮಿ, ಗೃಹ ರಕ್ಷಕರಾದ ನರಸಿಂಹಮೂರ್ತಿ, ವಸಂತ, ಬಾಬು, ರವಿಕಿರಣ ಭಾಗವಹಿಸಿದ್ದರು   

ಹೊಳೆನರಸೀಪುರ: ಇತ್ತೀಚಿನ ಕೆಲವು ವರ್ಷಗಳಿಂದ ಕಾಲ ಕಾಲಕ್ಕೆ ಮಳೆ ಆಗುತ್ತಿಲ್ಲ. ಯಾವಾಗಲೂ ಬೇಸಿಗೆಯಲ್ಲಿ ಹೆಚ್ಚೆಂದರೆ ಹಾಸನ ಜಿಲ್ಲೆಯಲ್ಲಿ ಉಷ್ಣಾಂಶ 22 ರಿಂದ 24 ಡಿಗ್ರಿ ಒಳಗೆ ಇರುತ್ತಿತ್ತು. ಆದರೆ ಕಳೆದ 3 ವರ್ಷಗಳಿಂದ ಉಷ್ಣಾಂಶ 30 ಡಿಗ್ರಿಗಿಂತ ಮೇಲೇರುತ್ತಿರುವುದಕ್ಕೆ ಗಿಡಮರಗಳ ನಾಶದ ಕಾರಣ ಆಗುತ್ತಿದ್ದೆ. ಆದ್ದರಿಂದ ಪ್ರತಿಯೊಬ್ಬರೂ ಸಸಿಗಳನ್ನು ನೆಟ್ಟು ಬೆಳೆಸಿ ಎಂದು ಗೃಹರಕ್ಷಕ ದಳದ ಪ್ಲಾಟೂನ್ ಕಮಾಂಡರ್ ಪ್ರದೀಪ್ ವಿನಂತಿಸಿದರು.

ಭಾನುವಾರ ಪಟ್ಟಣದ ಮಲ್ಲಪ್ಪನಹಳ್ಳಿ ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ಗಿಡ ನೆಟ್ಟು ವನಮಹೋತ್ಸವಕ್ಕೆ ಚಾಲನೆ ನೀಡಿ ಸಕಾಲದಲ್ಲಿ ಮಳೆ ಆಗದೆ ಒಮ್ಮೊಮ್ಮೆ ಅತೀವೃಷ್ಟಿ ಮತ್ತೊಮ್ಮೆ ಅನಾವೃಷ್ಟಿಯಾಗಿ ಹಾನಿ ಆಗುತ್ತಿದೆ. ಇಂತಹ ಪ್ರಕೃತಿ ವಿಕೋಪಗಳನ್ನು ತಪ್ಪಿಸಲು ಸಸಿಗಳನ್ನು ನೆಟ್ಟಿ ಬೆಳೆಸಿ. ಇತ್ತೀಚಿನ ವರ್ಷಗಳಲ್ಲಿ ಗಿಡ ನೆಡುವ ಕಾರ್ಯಕ್ರಮಗಳು ನಡೆಯುತ್ತಿದ್ದರೂ ಸಹ ಗಿಡ ಮರಗಳ ಸಂಖ್ಯೆ ಏರಿಕೆಯಾಗಿಲ್ಲ. ಆದ್ದರಿಂದ ಗಿಡ ನೆಟ್ಟು ಫೋಟೊ ತೆಗೆಸಿಕೊಂಡು, ನೆಟ್ಟ ಗಿಡಗಳನ್ನು ಮರೆಯದೆ ಅದನ್ನು ಬೆಳೆಸುವ ಜವಾಬ್ದಾರಿಯ ಸಂಕಲ್ಪ ಮಾಡೋಣ ಎಂದು ಹುರಿದುಂಬಿಸಿದರು. ಕಾಂಗ್ರೆಸ್ ಮುಖಂಡ ಡೊನಾಲ್ಡ್ ರಂಗಸ್ವಾಮಿ, ಗೃಹರಕ್ಷಕರಾದ ನರಸಿಂಹಮೂರ್ತಿ, ವಸಂತ, ಬಾಬು, ರವಿಕಿರಣ, ಎಚ್.ಡಿ.ರವಿ, ಕೆ.ಆರ್.ಸುರೇಶ್, ವಸಂತಕುಮಾರ, ಧ್ರುವಕುಮಾರ, ಸುರೇಶ್, ಸುದೀಪ, ಜಿ.ಕೆ.ರವಿಕುಮಾರ್, ಜಯಚಂದ್ರ ಗಿಡ ನೆಡುವ ಕಾರ್ಯದಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT