ಹಿರೀಸಾವೆ: ಇಲ್ಲಿನ ಗ್ರಾಮ ದೇವತೆ ಚೌಡೇಶ್ವರಿ ದೇವರಿಗೆ ‘ನಮ್ಮ ಊರು ಹಬ್ಬ’ದ ಪ್ರಯುಕ್ತ ಮಂಗಳವಾರ ವಿಶೇಷ ಪೂಜೆಗಳನ್ನು ನೆರವೇರಿಸಲಾಯಿತು. ಬುಧವಾರ ದೇವಿಯ ರಥೋತ್ಸವ ಮಧ್ಯಾಹ್ನ 1.30ಕ್ಕೆ ನಡೆಯಲಿದೆ.
ಗ್ರಾಮದ ಹೊರಗೆ, ಕೆರೆ ಏರಿಯಲ್ಲಿ ಇರುವ ದೇವರ ಮೂಲ ಸ್ಥಾನದಲ್ಲಿ ದೇವಿಯ ಭಕ್ತರು ಮತ್ತು ಹಿರೀಸಾವೆಯ ದೊಡ್ಡ ಮನೆತನದವರು ಹಲವು ಪೂಜೆಗಳನ್ನು ಏರ್ಪಡಿಸಿದ್ದರು. ದೇವರ ಮನೆತನದವರು ದೇವಸ್ಥಾನದ ಆವರಣದಲ್ಲಿ ಮಡೆಯನ್ನು ಮಾಡಿದರು. ಗ್ರಾಮಸ್ಥರು ಮಂಗಳವಾರ ರಥಕ್ಕೆ ಕಳಸ ಹಾಕಿ ಎಲ್ಲ ಸಿದ್ಧತೆಗಳನ್ನು ಪೂರ್ಣಗೊಳಿಸಿದರು. ಗ್ರಾಮವನ್ನು ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿದೆ.
ಭಾನುವಾರ ಮತ್ತು ಸೋಮವಾರ ದೇವಿಯ ಚಿಕ್ಕ ರಥೋತ್ಸವ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.