ADVERTISEMENT

ಚನ್ನರಾಯಪಟ್ಟಣ: ಅಕ್ರಮ ಕಸಾಯಿಖಾನೆ, ಶೆಡ್ ತೆರವು

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2024, 13:03 IST
Last Updated 23 ಏಪ್ರಿಲ್ 2024, 13:03 IST
ಚನ್ನರಾಯಪಟ್ಟಣದ ರೋಷನ್ ನಗರದಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಕೊಂದು ಮಾಂಸ  ಮಾಡುತ್ತಿದ್ದ ಶೆಡ್ ಅನ್ನು ಮಂಗಳವಾರ ಪುರಸಭೆ ಸಿಬ್ಬಂದಿ ತೆರವು ಮಾಡಿದರು.
ಚನ್ನರಾಯಪಟ್ಟಣದ ರೋಷನ್ ನಗರದಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಕೊಂದು ಮಾಂಸ  ಮಾಡುತ್ತಿದ್ದ ಶೆಡ್ ಅನ್ನು ಮಂಗಳವಾರ ಪುರಸಭೆ ಸಿಬ್ಬಂದಿ ತೆರವು ಮಾಡಿದರು.   

ಚನ್ನರಾಯಪಟ್ಟಣ: ಪಟ್ಟಣದ ರೋಷನ್ ನಗರದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಜಾನುವಾರು ಕಸಾಯಿಖಾನೆ (ವಧಾಗೃಹ) ಶೆಡ್ ಅನ್ನು ಮಂಗಳವಾರ ಪುರಸಭೆ ತೆರವುಗೊಳಿಸಿತು.

‘ಪುರಸಭೆಯ ಸಿಬ್ಬಂದಿ ಜೆಸಿಬಿ ಮೂಲಕ ಶೆಡ್‍ಅನ್ನು ತೆರವುಮಾಡಿದರು. ಆರೋಪಿ ಅಬ್ದುಲ್ ಹಕ್ ಎಂಬಾತನನ್ನು ರಾಯಚೂರು ಜಿಲ್ಲೆಗೆ ಗಡಿಪಾರು ಮಾಡಲಾಗಿದೆ. ಆರೋಪಿಗಳ ವಿರುದ್ದ 5 ಸಲ ಪ್ರಕರಣ ದಾಖಲಾಗಿದ್ದರೂ ಜಾನುವಾರುಗಳ ವಧೆ ನಿರಂತರ ನಡೆಯುತ್ತಿತ್ತು’ ಎಂದು ಸ್ಥಳದಲ್ಲಿದ್ದ ತಹಶೀಲ್ದಾರ್ ಬಿ.ಎಂ. ಗೋವಿಂದರಾಜು ತಿಳಿಸಿದರು.

‘ವಧಾಗೃಹದ ಶೆಡ್‌ನಿಂದ  ಜಾನುವಾರುಗಳ ರಕ್ತ ಮತ್ತು ತ್ಯಾಜ್ಯ ಪಕ್ಕದಲ್ಲಿರುವ ಚರಂಡಿ ಮೂಲಕ ಕೆರೆ ಸೇರುತ್ತಿತ್ತು. ದುರ್ವಾಸನೆ ಮತ್ತು ಜಲಮಾಲಿನ್ಯ ಉಂಟಾಗಿ ರೋಗ ಹರಡುತ್ತಿತ್ತು ಎಂದು  ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ನೀಡಿತ್ತು. ಜಿಲ್ಲಾಧಿಕಾರಿ ಮತ್ತು ಉಪ ವಿಭಾಗಾಧಿಕಾರಿ ಆದೇಶದ ಮೇರೆಗೆ ಶೆಡ್ ಅನ್ನು ತೆರವುಗೊಳಸಲಾಗಿದೆ’ ಎಂದು ಅವರು ತಿಳಿಸಿದರು.

ಪುರಸಭೆಯ ಮುಖ್ಯಾಧಿಕಾರಿ ಕೆ.ಎನ್. ಹೇಮಂತ್, ಪಶು ಇಲಾಖೆಯ ಸಹಾಯಕ ನಿರ್ದೇಶಕ ಡಾ. ಸೋಮಶೇಖರ್, ವಿಸ್ತರಣಾಧಿಕಾರಿ ಡಾ. ಆನಂದ್ ಕುಮಾರ್, ಇನ್‍ಸ್ಪೆಕ್ಟರ್ ರಘುಪತಿ, ಪಿಎಸ್‌ಐ ಭರತ್‍ರೆಡ್ಡಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT