ADVERTISEMENT

ಪಿರಿಯಾಪಟ್ಟಣದಮ್ಮ ದೇವಿ ವಿಗ್ರಹ ಪ್ರತಿಷ್ಠಾಪನೆ

​ಪ್ರಜಾವಾಣಿ ವಾರ್ತೆ
Published 6 ಮೇ 2025, 12:19 IST
Last Updated 6 ಮೇ 2025, 12:19 IST
ಹಿರೀಸಾವೆ ಹೋಬಳಿಯ ಯಾಳನಹಳ್ಳಿಯಲ್ಲಿ ಮಂಗಳವಾರ ಪಿರಿಯಾಪಟ್ಟಣದಮ್ಮ ದೇವಿಯ ನೂತನ ವಿಗ್ರಹ ಪ್ರತಿಷ್ಠಾಪನೆ ಪ್ರಯುಕ್ತ ಭಕ್ತರು ಹೋಮ ನಡೆಸಿದರು
ಹಿರೀಸಾವೆ ಹೋಬಳಿಯ ಯಾಳನಹಳ್ಳಿಯಲ್ಲಿ ಮಂಗಳವಾರ ಪಿರಿಯಾಪಟ್ಟಣದಮ್ಮ ದೇವಿಯ ನೂತನ ವಿಗ್ರಹ ಪ್ರತಿಷ್ಠಾಪನೆ ಪ್ರಯುಕ್ತ ಭಕ್ತರು ಹೋಮ ನಡೆಸಿದರು   

ಹಿರೀಸಾವೆ: ಹೋಬಳಿಯ ಯಾಳನಹಳ್ಳಿ ಗ್ರಾಮದಲ್ಲಿ ಮಂಗಳವಾರ ಪಿರಿಯಾಪಟ್ಟಣದಮ್ಮ ದೇವಿಯ ನೂತನ ವಿಗ್ರಹ ಪ್ರತಿಷ್ಠಾಪನೆ ಕಾರ್ಯಕ್ರಮವು ಭಕ್ತರು ಸಮ್ಮುಖದಲ್ಲಿ ನಡೆಯಿತು.

ಬೆಳಿಗ್ಗೆ ದೃಷ್ಠಿ ದೋಷ ನಿವಾರಣೆ, ಅಷ್ಠಬಲ ಶಾಂತಿ, ಅಭಿಷೇಕ ಸೇರಿದಂತೆ ಹಲವು ಪೂಜೆಗಳು ಜರುಗಿದವು. ದುರ್ಗಾ ಮತ್ತು ಕಾಳ ಹೋಮಗಳ ಪೂರ್ಣಾಹುತಿ ನಡೆಯಿತು. ಸಂಜೆ ಹೊಸಕೊಪ್ಪಲು ಪಿರಿಯಾಪಟ್ಟಣದಮ್ಮ ದೇವಿಯ ಅಡ್ಡಪಲ್ಲಕ್ಕಿ ಉತ್ಸವ ಪ್ರಾರಂಭವಾಗಿ, ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿತು. ಭಕ್ತರು ಹರಕೆ ಮತ್ತು ಮಡಿಲಕ್ಕಿಯನ್ನು ಅರ್ಪಿಸಿದರು.

ದೇವಿಯ ಪ್ರತಿಷ್ಠಾಪನೆ ಪ್ರಯುಕ್ತ ಸೋಮವಾರ ಸಂಜೆ ಗಂಗಾಪೂಜೆ, ದೇವಾಲಯ ಬಾಗಿಲ ಪೂಜೆ ನಡೆದವು. ರಾತ್ರಿ ಗಣಪತಿ, ನವಗ್ರಹ, ವಾಸ್ತು, ದುರ್ಗಾ ಹೋಮಗಳು ಜರುಗಿದವು. ಯಾಳನಹಳ್ಳಿ, ಕಬ್ಬಿನಕೆರೆ, ಮೇಟಿಕೆರೆ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಭಾಗವಹಿಸಿದ್ದರು.

ADVERTISEMENT

ಭಕ್ತರ ಸಹಕಾರದಿಂದ ಗ್ರಾಮಸ್ಥರು ಹಾಳುಕೋಟೆ ಮಾರಮ್ಮ, ಮುಳುಕಟ್ಟಮ್ಮ, ಲಕ್ಷ್ಮಿದೇವಿ, ಹನುಮಂತರಾಯ ದೇವಾಲಯಗಳನ್ನು ನಿರ್ಮಾಣ ಮಾಡಿದ್ದರು. ವಾರದಲ್ಲಿ ಈ ಎಲ್ಲಾ ದೇವಾಲಯಗಳ ಉದ್ಘಾಟನೆ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.