ADVERTISEMENT

ರುದ್ರಪಟ್ಟಣದಲ್ಲಿ ಸಂಗೀತೋತ್ಸವ 21ರಿಂದ

​ಪ್ರಜಾವಾಣಿ ವಾರ್ತೆ
Published 18 ಮೇ 2025, 13:16 IST
Last Updated 18 ಮೇ 2025, 13:16 IST
ಸಂಗೀತ ವಿದ್ವಾಂಸ ಆರ್.ಕೆ. ಪದ್ಮನಾಭ್
ಸಂಗೀತ ವಿದ್ವಾಂಸ ಆರ್.ಕೆ. ಪದ್ಮನಾಭ್   

ಅರಕಲಗೂಡು: ತಾಲ್ಲೂಕಿನ ಸಂಗೀತ ಗ್ರಾಮ ರುದ್ರಪಟ್ಟಣದಲ್ಲಿ ಮೇ 21 ರಿಂದ 25ರವರೆಗೆ 22ನೇ ವಾರ್ಷಿಕ ಸಂಗೀತೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ.

ರುದ್ರಪಟ್ಟಣ ಸಂಗೀತೋತ್ಸವ ಸಮಿತಿ ಟ್ರಸ್ಟ್ ಹಮ್ಮಿಕೊಂಡಿರುವ ಕಾರ್ಯಕ್ರಮವು ಮೇ 21ರಂದು ಬೆಳಿಗ್ಗೆ 10.15ಕ್ಕೆ ಉದ್ಘಾಟನೆಯಾಗಲಿದೆ.

ಬಳಿಕ ಮಧುರ ಪ್ರಶಾಂತ್.ಕೆ.ಕೆ. ವೈಭವಿ, ಶರಣ್ಯ ಎಸ್ ಆಚಾರ್ ಅವರಿಂದ ಗಾಯನ, ಎ.ಆರ್. ಕೀರ್ತನ, ಅನನ್ಯ ಮತ್ತು ಅಭಿಜ್ಞಾ ಅವರಿಂದ ಭರತನಾಟ್ಯ, ಅತ್ರಿ ಕೌಶಿಕ್ ಅವರಿಂದ ಸಂಗೀತ ಸಂಪ್ರದಾಯ ಪ್ರದರ್ಶಿನಿ ಪ್ರವಚನ ನಡೆಯಲಿದೆ.

ADVERTISEMENT

ಸಂಜೆ 4ಕ್ಕೆ ಲಕ್ಷೀರಾಮ್ ಕಲಾಶಾಲೆಯ ಲಕ್ಷೀಕೊದಂಡರಾವ್ ನೇತೃತ್ವದಲ್ಲಿ ಗೋಷ್ಠಿ ಗಾಯನ. 5ಕ್ಕೆ ಎಂ.ಎಸ್. ಪ್ರಮುಖ್, ಕೊಳಲು, ಕೃತಿಕ್ ಕೌಶಿಕ್ ಪಿಟಿಲು, ವಿನಯ್ ನಾಗರಾಜನ್ ಮೃದಂಗ, ಡಿ.ವಿ. ಪ್ರಸನ್ನಕುಮಾರ್ ಮೋರ್ಚಿಂಗ್ ಸಾಥ್ ನೀಡುವರು.

6.15ಕ್ಕೆ ವಿ. ವೈಷ್ಣವಿ ದತ್ತ ಅವರಿಂದ ಗಾಯನ. 7.30ಕ್ಕೆ ವಿ. ಕೃತಿಕಾ ಶ್ರೀನಿವಾಸನ್ ರಿಂದ ಗಾಯನ ನಡೆಯಲಿದೆ. ಮೇ 22 ಬೆಳಿಗ್ಗೆ 10.30ಕ್ಕೆ ಎಂ.ಎಸ್.ದೀಪಕ್ ಗಾಯನ, ಸಂಜೆ 4.15ಕ್ಕೆ ಪ್ರಶಾಂತ್ ರುದ್ರಪಟ್ಟಣ, ವಿ. ಪ್ರಮೋದ್ ರುದ್ರಪಟ್ಟಣ ಯುಗಳ ವೀಣಾವಾದನ, 6.45ಕ್ಕೆ ಧನ್ಯ ದಿನೇಶ್ ರುದ್ರಪಟ್ಟಣ ಗಾಯನ.

ಮೇ. 23 ಬೆಳಿಗ್ಗೆ ಚಂದನ್ ಕುಮಾರ್ ಕೊಳಲುವಾದನ, ಸಂಜೆ 4.15ಕ್ಕೆ ಕಾರ್ತಿಕ್ ಮತ್ತೂರು ಅವರಿಂದ ಗಾಯನ. 6.45 ಕ್ಕೆ ವಿಷ್ಣುದೇವ್ ನಂಬೂದಿರಿ ಅವರಿಂದ ಗಾಯನ. ಮೇ 24 ಶನಿವಾರ ಬೆಳಿಗ್ಗೆ 6.45 ಕಾವೇರಿ ಪೂಜೆ, 10.30ಕ್ಕೆ ಅಕ್ಷತಾ ರುದ್ರಪಟ್ಟಣ ಗಾಯನ.

ಮಧ್ಯಾಹ್ನ 3-30 ಕ್ಕೆ ರುದ್ರಪಟ್ಟಣದ ಪರಂಪರೆ ಹಿರಿಯ ವಿದ್ವಾಂಸರು ಹಾಗೂ ವರ್ಧಿಷ್ಣು ಕಲಾವಿದರಿಗೆ ಬಿರುದು ಪ್ರಧಾನ ಹಾಗೂ ಗೌರವ ಸಮರ್ಪಣೆ. ಸಂಜೆ 7.30ಕ್ಕೆ ಮೆರವಣಿಗೆ ಹಾಗೂ ಪ್ರಸಿದ್ದ ನಟ ಹಾಗೂ ಸಾಹಿತಿ ಶ್ರೀನಿವಾಸ ಪ್ರಭು ಅವರಿಗೆ ನಾಚಾರಮ್ಮ ಪ್ರಶಸ್ತಿ ಹಾಗೂ ನಟನ ಕಲಾ ಬ್ಯಾಂಕಿನ ಸಿಇಒ ಎಚ್. ಕೃಷ್ಣನ್ ಪಾಲ್ಗೊಳ್ಳುವರು.

ಮೇ. 25 ಬೆಳಿಗ್ಗೆ 7.45ಕ್ಕೆ ತ್ಯಾಗರಾಜರ ಪಂಚಕೃತಿಗಳ ಗೋಷ್ಠಿ ಗಾಯನ, 9ಕ್ಕೆ ರಥೋತ್ಸವ ನಾಮ ಸಂಕೀರ್ತನೆ. 10.30ಕ್ಕೆ ಡಾ. ಮೈಸೂರು ಎಂ.ಮಂಜುನಾಥ್, ಹಾಗೂ ಮೈಸೂರು ಎಂ.ಸುಮಂತ್ ಅವರಿಂದ ಯುಗಳ ಪಿಟೀಲು ವಾದನ ನಡೆಯಲಿದೆ ಎಂದು ಕಾರ್ಯಕ್ರಮದ ಆಯೋಜಕ ಸಂಗೀತ ವಿದ್ವಾಂಸ ಡಾ ಅರ್.ಕೆ. ಪದ್ಮನಾಭ್ ತಿಳಿಸಿದ್ದಾರೆ.

ಅರಕಲಗೂಡು ತಾಲ್ಲೂಕು ರುದ್ರಪಟ್ಠಣದಲ್ಲಿ ನಿರ್ಮಿಸಿರುವ ತಂಬೂರಿ ಆಕಾರದ ಸಪ್ತಸ್ವರ ನಾದ ದೇವತಾ ಮಂದಿರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.