ADVERTISEMENT

ಸರ್ಕಾರದ ನಿರ್ಧಾರವಲ್ಲ: ಗೋಪಾಲಯ್ಯ

ಮುಸ್ಲಿಮರಿಗೆ ಮಾವಿನ ಹಣ್ಣು ಮಾರಾಟ ಮಾಡದಂತೆ ಅಭಿಯಾನ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2022, 15:32 IST
Last Updated 6 ಏಪ್ರಿಲ್ 2022, 15:32 IST

ಹಾಸನ: ‘ಮುಸ್ಲಿಮರಿಗೆ ಮಾವಿನ ಹಣ್ಣು ಮಾರಾಟ ಮಾಡಬಾರದೆಂಬ ಅಭಿಯಾನ ಸರ್ಕಾರದ ನಿರ್ಧಾರವಲ್ಲ’ ಎಂದು ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಸ್ಪಷ್ಟಪಡಿಸಿದರು.

‘ಒಂದೊಂದು ಪಕ್ಷದವರು ಒಂದೊಂದು ರೀತಿ ಹೇಳುತ್ತಿದ್ದಾರೆ. ಯಾವ ಗ್ರಾಹಕರಿಗೆ ಯಾರ ಬಳಿ ಇಷ್ಟ ಇದೆಯೋ ಅಲ್ಲಿಗೆ ಹೋಗಿ ಮಾವಿನಹಣ್ಣು ಖರೀದಿಸುತ್ತಾರೆ. ಅದಕ್ಕೆ ಯಾವುದೇ ನಿರ್ಬಂಧ ಇಲ್ಲ. ನಾವು ಹೇಳಿದರೂ, ಇನ್ನೊಂದು ಅಂಗಡಿಗೆ ಹೋಗುವುದಿಲ್ಲ. ಯಾವುದೇ ಕಾರಣಕ್ಕೂ ಇದಕ್ಕೆ ಸರ್ಕಾರದ ಕುಮ್ಮಕ್ಕು ಇಲ್ಲ. ಈ ವಿಚಾರವನ್ನು ಇಲ್ಲಿಗೆ ಬಿಡಬೇಕು’ ಎಂದು ‌ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಎಲ್ಲಾ ಸಮುದಾಯವದರು ಮಾವಿನಹಣ್ಣು ಬೆಳೆಯುತ್ತಾರೆ. ಮಾರುವವರೂ ಎಲ್ಲಾ ಸಮುದಾಯದವರೂ ಇದ್ದಾರೆ. ಒಳ್ಳೆಯ ಬೆಲೆ ಕೊಡುವವರಿಗೆ ರೈತರು ಮಾವಿನ ಹಣ್ಣು ಕೊಡುತ್ತಾರೆ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.