ಹಾಸನ: ದೇಶದ ಹಿರಿಮೆ ಸಾರುವ ದೇಶಭಕ್ತಿ ಗೀತೆಗಳಿಂದ ಅಗಾಧ ದೇಶಪ್ರೇಮ ಮೂಡುತ್ತದೆ. ನಾಡಿನ ಬಗ್ಗೆ ಅಭಿಮಾನ ಉಂಟು ಮಾಡುತ್ತದೆ ಎಂದು ಗೈಡ್ಸ್ ಆಯುಕ್ತೆ ಜಯಾ ರಮೇಶ್ ಅಭಿಪ್ರಾಯಪಟ್ಟರು.
ನಗರದಲ್ಲಿ ಶನಿವಾರ ಆಯೋಜಿಸಿದ್ದ ದೇಶಭಕ್ತಿ ಗೀತೆ ಗಾಯನ ಸ್ಪರ್ಧೆಯಲ್ಲಿ ಅವರು ಮಾತನಾಡಿದರು. ಸಂಸ್ಥೆ ಕಾರ್ಯದರ್ಶಿ ಬಿ.ಎಸ್. ವನಜಾಕ್ಷಿ ಮಾತನಾಡಿ, ಆಗಸ್ಟ್ 15 ಎಂದರೆ ಸ್ವಾತಂತ್ರ್ಯೋತ್ಸವ , ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುವ ಸಮಯಎಂದರು.
ಸ್ವಾತಂತ್ರ್ಯ ಹೋರಾಟದ ಶಕ್ತಿಯಾಗಿದ್ದ ದೇಶಭಕ್ತಿ ಗೀತೆಗಳನ್ನು ಸ್ಮರಿಸುತ್ತ, ರಚನಾಕಾರರಿಗೂ ಕೃತಜ್ಞತೆ ಸಲ್ಲಿಸಲು ಪ್ರತಿವರ್ಷ ಗೀತ ಗಾಯನ ಸ್ಪರ್ಧೆ ಆಯೋಜಿಸುತ್ತಿದ್ದೇವೆ. ಪ್ರಥಮ ಸ್ಥಾನ ಪಡೆದವರು ಜಿಲ್ಲಾ ಮಟ್ಟದ ಸ್ಪರ್ಧೆ, ಅಲ್ಲಿ ಪ್ರಥಮ ಸ್ಥಾನ ಗಳಿಸಿದವರು ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಬಹುದು ಎಂದರು.
20ಕ್ಕೂ ಹೆಚ್ಚು ಶಾಲೆಗಳಿಂದ ಬಂದಿದ್ದ 120 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ರೋವರ್ ಲೀಡರ್ ಗಿರೀಶ್, ಗ್ಯಾರೆಳ್ಳಿ ತಮ್ಮಯ್ಯ ಅಕಾಡೆಮಿಯ ಅರ್ಷಿಯ ತಬಸ್ಸುಮ್, ನಿಕಟಪೂರ್ವ ಜಿಲ್ಲಾ ಸಹಕಾರ್ಯದರ್ಶಿ ಎಚ್.ಜಿ. ಕಾಂಚನಮಾಲ, ಸಂತ ಫಿಲೋಮಿನಾ ಶಾಲೆಯ ಗೈಡ್ ಕ್ಯಾಪ್ಟನ್ ಧನಲಕ್ಷ್ಮಿ, ಗೈಡ್ ಕ್ಯಾಪ್ಟನ್ ಭಾಗ್ಯ, ಪ್ಲಾಕ್ ಲೀಡರ್ ಜೋವಿಟಾ, ರೇಂಜರ್ ಲೀಡರ್‌ಗಳಾದ ಅಶ್ವಿನಿ, ಸುನಿತಾ, ಪೋದಾರ್ ಇಂಟರ್ ನ್ಯಾಷನಲ್ ಶಾಲೆಯ ಸ್ಕೌಟ್ ಮಾಸ್ಟರ್, ನೂತನ್, ಹೆರಗು ಶಾಲೆಯ ಸ್ಕೌಟ್ ಮಾಸ್ಟರ್ ದೇವರಾಜು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.