ADVERTISEMENT

ಕೃಷಿ ಪತ್ತಿನ ಸಹಕಾರ ಸಂಘ: 6ನೇ ಬಾರಿಗೆ ಅಧ್ಯಕ್ಷರಾಗಿ ಎಸ್.ಕೆ.ಕೃಷ್ಣ ಆಯ್ಕೆ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2025, 14:17 IST
Last Updated 23 ಏಪ್ರಿಲ್ 2025, 14:17 IST
<div class="paragraphs"><p>ಕೊಣನೂರಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷ ಎಸ್.ಕೆ. ಕೃಷ್ಣ ಮತ್ತು ಉಪಾಧ್ಯಕ್ಷೆ ಮಂಜುಳಾ ಅವರನ್ನು ಬೆಂಬಲಿಗರು ಅಭಿನಂದಿಸಿದರು. ಜಿಲ್ಲಾ ಸಹಕಾರ ಬ್ಯಾಂಕ್ ನಿರ್ದೇಶಕ ಹೊನ್ನವಳ್ಳಿ ಸತೀಶ್ ಮತ್ತು ಸದಸ್ಯರು ಇದ್ದರು.</p></div>

ಕೊಣನೂರಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷ ಎಸ್.ಕೆ. ಕೃಷ್ಣ ಮತ್ತು ಉಪಾಧ್ಯಕ್ಷೆ ಮಂಜುಳಾ ಅವರನ್ನು ಬೆಂಬಲಿಗರು ಅಭಿನಂದಿಸಿದರು. ಜಿಲ್ಲಾ ಸಹಕಾರ ಬ್ಯಾಂಕ್ ನಿರ್ದೇಶಕ ಹೊನ್ನವಳ್ಳಿ ಸತೀಶ್ ಮತ್ತು ಸದಸ್ಯರು ಇದ್ದರು.

   

ಕೊಣನೂರು: ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಎಸ್.ಕೆ. ಕೃಷ್ಣ ಮತ್ತು ಉಪಾಧ್ಯಕ್ಷರಾಗಿ ಮಂಜುಳಾ ಆಯ್ಕೆಯಾದರು.

ಮಂಗಳವಾರ ಸಂಘದ ಆವರಣದಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಎಸ್.ಕೆ.ಕೃಷ್ಣ 7 ಮತಗಳನ್ನು ಮತ್ತು ಕೆ.ಆರ್.ಸುನಿಲ್ ಕುಮಾರ್ 6 ಮತಗಳನ್ನು ಪಡೆದರು. ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಕೆ.ಎನ್. ನಂಜುಂಡೇಗೌಡ 6 ಮತ್ತು ಬಿ.ಜೆ.ಮಂಜುಳಾ 7 ಮತಗಳನ್ನು ಪಡೆದರು.
ಚುನಾವಣಾಧಿಕಾರಿಯಾಗಿ ಡಿ.ಲೀಲಾ ಕಾರ್ಯನಿರ್ವಹಿಸಿದರು.

ADVERTISEMENT

ಬಳಿಕ ಮಾತನಾಡಿದ ನೂತನ ಅಧ್ಯಕ್ಷ ಎಸ್.ಕೆ.ಕೃಷ್ಣ, 6 ನೇ ಬಾರಿಗೆ ಅಧ್ಯಕ್ಷನಾಗಿ ಆಯ್ಕೆಯಾಗಲು ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಸಂಘದ ವತಿಯಿಂದ ಷೇರುದಾರರಿಗೆ ಹೆಚ್ಚು ಸಾಲ ನೀಡುವ ಉದ್ದೇಶವಿದ್ದು, ಸಂಘದ ಸದಸ್ಯರು ಮರಣ ಹೊಂದಿದಾಗ ಸಂಘದಿಂದ ನೀಡುತ್ತಿದ್ದ ₹3 ಸಾವಿರ ಅನ್ನು ₹5 ಸಾವಿರಕ್ಕೆ ಏರಿಸಲಾಗುವುದು ಎಂದರು.

ಸಂಘದ ವತಿಯಿಂದ ಶುದ್ಧ ಕುಡಿಯುವ ನೀರಿನ ಪ್ಯಾಕೇಜ್ ಘಟಕ, ಮನೆ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ವಿತರಣಾ ಕೇಂದ್ರ ಪ್ರಾರಂಭಿಸಿ, ಸಂಘಕ್ಕೆ ಹೆಚ್ಚಿನ ಆದಾಯ ತರುವುದು ಗುರಿಯಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.