ಅರಸೀಕೆರೆ: ತಾಲ್ಲೂಕಿನಲ್ಲಿ 3402 ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿಗಳಲ್ಲಿ 2,905 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ 85.39ರಷ್ಟು ಸಾಧನೆಯಾಗಿದೆ ಎಂದು ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ್‌ಕುಮಾರ್ ತಿಳಿಸಿದ್ದಾರೆ.
ಬಾಣಾವರದ ಸರ್ಕಾರಿ ಬಾಲಕಿಯರ ಜೂನಿಯರ್ ಕಾಲೇಜಿನ ವಿದ್ಯಾರ್ಥಿ ಅಂಜುಮ್ ಜೆಬಾ 622 ಅಂಕ, ಅರಸೀಕೆರೆಯ ತರಳಬಾಳು ಶಾಲೆಯ ಕೀರ್ತನಾ ಎ.ವಿ., ಹಾಗೂ ಎಸ್.ಎನ್.ಎಸ್. ಆಂಗ್ಲಶಾಲೆ ಡಿ.ಎಂ.ಕುರ್ಕೆಯ ವಿದ್ಯಾರ್ಥಿ ಸಹನಾ. ಎಸ್. ಈ ಮೂವರು ವಿದ್ಯಾರ್ಥಿನಿಯರು ತಲಾ 622 ಅಂಕಗಳನ್ನು ಪಡೆದಿದ್ದು, ಇದೇ ಶಾಲೆಯ ತೇಜಸ್ವಿನಿ ಕೆ.ಎಂ.621 ಅಂಕಗಳನ್ನು ಗಳಿಸಿದ್ದಾರೆ.
ಅರಸೀಕೆರೆ ತಾಲ್ಲೂಕಿಗೆ ಪ್ರಥಮ ಹಾಗೂ ದ್ವೀತೀಯ ಹಾಗೂ ತೃತೀಯ ಸ್ಥಾನ ಗಳಿಸಿದ್ದಾರೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.