ಹಾಸನ: ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಹಾಗೂ ಜಿಲ್ಲಾ ಘಟಕಗಳ ವತಿಯಿಂದ ನಗರದಲ್ಲಿ ನಡೆದ ರಾಜ್ಯಮಟ್ಟದ ಪತ್ರಕರ್ತರ ಕ್ರಿಕೆಟ್ ಟೂರ್ನಿಯಲ್ಲಿ ಹಾಸನ ತಂಡ ಪ್ರಥಮ ಬಹುಮಾನ ಪಡೆಯಿತು.
ಬೆಂಗಳೂರು ತಂಡ ದ್ವಿತೀಯ, ಕೊಡಗು ತಂಡ ತೃತೀಯ ಹಾಗೂ ರಾಯಚೂರು ತಂಡ ನಾಲ್ಕನೇ ಸ್ಥಾನ ಪಡೆದವು.
ಭಾನುವಾರ ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಶಾಸಕ ಎಚ್.ಡಿ. ರೇವಣ್ಣ, ‘ಹಾಸನದಲ್ಲಿ ರಾಜ್ಯಮಟ್ಟದ ಕ್ರೀಡಾಕೂಟ ಏರ್ಪಡಿಸಿರುವುದು ಉತ್ತಮ ಬೆಳವಣಿಗೆ’ ಎಂದು ಹಾರೈಸಿದರು.
ಶಾಸಕ ಎಚ್.ಪಿ. ಸ್ವರೂಪ್ ಮಾತನಾಡಿ, ‘ಪತ್ರಕರ್ತರ ಸಂಘವು ಆರೋಗ್ಯ ಮೇಳ, ಕ್ರೀಡಾಕೂಟದಂತಹ ಹಲವಾರು ಕಾರ್ಯಕ್ರಮಗಳನ್ನು ಪತ್ರಕರ್ತರಿಗೆ ಆಯೋಜಿಸುತ್ತ ಬರುತ್ತಿದೆ. ಕೆಲಸದ ಒತ್ತಡದಲ್ಲಿರುವ ಪತ್ರಕರ್ತರು ಬಿಡುವಿನ ಸಮಯದಲ್ಲಿ ಕ್ರೀಡೆಯಲ್ಲಿ ಭಾಗವಹಿಸುವಿಕೆ ಆರೋಗ್ಯಕ್ಕೆ ಉತ್ತಮ’ ಎಂದರು.
ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿ, ‘ಮಾನಸಿಕ ಹಾಗೂ ದೈಹಿಕ ಸ್ಫೂರ್ತಿಗೆ ಕ್ರೀಡೆ ಅವಶ್ಯಕ. ದೇಶದಲ್ಲಿ ಕ್ರಿಕೆಟ್ ಸ್ವಾತಂತ್ರ್ಯ ಪೂರ್ವದಿಂದಲೂ ಜನಪ್ರಿಯತೆ ಗಳಿಸಿದ್ದು, ಕೋಟ್ಯಂತರ ಮಂದಿ ನೆಚ್ಚಿನ ಆಟವಾಗಿದೆ. ಬೇಸಿಗೆ ಕಾಲದಲ್ಲಿ ಹೊಲಗದ್ದೆ, ಬಯಲುಗಳಲ್ಲಿ ಕ್ರಿಕೆಟ್ ಆಡುವುದನ್ನು ಕಂಡಿದ್ದೇವೆ’ ಎಂದರು.
ಶಾಸಕ ಸಿಮೆಂಟ್ ಮಂಜು, ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಪಿ. ಕೃಷ್ಣೇಗೌಡ ಮಾತನಾಡಿದರು.
ಪತ್ರಕರ್ತರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಶಿವಾನಂದ ತಗಡೂರು, ಉಪಾಧ್ಯಕ್ಷರಾದ ಅಜ್ಜಮಾಡ ಕುಟ್ಟಪ್ಪ, ಭವಾನಿಸಿಂಗ್ ಠಾಕೂರ್, ಪುಂಡಲೀಕ ಬಾಳೋಜಿ, ಖಜಾಂಚಿ ವಾಸುದೇವ ಹೊಳ್ಳ, ಕಾರ್ಯದರ್ಶಿಗಳಾದ ಮತ್ತಿಕೆರೆ ಜಯರಾಂ, ಸೋಮಶೇಖರ ಕೆರಗೋಡು, ನಿಂಗಪ್ಪ ಚಾವಡಿ, ಬಂಡಿಗೌಡ, ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಚ್. ವೇಣುಕುಮಾರ್, ಪದಾಧಿಕಾರಿಗಳಾದ ಎಚ್.ಬಿ. ಮದನಗೌಡ, ಬಿ.ಸಿ. ಶಶಿಧರ್, ಜೆ.ಆರ್.ಕೆಂಚೇಗೌಡ, ಎನ್. ರವಿಕುಮಾರ್, ದೀಪಕ್, ರವಿ ನಾಕಲಗೂಡು, ಕೆ.ಆರ್. ಮಂಜುನಾಥ್, ಲೀಲಾವತಿ, ಬಿ.ಆರ್.ಉದಯ್ ಕುಮಾರ್, ಪ್ರಸನ್ನಕುಮಾರ್, ಮೋಹನ್, ಹರೀಶ, ಪಿ.ಎ. ಶ್ರೀನಿವಾಸ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.