ಬೇಲೂರು: ಇಲ್ಲಿನ ಹೊಸನಗರದ ಯಗಚಿ ನಾಲೆಯ ದಡದಲ್ಲಿ ಪಶುಗಳಿಗೆ ನೀಡಿರುವ ಇಂಜೆಕ್ಷನ್, ಗ್ಲೂಕೋಸ್ ಇನ್ನಿತರ ವೈದ್ಯಕೀಯ ತ್ಯಾಜ್ಯಗಳನ್ನು ಹಾಕಲಾಗಿದ್ದು, ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪುರಸಭೆಯ ಆರೋಗ್ಯಾಧಿಕಾರಿ ಲೋಹಿತ್ ಹಾಗೂ 1ನೇ ವಾರ್ಡ್ ಸದಸ್ಯೆ ಮೀನಾಕ್ಷಿ ವೆಂಕಟೇಶ್ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು.
ಮೀನಾಕ್ಷಿ ವೆಂಕಟೇಶ್ ಮಾತನಾಡಿ, ‘ಅನುಪಯುಕ್ತ ವಸ್ತುಗಳನ್ನು ಇಲ್ಲಿ ತಂದು ಹಾಕುವುದು ಮಾಮೂಲಾಗಿದೆ. ಈಗ ಸಿರೆಂಜ್, ಇನ್ನಿತರ ವಸ್ತುಗಳನ್ನು ಹಾಕಲಾಗಿದ್ದು, ಇದರಲ್ಲಿ ಅಮೃತ ವೆಟ್ ಫಾರ್ಮ ಚೀಟಿ ಸಿಕ್ಕಿದ್ದು, ಅವರೇ ತಂದು ಹಾಕಿರುವ ಶಂಕೆ ಇದೆ’ ಎಂದು ತಿಳಿಸಿದರು.
ಪಶುಇಲಾಖೆ ಸಹಾಯಕ ನಿರ್ದೇಶಕ ಸದಾಶಿವಮೂರ್ತಿ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ಅಲ್ಲಿ ಸಿಕ್ಕಿರುವ ಸಿರೇಂಜ್‌ಗಳು ನಮ್ಮ ಇಲಾಖೆಯವರು ಬಳಸಿದವುಗಳಲ್ಲ, ನಾವು ಬಳಸಿದ ಸಿರೇಂಜ್‌ಗಳನ್ನು ಬಯೋ ಮೆಡಿಕಲ್ ವೆಸ್ಟೆಜ್‌ಗೆ ಕೊಡುತ್ತೇವೆ. ಅಮೃತ ವೆಟ್ ಫಾರ್ಮದವರು ಮೆಡಿಕಲ್ ನಡೆಸಲು ಮಾತ್ರ ಅನುಮತಿ ಪಡೆದು, ಚಕಿತ್ಸೆಯನ್ನು ಸಹ ನೀಡುತ್ತಿದ್ದರು. ಅವರಿಗೆ ಚಿಕಿತ್ಸೆ ನೀಡದಂತೆ ಎಚ್ಚರಿಕೆ ನೀಡಲಾಗಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.