ADVERTISEMENT

ಒತ್ತಡದಿಂದ ಪಾರಾಗಲು ನಿತ್ಯ ಅಭ್ಯಾಸ ಅಗತ್ಯ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2012, 9:15 IST
Last Updated 17 ಫೆಬ್ರುವರಿ 2012, 9:15 IST

ರಟ್ಟೀಹಳ್ಳಿ: ವಿದ್ಯಾರ್ಥಿಗಳಲ್ಲಿ ಸೃಜನಾತ್ಮಕತೆ ಬೆಳೆಸಲು ಪಾಠೋಪಕರಣಗಳು ನೆರವಾಗುತ್ತವೆ. ಅಲ್ಲದೆ ಪ್ರದರ್ಶನ ಏರ್ಪಡಿಸುವುದರಿಂದ ವಿದ್ಯಾರ್ಥಿಗಳು ಪರೋಕ್ಷವಾಗಿ ಕಲಿಯಲು ನೆರವಾಗುತ್ತದೆ. ಚಿತ್ರಗಳು ಬಹುಕಾಲ ನೆನಪಿನಲ್ಲಿ ಉಳಿಯುವುದರಿಂದ ವಿಷಯ ಸಂಗ್ರಹವಾಗುತ್ತದೆ. ಇದರಿಂದ ವಿದ್ಯಾರ್ಥಿಗಳಿಗೆ ಸಹಾಯವಾಗುತ್ತದೆ ಎಂದು ಸಂಸ್ಥೆಯ ಅಧ್ಯಕ್ಷ ವಿ.ಎನ್.ಅಘನಾಶಿನಿಕರ ನುಡಿದರು.

ಇಲ್ಲಿನ ಶ್ರೀ ಕುಮಾರೇಶ್ವರ ಪ್ರೌಢಶಾಲೆಯಲ್ಲಿ ನಡೆದ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಮತ್ತು ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಕೇವಲ ಪರೀಕ್ಷಾ ಸಮಯದಲ್ಲಿ ಅಭ್ಯಾಸ ಮಾಡದೆ, ನಿತ್ಯ ಅಭ್ಯಾಸ ಮಾಡುವ ಮೂಲಕ ಒತ್ತಡದಿಂದ ಪಾರಾಗಬಹುದು. ಆದರೆ ಬಹಳಷ್ಟು ವಿದ್ಯಾರ್ಥಿಗಳು ಕೇವಲ ಪರೀಕ್ಷಾ ಸಂದರ್ಭದಲ್ಲಿ ನಿದ್ದೆ ಹಾಳು ಮಾಡಿಕೊಂಡು ಓದುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀಳುತ್ತದೆ. ಇದರಿಂದ ಪರೀಕ್ಷಾ ಸಮಯದಲ್ಲಿ ಗೊಂದಲಕ್ಕೆ ಒಳಗಾಗುವ ಸಂದರ್ಭಗಳೇ ಹೆಚ್ಚು ಎಂದು ಪ್ರಾಚಾರ್ಯ ಎನ್.ಸಿ.ಕಠಾರೆ ಸನ್ಮಾನ ಸ್ವೀಕರಿಸಿ ಮಾತನಾಡಿದರು.

2011 ರ ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ. ಸಂಸ್ಕೃತಿ ಮತ್ತು ವಿಜ್ಞಾನ ಆಟಗಳಲ್ಲಿ ಭಾಗವಹಿಸಿ ಪ್ರಶಸ್ತಿ ಗಳಿಸಿದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು.

ವಸ್ತು ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ತಾವೇ ತಯಾರಿಸಿದ ಕಲಿಕಾ ಉಪಕರಣ ಪ್ರದರ್ಶಿಸಿದರು. ವಿದ್ಯಾರ್ಥಿಗಳಿಂದ ಮನೋರಂಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಸಂಸ್ಥೆಯ ಅಧ್ಯಕ್ಷ ವಿ.ಎನ್. ಅಘನಾಶಿನಿಕರ, ಪ್ರಾಚಾರ್ಯ ಎನ್. ಸಿ.ಕಠಾರೆ  ಮುಖ್ಯ ಶಿಕ್ಷಕರಾದ ಪಿ. ಎಚ್. ಬೋಗಾರ, ಎಂ. ಎಸ್. ಬೆಟ್ಟಣ್ಣನವರ, ಎಂ.ಕುಬೇರಪ್ಪ, ಆರ್. ಬಿ.ಪೂಜಾರ, ಎಲ್.ಎಚ್.ಹಾರೋಗೊಪ್ಪದ, ಎಂ.ಎಚ್.ಲಿಂಗರಾಜ, ಪಿ.ಡಿ.ಪಾಟೀಲ, ಟಿ.ಆರ್.ಯಲಿವಾಳ, ಕೆ.ಎಚ್. ನದಾಫ್, ವಿ.ಎಚ್.ಹರಿಹರ, ಡಿ.ಬಿ.ಡೊಳ್ಳೇರ, ಪ್ರಸನ್ನ ಅಘನಾಶಿನಿಕರ, ಕೆ.ಎಂ.ಮೇಗಳಮನಿ, ವಿಜಯ ಗಾಂಜಿ, ನಾಗರಾಜ ಓಲೇಕಾರ ಮೊದಲಾದವರು ಭಾಗವಹಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.