ADVERTISEMENT

ಕಲಕೇರಿ ಗ್ರಾಮಸ್ಥರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2013, 12:56 IST
Last Updated 12 ಜುಲೈ 2013, 12:56 IST

ಹಾನಗಲ್: ತಾಲ್ಲೂಕಿನ ಕಲಕೇರಿ ಗ್ರಾಮದಲ್ಲಿರುವ ಸರ್ಕಾರಿ ಭೂಮಿ ಯಲ್ಲಿ ಜಾನುವಾರುಗಳನ್ನು ಮೇಯಿ ಸಲು ಅವಕಾಶ ಕಲ್ಪಿಸುವಂತೆ ಒತ್ತಾ ಯಿಸಿ  ಗ್ರಾಮಸ್ಥರು ತಹಶೀಲ್ದಾರ್ ಕಚೇರಿ ಎದುರು ಧರಣಿ ನಡೆಸಿ ಮನವಿ ಸಲ್ಲಿಸಿದರು.

ಕಲಕೇರಿ ಗ್ರಾಮದಲ್ಲಿ ಅಧಿಕ ಸಂಖ್ಯೆ ಯಲ್ಲಿ ಜಾನುವಾರುಗಳಿವೆ. ಅವುಗಳಿಗೆ ಮೇಯಲು ಜಾಗ ಇಲ್ಲವಾಗಿದೆ.  ಗ್ರಾಮದಲ್ಲಿರುವ ಸರ್ಕಾರಿ ಜಮೀನಿನಲ್ಲಿ ಕೆಲವರು ಅಕ್ರಮ ಸಾಗುವಳಿಗೆ ಮುಂದಾಗಿರುವುದರಿಂದ ಜಾನುವಾರು ಮೇವಿನ ಸಮಸ್ಯೆ ಎದುರಾಗಿದೆ ಎಂದು ದೂರಿದರು.

ಸರ್ಕಾರಿ ಭೂಮಿಯನ್ನು ಗೋಮಾಳ ವೆಂದು ಕಾಯ್ದಿರಿಸಲಾಗಿತ್ತು. ಈ ಜಮೀನಿನಲ್ಲಿ ಹಲವು ವರ್ಷಗಳಿಂದ ಜಾನುವಾರು ಮೇಯುತ್ತಿದ್ದವು. ಪ್ರಸ್ತುತ ದನ-ಕರುಗಳು ಈ ಭೂಮಿ ಯಲ್ಲಿ  ಮೇಯಲು ತೆರಳುತ್ತಿರುವುದನ್ನು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ತಡೆಹಿಡಿಯುತ್ತಿವೆ. ಈ ಹಿನ್ನೆಲೆಯಲ್ಲಿ ಜಾನುವಾರುಗಳನ್ನು ಸಾಕುವುದು ರೈತರಿಗೆ ದುಸ್ತರವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಕುರಿತು ಹಲವಾರು ಬಾರಿ ಮನವಿ ಸಲ್ಲಿಸಿದರೂ ತಾಲ್ಲೂಕು ಆಡಳಿತ ಕ್ರಮ ಜರುಗಿಸಿಲ್ಲ. ಜಾನುವಾರುಗಳ ಸಮಸ್ಯೆಗೆ ಪರಿಹಾರ ದೊರಕಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಪ್ರತಿಭಟನೆಯಲ್ಲಿ ತಾ.ಪಂ ಮಾಜಿ ಸದಸ್ಯ ಅಜ್ಜಪ್ಪ ಶಿರಳ್ಳಿ, ಪ್ರಭು ಜಮಖಂಡಿ, ಎಂ.ವಿ.ಹಿರೇಮಠ, ಸಿ.ಬಿ.ಹಳ್ಳೂರ, ವಿ.ಆರ್. ಜೋಗೊಂಡರ, ಬಿ.ಎಸ್.ತಳಗೇರಿ, ಟಿ.ಎಂ. ಪೂಜಾರ, ಎಚ್.ಬಿ.ಕ್ವಾಟಿ, ಜಗದೀಶ ಹಾಲಮ್ಮನವರ, ಆರ್.ಜಿ.ಮೆಳ್ಳಿಹಳ್ಳಿ, ಪಿ.ಎಸ್.ಕೊಪ್ಪದ, ಈ.ಎಸ್. ಬಣಕಾರ, ಬಸವಣ್ಣೆಪ್ಪ ಕೊಟ್ರಪ್ಪನವರ, ಎಂ.ಎಸ್. ಬಿಸ್ಟಣ್ಣನವರ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.