ADVERTISEMENT

ಕೆರಿಮಲ್ಲಾಪುರ: ಬಸ್ ನಿಲುಗಡೆಗೆ ಆಗ್ರಹಿಸಿ ಮನವಿ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2012, 6:10 IST
Last Updated 22 ಆಗಸ್ಟ್ 2012, 6:10 IST

ರಾಣೆಬೆನ್ನೂರು: ವೇಗದೂತ ಬಸ್‌ಗಳು ಸೇರಿದಂತೆ ರಾಜ್ಯ ಸಾರಿಗೆ ಸಂಸ್ಥೆಯ ಎಲ್ಲ ಬಸ್ಸುಗಳ ನಿಲುಗಡೆಗೆ ಆಗ್ರಹಿಸಿ ತಾಲ್ಲೂಕಿನ ಕೆರಿಮಲ್ಲಾಪುರ ಗ್ರಾಮಸ್ಥರು ಮಂಗಳವಾರ ಘಟಕ ವ್ಯವಸ್ಥಾಪಕ ಮಹೇಶ ಅವರಿಗೆ ಮನವಿ ಸಲ್ಲಿಸಿದರು.

ರಾಣೆಬೆನ್ನೂರ ಮತ್ತು ಗುತ್ತಲ ಮಾರ್ಗದ ಮಧ್ಯದಲ್ಲಿರುವ ಕೆರಿ ಮಲ್ಲಾಪುರ ಗ್ರಾಮದಿಂದ ನಿತ್ಯ ನೂರಾರು ಜನರು, ಕೂಲಿಕಾರರು, ಶಾಲಾ ಕಾಲೇಜು ವಿದ್ಯಾರ್ಥಿಗಳು, ನೌಕರರು ನಗರಕ್ಕೆ ಹೋಗಿ ಬಂದು ಮಾಡುತ್ತಾರೆ. ವೇಗದೂತ ಬಸ್ಸುಗಳ ನಿಲುಗಡೆಯಿಲ್ಲದ ಕಾರಣ ಬಹಳಷ್ಟು ಅನಾನುಕೂಲವಾಗುತ್ತದೆ, ಕೂಡಲೇ ಎಲ್ಲಾ ಬಸ್ಸುಗಳನ್ನು ನಿಲುಗಡೆ ಮಾಡ ಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.

ಒಂದು ವಾರದೊಳಗೆ ಬಸ್ಸು ನಿಲುಗಡೆ ಮಾಡದಿದ್ದರೇ ಆ.26ರಂದು ಬೆಳಗ್ಗೆ 10 ಗಂಟೆಗೆ ಗ್ರಾಮದಲ್ಲಿ ರಸ್ತೆ ತಡೆ ಮಾಡುವುದರ ಮೂಲಕ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಗ್ರಾಮಸ್ಥರು ಎಚ್ಚರಿಸಿದರು.

ಎಂ.ಚಿರಂಜೀವಿ, ಶಿವು ಪಾಟೀಲ, ಗಣೇಶ ಬಡಿಗೇರ, ರವೀಂದ್ರಗೌಡ ಪಾಟೀಲ, ನಿಂಗಪ್ಪ ದಿವಟರ,           ರವಿ ಭಾವಿಕಟ್ಟಿ, ಪ್ರದೀಪ ಮಡಿವಾಳರ, ಚಂದ್ರು ಮಡಿವಾಳರ, ಮಂಜು ಮೂಲಿ ಕೇರಿ, ಪ್ರತಾಪ ಹೊನ್ನತ್ತಿ, ಸಂಜೀವ ಗೂಳಲಕಾಯಿ, ಶರಣಪ್ಪ ಬಳ್ಳಿ, ರಾಕೇಶ ಪಾಟೀಲ, ಮಂಜು ಅಕ್ಕಿ, ವಿಜಯ ಗೂಳಲಕಾಯಿ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.