ADVERTISEMENT

ಕೇಂದ್ರ-ರಾಜ್ಯ ಸರ್ಕಾರದಿಂದ ರೈತರಿಗೆ ಅನ್ಯಾಯ: ಬನ್ನಿಕೋಡ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2013, 6:44 IST
Last Updated 22 ಏಪ್ರಿಲ್ 2013, 6:44 IST

ರಟ್ಟೀಹಳ್ಳಿ: ಕೇಂದ್ರ ಸರ್ಕಾರ ರಸಗೊಬ್ಬರಗಳ ಮೇಲಿನ ಬೆಲೆಯನ್ನು ಏರಿ ಸಿತು. ರಾಜ್ಯ ಸರ್ಕಾರ ಸಬ್ಸಿಡಿ ಕೊಡುವ ಮೂಲಕ ಏರಿದ ಬೆಲೆ ತಗ್ಗಿಸಿ ರೈತರಿಗೆ ನೆರವಾಗಬೇಕಿತ್ತು. ಆದರೆ ಹೀಗಾಗಲಿಲ್ಲ. ಎರಡೂ ಸರ್ಕಾರಗಳು ರೈತರಿಗೆ ಅನ್ಯಾಯ ಮಾಡಿದೆ ಎಂದು ಹಿರೇ ಕೆರೂರು ಮತಕ್ಷೇತ್ರದ ಪಕ್ಷೇತರ ಅಭ್ಯರ್ಥಿ (ಜೆಡಿಎಸ್ ಬಂಡಾಯ) ಬಿ. ಎಚ್.ಬನ್ನಿಕೋಡ ಆಕ್ರೋಶ ವ್ಯಕ್ತಪಡಿಸಿದರು.

ಇಲ್ಲಿನ ಮಾಸೂರ ರಸ್ತೆಯಲ್ಲಿ    ಭಾನುವಾರ ಜರುಗಿದ ಪಕ್ಷದ ಚುನಾವಣಾ ಪ್ರಚಾರದಲ್ಲಿ  ಅವರು ಮಾತನಾಡಿದರು.
ಹಿರೇಕೆರೂರ ತಾಲ್ಲೂಕಿನಲ್ಲಿ ಸಕ್ಕರೆ ಕಾರ್ಖಾನೆ ಪ್ರಾರಂಭವಾಗಿದ್ದರೆ ಈ ಭಾಗದ ಸಾವಿರಾರು ಯುವಕರಿಗೆ ಉದ್ಯೋಗ ದೊರಕುತ್ತಿತ್ತು. ಅದಕ್ಕೆ ವಿರೋಧಿಗಳು ಕಲ್ಲು ಹಾಕಿದರು. ಬೆಂಬಲಿಗರ ಅಪೇಕ್ಷೆ ಮೇರೆಗೆ ಇಂದಿನ ಚುನಾವಣೆಗೆ ನಿಂತಿದ್ದೇನೆ. ಬ್ಯಾಟರಿ ಗುರುತಿಗೆ ಮತ ನೀಡಿ. ಇದು ನನ್ನ ಕೊನೆಯ ಚುನಾವಣೆ ಎಂದು ಹೇಳಿದರು.

ಕಾರ್ಯಕರ್ತ ಜಗದೀಶ ಕವಲಿ, ಕಡೂರ ಗ್ರಾಮದ ಭೀಮಪ್ಪ ಬಾರ್ಕಿ ಮಾತನಾಡಿದರು. ಪಪಂ ಸದಸ್ಯ ರಾಜು ಹಂಪಾಳಿ, ಭೀಮಪ್ಪ ಬಾರ್ಕಿ ಮತ್ತು  ಚಿಕ್ಕಯಡಚಿ, ಸಣ್ಣಗುಬ್ಬಿ, ಕಡೂರ ಮುಂತಾದ ಗ್ರಾಮಗಳ ಅನೇಕರು ಪಕ್ಷಕ್ಕೆ ಸೇರ್ಪಡೆಯಾದರು. ಪಟ್ಟಣ ಪ್ರಮುಖ ಬೀದಿಗಳಲ್ಲಿ ಪ್ರಚಾರ ಕಾರ್ಯಕ್ರಮ ನಡೆಸಲಾಯಿತು.

ತಾಪಂ ಮಾಜಿ ಅಧ್ಯಕ್ಷ ಎ.ಎ.ಕನವಳ್ಳಿ, ಎಪಿಎಂಸಿ ಮಾಜಿ ಅಧ್ಯಕ್ಷ ವೀರಭದ್ರಪ್ಪ ದ್ಯಾವಕ್ಕಳವರ, ಸುರೇಶ ಸೊರಟೂರ, ಬಾಲಚಂದ್ರ ದೊಡ್ಡಯಂಕಣ್ಣನವರ, ವಸಂತ ದ್ಯಾವಕ್ಕಳವರ, ಸುಭಾಸ ಗವಿಯಪ್ಪನವರ, ನಾರಾಣಪ್ಪ ಗೌರಕ್ಕನವರ, ಆರ್.ಎಂ.ಗೋಣಗೇರಿ, ಇಮಾಮ್‌ಸಾಬ್ ಜಕಾತಿ, ಬಿ.ಆರ್. ಪುಟ್ಟಣ್ಣನವರ, ರಾಜಣ್ಣ  ಹಂಪಳಿ, ಮೆಹಬೂಬಸಾಬ್ ಮಾಸೂರ, ಮುನಫ್ ಆಲದಗೇರಿ, ವಿ.ಎನ್. ಮಡಿವಾಳರ, ಉಮೇಶ ಹಳಕಟ್ಟಿ, ವಕೀಲ ಕುಲಕರ್ಣಿ ಮುಂತಾದವರು  ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.