ADVERTISEMENT

ಚುನಾವಣಾ ವೆಚ್ಚದ ಮೇಲೆ ನಿಗಾ ವಹಿಸಿ

ಅಧಿಕಾರಿಗಳಿಗೆ ವೆಚ್ಚ ವೀಕ್ಷಕ ವಸಂತ ಗೇಸನ್ ಸೂಚನೆ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2014, 7:13 IST
Last Updated 22 ಮಾರ್ಚ್ 2014, 7:13 IST

ಗದಗ: ಚುನಾವಣಾ ವೆಚ್ಚದ ನಿಗಾ ಹಾಗೂ ಲೆಕ್ಕಪತ್ರಕ್ಕೆ ಸಂಬಂಧಿಸಿದಂತೆ ಎಚ್ಚರಿಕೆ ಹಾಗೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸುವಂತೆ ಅಧಿಕಾರಿ ಗಳು, ಸಹಾಯಕ ಚುನಾವಣಾಧಿಕಾರಿ, ಪೊಲೀಸರು ಹಾಗೂ ಪರಿಶೀಲನಾ ತಂಡಗಳಿಗೆ ಹಾವೇರಿ ಲೋಕಸಭಾ ಕ್ಷೇತ್ರದ ಚುನಾವಣಾ ವೆಚ್ಚದ ವೀಕ್ಷಕ ವಸಂತ ಗೇಸನ್ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ  ಹಾವೇರಿ ಲೋಕಸಭಾ ವ್ಯಾಪ್ತಿಯ ಗದಗ, ಶಿರಹಟ್ಟಿ ಹಾಗೂ ರೋಣ ವಿಧಾನಸಭಾ ಕ್ಷೇತ್ರಗಳ ಚುನಾ ವಣಾ ವೆಚ್ಚದ ಅಧಿಕಾರಿಗಳ ಹಾಗೂ ವಿವಿಧ ನೋಡಲ್ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರ,  ಚೆಕ್‌ಪೋಸ್ಟ್‌ಗಳಲ್ಲಿ  ವಿಡಿಯೊ ಚಿತ್ರೀಕರಣ ಹಾಗೂ ಅದನ್ನು ವೀಕ್ಷಿಸುವ ತಂಡಗಳು, ಚುನಾವಣಾಧಿಕಾರಿಗಳು, ಸದಾಚಾರ ಸಂಹಿತೆ ಉಲ್ಲಂಘನೆಯ ಅಂಶಗಳನ್ನು ಚೆನ್ನಾಗಿ ತಿಳಿದಿರಬೇಕು. ಅವುಗಳ ಕುರಿತು ತರಬೇತಿ ಕೊಡಲಾಗುತ್ತಿದೆ. ಹಿಂದಿನ ಅನುಭವ, ಸಾರ್ವಜನಿಕರಿಗೆ ಅನವಶ್ಯಕ ತೊಂದರೆ ಆಗದಂತೆ ಕಾರ್ಯ ನಿರ್ವಹಿಸಬೇಕು.   ದಾಖಲೆಗಳನ್ನು ಕೇಳಿ ಪರಿಶೀಲಿಸಬೇಕು.  ತಕ್ಷಣವೇ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿ ಚುನಾವಣಾ ಆಯೋಗದ ನಿಗದಿಪಡಿಸಿದ ರೀತಿಯಲ್ಲಿ ಕ್ರಮ ಜರುಗಿಸಬೇಕು ಎಂದು ಹೇಳಿದರು.
ಮುಖ್ಯವಾಗಿ ಸಾಕ್ಷಾ್ಯಧಾರಗಳು ನಾಶವಾಗದಂತೆ ನೋಡಿಕೊಳ್ಳಬೇಕು. ವಿಡಿಯೋ ರೆಕಾರ್ಡಿಂಗ್‌ ತಂಡಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿ ಸಬೇಕು. ಜಿಲ್ಲೆಯಲ್ಲಿ ಆಂತರಿಕ ಬೇಹುಗಾರಿಕೆ ಹೆಚ್ಚು ಬಲವಾಗಿರಬೇಕು. ಚೆಕ್ ಪೋಸ್ಟ್‌ ಅಥವಾ ಇತರೆಡೆ ಪರಿಶೀಲಿಸುವಾಗ ತಾಳ್ಮೆ ಕಳೆದುಕೊ ಳ್ಳದೇ ವಿಷಯ ವಿವರಿಸಿ ಅಗತ್ಯದ ಪರಿಶೀಲನೆ ಜರುಗಿಸಬೇಕು. ಹಣ, ಮದ್ಯ, ಗೃಹೋಪಯೋಗಿ ಸಾಮಾನು ಇತ್ಯಾದಿ ಮತದಾರರಿಗೆ ಆಮಿಷ ಒಡ್ಡುವ ವಸ್ತುಗಳ ಸಾಗಣೆ ಕುರಿತು ವಿಶೇಷ ಗಮನ ಇರಬೇಕು.
ಸಂಶಯಾಸ್ಪದ ಮನೆ, ವಾಹನ ಇದ್ದಲ್ಲಿ  ನಿಗಾ ಇಟ್ಟು   ಕ್ರಮ ಜರುಗಿಸ ಬೇಕು. ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಸಾಕ್ಷಿಗಳನ್ನು ರಕ್ಷಿಸಿಡ ಬೇಕು ಎಂದು ನಿರ್ದೇಶನ ನೀಡಿದರು.

ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನ ಕುಮಾರ್ ಮಾತನಾಡಿ,  ಅಧಿಕಾರಿಗಳ ನಿರ್ಲಕ್ಷ್ಯತೆ ಕಂಡುಬಂದಲ್ಲಿ ಕ್ರಮ ಜರುಗಿಸಲಾಗುವುದು.   ಜಿಲ್ಲಾಡಳಿತ ತೆಗೆದುಕೊಂಡಿರುವ ಎಲ್ಲ ಕ್ರಮಗಳು   ಅವುಗಳ ವಿವರ ಇವೆಲ್ಲವೂ ಗದಗ ಎನ್.ಐ.ಸಿ. ವೆಬ್ ಸೈಟ್‌ ಲಿಂಕ್‌ನಿಂದ ಪಡೆಯಬಹುದು. ತೊಂದರೆಗಳಿದ್ದಲ್ಲಿ ಆಯಾ ಸಹಾಯಕ ಚುನಾವಣಾಧಿ ಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಹಾಯವಾಣಿಗಳಿದ್ದು, ಅವುಗಳನ್ನು ಸಂಪರ್ಕಿಸಬಹುದು ಎಂದು  ನುಡಿದರು.

ಜಿಲ್ಲಾ ಸ್ವೀಪ್ ಅಧ್ಯಕ್ಷ ವೀರಣ್ಣ ತುರಮರಿ, ಉಪವಿಭಾಗಾಧಿಕಾರಿ ಐ.ಜಿ. ಗದ್ಯಾಳ ಮಾತನಾಡಿ, ಜಿಲ್ಲೆಯಲ್ಲಿನ ಚುನಾವಣಾ ಅಕ್ರಮ ತಡೆಗೆ ನಗರಸಭೆ, ಪಟ್ಟಣ ಪಂಚಾಯಿತಿ ಜೊತೆಗ ಗ್ರಾಮ ಮಟ್ಟದ ಪಂಚಾಯಿತಿ ಅಧಿಕಾರಿಗಳಿಗೆ ಸಾಕಷ್ಟು ಮಾಹಿತಿ ನೀಡಲಾಗಿದೆ. ನೀತಿ ಸಂಹಿತೆ ಉಲ್ಲಂಘಿಸದಂತೆ ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದು ನುಡಿದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ನಾಗರಾಜ,  ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಟಿ. ಬಾಲಕೃಷ್ಣ , ಜಿ.ಪಂ. ಉಪ ಕಾರ್ಯದರ್ಶಿ ಷಡಕ್ಷರಪ್ಪ , ಚುನಾವಣಾ ವಿಭಾಗದ ತಹಶೀಲದ್ದಾರ ಪಾಪಣ್ಣ ಇದ್ದರು.

ವೀಕ್ಷಕರ ನೇಮಕ

ಹಾವೇರಿ ಲೋಕಸಭಾ ಕ್ಷೇತ್ರದ ಚುನಾವಣಾ ವೆಚ್ಚದ ವೀಕ್ಷಕರಾಗಿ ವಸಂತ ಗೆಸನ್ ಅವರನ್ನು  ಚುನಾ ವಣಾ ಆಯೋಗ ನೇಮಿಸಿದೆ.  ಅವ ರನ್ನು  ದೂ. 0957538311 ಸಂಪರ್ಕಿಸಬಹುದು.  ಸಂಪರ್ಕ ಅಧಿಕಾರಿಯಾಗಿ ಹಾವೇರಿ ಜಿಲ್ಲಾ ಅಲ್ಪಸಂಖ್ಯಾತರ ಅಧಿಕಾರಿ ಡಾ. ರಾಜೀವ ಕೂಲೇರ ಅವರನ್ನು ನೇಮಿಸಲಾಗಿದೆ (ಸಂಪರ್ಕ ಸಂಖ್ಯೆ 9742230264) ಎಂದು ಹಾವೇರಿ ಲೋಕಸಭಾ ಚುನಾವಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT