ಹಾನಗಲ್: ಜಿಲ್ಲೆಯಲ್ಲಿಯೇ ಅಧಿಕ ಮಳೆ ದಾಖಲಾಗಿ ತಾಲ್ಲೂಕಿನಾದ್ಯಂತ ಹದವಾಗಿ ಸುರಿಯುತ್ತಿರುವ ವರುಣ ಬಿತ್ತಿದ ಬೆಳೆಗಳಿಗೆ ಸಂಜೀವಿನಿಯಾ ಗಿದ್ದರೆ, ಸಮೃದ್ಧವಾಗಿ ಬೆಳೆದು ನಿಂತಿ ರುವ ಪೈರುಗಳು ರೈತ ಸಮೂಹದಲ್ಲಿ ಮಂದಹಾಸ ಮೂಡಿಸುತ್ತಿದೆ.
ಈ ಬಾರಿಯ ಮಳೆ ಕೊರತೆ ಹೆಚ್ಚಿನ ಮಳೆ ಸುರಿಸುವ ಹಾನಗಲ್ ತಾಲ್ಲೂ ಕಿಗೂ ತಟ್ಟಿದೆ. ಆದರೂ ಕಳೆದ ಒಂದು ತಿಂಗಳಿಂದ ತಾಲ್ಲೂಕಿಗೆ ಮಳೆಯ ಸಿಂಚನ ವಾಗುತ್ತಿದೆ. ವಾರದಿಂದ ಈಚೆಗೆ ಮೋಡ ಕವಿದ ತಂಪಿನ ವಾತಾವರಣ ನಿರ್ಮಾಣಗೊಂಡಿದೆ. ತಾಲ್ಲೂಕಿನಲ್ಲಿ ವಾಡಿಕೆಯ ವಾರ್ಷಿಕ ಸರಾಸರಿ ಮಳೆಯ ಪ್ರಮಾಣ 933.4 ಮಿ.ಮೀ ಇದ್ದು, ಆಗಸ್ಟ್ ಮೊದಲ ವಾರದ ವರೆಗೆ 542.8 ಮಿ.ಮೀ ರಷ್ಟು ಆಗಬೇಕಾಗಿದ್ದ ವಾಡಿಕೆ ಮಳೆಯಲ್ಲಿ ಅಭಾವ ಕಂಡಿದೆ.
ಈವರೆಗೆ 357.1 ಮಿ.ಮೀ ಮಳೆಯಾಗಿದೆ. ಮಲೆನಾಡಿಗೆ ಅಂಟಿಕೊಂಡ ತಾಲ್ಲೂಕಿನ ಭಾಗಗಳಲ್ಲಿ ಹೆಚ್ಚಿನ ಮಳೆಯಾಗುತ್ತಿದ್ದರೆ, ತಾಲ್ಲೂ ಕಿನ ಪೂರ್ವಭಾಗದ ಅಕ್ಕಿ-ಆಲೂರ ಇನ್ನುಳಿದಂತೆ ಬಮ್ಮನಹಳ್ಳಿ ಮತ್ತಿತರೆಡೆ ಕಡಿಮೆ ಮಳೆಯಾಗಿದೆ.
ಶೇ. 95 ಬಿತ್ತನೆ ಕಾರ್ಯ ಪೂರ್ಣ ಗೊಂಡು ತಾಲ್ಲೂಕಿನ ಸುಮಾರು 44773 ಹೆಕ್ಟೇರ್ ಕೃಷಿಭೂಮಿ ವಿವಿಧ ಬೆಳೆಗಳಿಗೆ ಆಸರೆಯಾಗುತ್ತಿದೆ. ಹಾನಗಲ್ ತಾಲ್ಲೂಕಿನ ಸಾಂಪ್ರದಾಯಿಕ ಬೆಳೆಯಾದ ಭತ್ತ ಹೆಚ್ಚಿನ ಮಳೆ ಬೀಳುವ ಪ್ರದೇಶದಲ್ಲಿ ಅಧಿಕವಾಗಿ ಬಿತ್ತನೆಯಾಗಿ ಇದೀಗ ಸುರಿಯುತ್ತಿರುವ ಮಳೆಯಿಂದಾಗಿ ಮೈಕೊಡವಿಕೊಂಡು ನಳನಳಿಸುತ್ತಿದೆ. ಇನ್ನು ಇತ್ತೀಚಿನ ವರ್ಷಗಳಲ್ಲಿ ರೈತಾಪಿಗಳಿಗೆ ಪ್ರಿಯವಾದ ಗೋವಿನಜೋಳ ಈ ಬಾರಿಯೂ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆಯಾ ಗಿದ್ದು, ಉತ್ತಮ ಇಳುವರಿಯ ಲಕ್ಷಣ ಗಳು ಗೋಚರಿಸುತ್ತಿವೆ. ಇನ್ನುಳಿದ ಬೆಳೆಗಳಾದ ಅಲಸಂದೆ, ಹೆಸರು ಉದ್ದು, ಶೆಂಗಾ, ಕಬ್ಬು, ಹತ್ತಿ, ಸೋಯಾಅವರೆ ಮತ್ತು ತರಕಾರಿ ಬೆಳೆಗಳು ಮಳೆಗೆ ಮುದಗೊಂಡಿವೆ.
ಮಳೆಯ ಅಭಾವ ಏರ್ಪಟ್ಟ ಭಾಗ ಗಳಲ್ಲಿ ಪರ್ಯಾಯ ಬೆಳೆಗಳನ್ನು ಕೈಗೊಳ್ಳುವಂತೆ ಕೃಷಿ ಇಲಾಖೆ ಸೂಚಿಸಿದೆ. ತಾಲ್ಲೂಕಿನ ಕೃಷಿಗೆ ಬೇಕಾದ ಸಾಮಗ್ರಿಗಳ ದಾಸ್ತಾನು ತೃಪ್ತಿದಾಯಕ ವಾಗಿದೆ ಎಂದಿರುವ ಸಹಾಯಕ ಕೃಷಿ ನಿರ್ದೇಶಕ ಎನ್.ಜಿ.ಅಂಮೃತೇಶ್ವರ, ಮಾರಾಟ ಮಳಿಗೆಗಳು ಮತ್ತು ಸಹಕಾರಿ ಸಂಘಗಳಲ್ಲಿ ರಸಗೊಬ್ಬರದ ಸಾಕಷ್ಟು ಸಂಗ್ರಹವಿದೆ.
ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜ, ಜಿಪ್ಸಂ, ಜಿಂಕ್ ಸಲ್ಫೇಟ್, ಕೀಟನಾಶಕ ಔಷಧಿಗಳ ದಾಸ್ತಾನು ಇದೆ ಎಂದಿದ್ದಾರೆ. ಸಸ್ಯ ಸಂರಕ್ಷಣಾ ಕಾರ್ಯ ಕೈಗೊಂಡು ರೈತರಿಗೆ ಬೆಳೆಗಳ ಔಷ ಧೋೀಪಚಾರಕ್ಕೆ ಸಹಾಯಧನದಲ್ಲಿ ಅವಶ್ಯಕತೆಗಳನ್ನು ಪೂರೈಸಲಾಗುತ್ತದೆ. ಯೂರಿಯಾ ಗೊಬ್ಬರ ಬಳಕೆ ಕಡಿಮೆ ಮಾಡಿ ಕಾರ್ಬೆನ್‌ಡೈಜಿಯಂ ಮತ್ತು ಟ್ರೈಸೈಕ್ಲೋಜೋಲ್ ಇಲಾಖೆಯ ಶಿಫಾ ರಸ್ಸಿನಂತೆ ಕೊಡಬೇಕು ಎಂದಿದ್ದಾರೆ
ಎಕರೆಗೆ 20 ಕೆ.ಜಿ ಜಿಪ್ಸ್‌ಂ ಹಾಗೂ 10 ಕೆ.ಜಿ ಜಿಂಕ್ ಸಲ್ಫೇಟ್ ಹಾಕಬೇಕು. ಭತ್ತ ನಾಟಿ ಮಾಡುವವರು ಇವು ಗಳೊಂದಿಗೆ 1 ಕೆ.ಜಿ ಬೊರ‌್ಯಾಕ್ಟ್ ಕೊಡಬೇಕು. ನಾಟಿ ಪೂರ್ವದಲ್ಲಿ ಸಸಿಗಳನ್ನು ಕಾರ್ಬೆನ್‌ಡೈಜಿಯಂ ಮತ್ತು ಟ್ರೈಸೈಕ್ಲೋಜೋಲ್ ದ್ರಾವಣದಲ್ಲಿ ಅದ್ದಿ ನೆಡಬೇಕು ಎಂದು ಸಲಹೆ ಮಾಡಿರುವ ಅಧಿಕಾರಿ ಅಮೃತೇಶ್ವರ ಭತ್ತಕ್ಕೆ ಪೊಟ್ಯಾಶ್ ಕೊಡಬೇಕೆಂಬುದು ತಜ್ಞರ ಅಭಿಪ್ರಾಯವಾಗಿದೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.