ADVERTISEMENT

ಭಯೋತ್ಪಾದನೆ ನಿರ್ಮೂಲನೆ ಮಾಡಿ: ಶಂಕರಾನಂದ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2012, 8:05 IST
Last Updated 20 ಅಕ್ಟೋಬರ್ 2012, 8:05 IST

ಅಕ್ಕಿಆಲೂರ: ಹುಬ್ಬಳ್ಳಿ ಮತ್ತು ಬಿಜಾಪುರ ನಗರಗಳನ್ನು ಭಯೋತ್ಪಾದಕ ರನ್ನು ಪೊರೈಸುವ ಪ್ರಮುಖ ಕೇಂದ್ರ ಗಳಾಗಿ ಪರಿವರ್ತಿಸಿಕೊಳ್ಳುವ ಸಂಚು ನಡೆದಿದೆ. ಸ್ವಲ್ಪ ಎಚ್ಚರ ತಪ್ಪಿದರೂ ಅನಾಹುತ ಸಂಭವಿಸುವ ಆತಂಕವಿದ್ದು ಭಯೋತ್ಪಾದಕ ಕೃತ್ಯಗಳನ್ನು ಸೆದೆಬಡಿ ಯಲು ಸಮಾಜ ಸರ್ವಶಕ್ತವಾಗಿ ಸಜ್ಜುಗೊಳ್ಳುವ ಅಗತ್ಯವಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ಉತ್ತರ ಸಹ ಪ್ರಾಂತ ಪ್ರಚಾರಕ ಶಂಕರಾನಂದ ನುಡಿದರು.

ಇಲ್ಲಿಯ ಎಸ್.ಎಸ್.ಪಿ.ಯು. ಕಾಲೇಜು ಮೈದಾನದಲ್ಲಿ ಏರ್ಪಡಿಸಿದ್ದ ಹಾವೇರಿ ಜಿಲ್ಲೆಯ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಥಮಿಕ ಶಿಕ್ಷಾ ವರ್ಗದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಭಾಷಣ ಮಾಡಿದ ಅವರು, ನಮ್ಮ ದೇಶದ ಜೊತೆಗೆ ಸ್ನೇಹದ ಹಸ್ತ ಚಾಚುವ ನಾಟಕವಾಡುತ್ತಿರುವ ವೈರಿ ರಾಷ್ಟ್ರಗಳು ಎದೆಗೆ ಚೂರಿ ಹಾಕುತ್ತಿವೆ. ಹೊರಗಿನ ಆಕ್ರಮಣಗಳ ಬಗೆಗೆ ಅರಿವಿದ್ದರೂ ಅದರ ವಿರುದ್ಧ ಧ್ವನಿ ಎತ್ತದಿರುವ ರಾಜಕೀಯ ವ್ಯವಸ್ಥೆಗೆ ಪ್ರತಿಯೊಬ್ಬರೂ ಧಿಕ್ಕಾರ ಹೇಳಬೇಕಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಸ್ಥಳೀಯ ಚನ್ನವೀರೇಶ್ವರ ವಿರಕ್ತಮಠದ ಶಿವಬಸವ ಶ್ರೀಗಳು ಮಾತನಾಡಿ, ಪ್ರಸಿದ್ಧಿಯಿಂದ ದೂರ ಉಳಿದು ಮನುಷ್ಯರಲ್ಲಿ ಸದ್ಗುಣ ಗಳನ್ನು ಬಿತ್ತುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ ಬಹುದೊಡ್ಡ ಸಾಮಾಜಿಕ ಆಂದೋಲನದಲ್ಲಿ ನಿರತವಾ ಗಿದೆ ಎಂದರು.

ಅಧ್ಯಕ್ಷತೆ ವಹಿಸಿಕೊಂಡಿದ್ದ ಎಚ್.ಟಿ. ಇ.ಎಸ್. ಸಂಸ್ಥೆಯ ಗೌರವ ಕಾರ್ಯ ದರ್ಶಿ ಎಸ್.ಎಂ.ಸಿಂಧೂರ ಮಾತನಾಡಿ, ದುಷ್ಟ ಶಕ್ತಿಗಳನ್ನು ಸೆದೆಬಡಿದಾಗ ಮಾತ್ರ ರಾಷ್ಟ್ರದ ಉಳಿವು ಸಾಧ್ಯವಿದೆ. ನಿರಪೇಕ್ಷ ಮನೋಭಾವದಿಂದ ಸಮಾಜವನ್ನು ಮುನ್ನೆಡೆಸುವ ವ್ಯಕ್ತಿಗಳು ನಮಗಿಂದು ಬೇಕಾಗಿದೆ ಎಂದರು.

ಆರ್.ಎಸ್.ಎಸ್. ಜಿಲ್ಲಾ ಸಂಘ ಚಾಲಕ ಈಶ್ವರ ಹಾವನೂರ ಪಾಲ್ಗೊಂ ಡಿದ್ದರು. ವರ್ಗಾಧಿಕಾರಿ ಉದಯ ನಾಸಿಕ ಸ್ವಾಗತಿಸಿ, ವರ್ಗದ ಕುರಿತು ವರದಿ ವಾಚಿಸಿದರು. ಜಿಲ್ಲಾ ಪ್ರಚಾರಕ ಸೋಮ ಶೇಖರ ಕಾರ್ಯಕ್ರಮ ನಿರ್ವಹಿಸಿದರು. ಯೋಗೀಂದ್ರ ಹೊಳೆಬಾಗಿಲ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.