ADVERTISEMENT

ಮುಂಗಾರು ಬಿತ್ತನೆ; ಸಿದ್ಧತೆಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 7 ಜೂನ್ 2017, 6:54 IST
Last Updated 7 ಜೂನ್ 2017, 6:54 IST
ಮುಂಗಾರು ಬಿತ್ತನೆ; ಸಿದ್ಧತೆಗೆ ಸೂಚನೆ
ಮುಂಗಾರು ಬಿತ್ತನೆ; ಸಿದ್ಧತೆಗೆ ಸೂಚನೆ   

ಹಾವೇರಿ: ‘ಜಿಲ್ಲೆಗೆ ಈ ತಿಂಗಳಲ್ಲಿ ನೈಋತ್ಯ ಮುಂಗಾರು ಪ್ರವೇಶಿಸುತ್ತದೆ. ಈ ಸಂದರ್ಭದಲ್ಲಿ ಅತಿವೃಷ್ಟಿ ಸಂಭವಿಸಿದರೆ, ಹಾನಿಯನ್ನು ಎದುರಿಸಲು ಎಲ್ಲ ಇಲಾಖೆ ಗಳು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ. ಅಧಿಕಾರಿಗಳಿಗೆ ಸೂಚಿಸಿದ್ದಾರೆ.

‘ಉಪ ವಿಭಾಗಾಧಿಕಾರಿಗಳು ಹಾಗೂ ತಹಶೀಲ್ದಾರ್‌ಗಳು ತಮ್ಮ ಕೇಂದ್ರ ಸ್ಥಾನ ದಲ್ಲಿ ಇರಬೇಕು. ಮಳೆ ಹಾಗೂ ಪ್ರಕೃತಿ ವಿಕೋಪದಿಂದ ಉಂಟಾಗುವ ಜೀವಹಾನಿ ಬಗ್ಗೆ ತಕ್ಷಣವೇ ವರದಿ ಸಲ್ಲಿಸ ಬೇಕು. ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ, ನೈಸರ್ಗಿಕ ವಿಪತ್ತಿನ ಪರಿಸ್ಥಿತಿ ನಿಭಾಯಿಸಬೇಕು’ ಎಂದು ಅವರು ತಿಳಿಸಿದ್ದಾರೆ.

‘ತಾಲ್ಲೂಕು ಕೇಂದ್ರದ ನಿಯಂತ್ರಣ ಕೊಠಡಿಗೆ ಎಲ್ಲ ಗ್ರಾಮ ಲೆಕ್ಕಾಧಿಕಾರಿಗಳು ಪ್ರತಿನಿತ್ಯ ಮಳೆ ಹಾಗೂ ನೈಸರ್ಗಿಕ ವಿಪತ್ತುಗಳ ಮಾಹಿತಿಯನ್ನು ಬೆಳಿಗ್ಗೆ 11ರಿಂದ ಸಂಜೆ 6ರ ಒಳಗಾಗಿ ಸಲ್ಲಿಸ ಬೇಕು. ನದಿ, ಹಳ್ಳಗಳ ಪ್ರವಾಹದಿಂದ  ಹಾನಿಗೊಳಗಾಗುವ ಪ್ರದೇಶಗಳನ್ನು ಗುರುತಿಸಿ, ಅಪಾಯ ರೇಖೆಗೆ ಮುಂಜಾ ಗ್ರತಾ ಕ್ರಮವಾಗಿ ಗುರುತು ಮಾಡಬೇಕು. ಮುಂಜಾಗ್ರತಾ ಕ್ರಮಗಳ ಬಗ್ಗೆ ಸ್ಥಳೀಯ ಜನತೆಗೆ ಮಾಹಿತಿ ನೀಡಬೇಕು’ ಎಂದು ಸೂಚಿಸಿದ್ದಾರೆ.

ADVERTISEMENT

‘ಯಾವುದಾದರು ಗ್ರಾಮಗಳಿಗೆ ಆಕಸ್ಮಿಕವಾಗಿ ನೀರು ನುಗ್ಗಿದರೆ, ನಿರಾಶ್ರಿತರಿಗೆ ತಾತ್ಕಾಲಿಕ ಶೆಡ್‌ಗಳನ್ನು ಹಾಗೂ ಗಂಜಿ ಕೇಂದ್ರಗಳನ್ನು ತೆರೆಯಲು ಸಿದ್ದತೆಯನ್ನು ಪೂರ್ವಭಾವಿಯಾಗಿ ಮಾಡಿಕೊಂಡಿರಬೇಕು. ಸ್ಥಳೀಯ ಅಧಿ ಕಾರಿಗಳು ಮುಂಗಾರು ಅವಧಿ ಮುಕ್ತಾ ಯದ ತನಕ ತಮ್ಮ ಕೇಂದ್ರಸ್ಥಾನದಲ್ಲಿ ಕಡ್ಡಾಯವಾಗಿ ಇರಬೇಕು.

ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಮುಂಗಾರು ಮಳೆ ಮುಕ್ತಾಯ ದವರೆಗೆ ಹೆಚ್ಚಿನ ಜಾಗ್ರತೆಯಿಂದ ಕಾರ್ಯನಿರ್ವಹಿಸಬೇಕು. ಜಿಲ್ಲಾ ಆಸ್ಪತ್ರೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸಾಕಷ್ಟು ಪ್ರಮಾಣದ ಔಷಧಿ, ಕ್ಲೋರಿನ್, ಮಾತ್ರೆ ಮುಂತಾದವುಗಳನ್ನು ತುರ್ತು ಚಿಕಿತ್ಸೆಯ ಸಲುವಾಗಿ ಸಂಗ್ರಹಿಸಿಟ್ಟುಕೊಳ್ಳ ಬೇಕು’ ಎಂದು ತಿಳಿಸಿದ್ದಾರೆ.

‘ನೈಸರ್ಗಿಕ ವಿಕೋಪದಿಂದ ಪ್ರವಾಹ ಬಂದರೆ, ಸಂಬಂಧಿಸಿದ ಗ್ರಾಮ ಪಂಚಾಯ್ತಿಯವರು ನದಿ, ಹಳ್ಳಗಳ ದಂಡೆಗಳಲ್ಲಿ ಮನುಷ್ಯರು ಹಾಗೂ ಜಾನುವಾರಗಳು ಹೋಗದಂತೆ ಎಚ್ಚರ ವಹಿಸಬೇಕು. ಎಲ್ಲ ತಹಶೀಲ್ದಾರ್‌ಗಳು ಪ್ರತಿದಿನ ಬಿದ್ದ ಮಳೆ ವರದಿ ಹಾಗೂ ತಾಲ್ಲೂಕಿನಲ್ಲಿ ಉಂಟಾದ ಹಾನಿಯ ಬಗ್ಗೆ  ಕ್ರೋಢೀಕೃತ ವರದಿಯನ್ನು ಬೆಳಿಗ್ಗೆ 11 ಗಂಟೆಯ ಒಳಗಾಗಿ ತಪ್ಪದೇ ಜಿಲ್ಲಾ ಆಡಳಿತದ ‘ಪ್ರಕೃತಿ ವಿಕೋಪ ವಿಭಾಗ’ಕ್ಕೆ ಸಲ್ಲಿಸಬೇಕು. ಪ್ರಕೃತಿ ವಿಕೋಪಕ್ಕೆ ಸಂಬಂ ಧಿಸಿದ  ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ: 1077 (08375–249102) ಅನ್ನು ಸಂಪರ್ಕಿಸಬೇಕು’ ಎಂದು ಪ್ರಕ ಟಣೆಯಲ್ಲಿ ತಿಳಿಸಿದ್ದಾರೆ.

‘ಅತಿವೃಷ್ಟಿಯಿಂದ ಹಾನಿಗೊಳಗಾದ ಸಂತ್ರಸ್ತರಿಗೆ ಪರಿಹಾರ ನೀಡಿದ ಬಗ್ಗೆ  ನಿಗದಿಪಡಿಸಿದ ನಮೂನೆ ಸಂಖ್ಯೆ 1ರಿಂದ 8ರವರೆಗೆ ಮಾಹಿತಿಯನ್ನು ಭರ್ತಿ ಮಾಡಿ, ಪ್ರತಿ ಶನಿವಾರ ಇ-–ಮೇಲ್ ಅಥವಾ ಫ್ಯಾಕ್ಸ್ ಮೂಲಕ ಸಲ್ಲಿಸಬೇಕು ಎಂದು’ ಎಂದು ಜಿಲ್ಲಾಧಿಕಾರಿ ಡಾ.ವೆಂಕ ಟೇಶ್‌ ಎಂ.ವಿ ಸೂಚನೆ ನೀಡಿದ್ದಾರೆ.

* * 

ಪ್ರತಿ ತಾಲ್ಲೂಕಿನಲ್ಲಿ 24X7  ನಿಯಂತ್ರಣ ಕೊಠಡಿ’ಯನ್ನು ಸ್ಥಾಪಿಸಿ, ಸಿಬ್ಬಂದಿ ನಿಯೋಜಿಸಬೇಕು. ನಿಯಂತ್ರಣ ಕೊಠಡಿ ಬಗ್ಗೆ ಮಾಧ್ಯಮಗಳ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು
ಡಾ.ವೆಂಕಟೇಶ್ ಎಂ.ವಿ.
ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.