ADVERTISEMENT

ಮೌಲ್ಯಾಧಾರಿತ ಶಿಕ್ಷಣ ಅಗತ್ಯ

​ಪ್ರಜಾವಾಣಿ ವಾರ್ತೆ
Published 15 ಜುಲೈ 2012, 8:15 IST
Last Updated 15 ಜುಲೈ 2012, 8:15 IST

ರಾಣೆಬೆನ್ನೂರು: ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ಹಂತದಲ್ಲಿಯೇ  ಸಂಸ್ಕೃತಿ, ಮೌಲ್ಯ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು,  ಎಂದು  ಬಿಬಿಎಂಪಿ ಉಪ ಮೇಯರ್ ಆರ್. ಶಂಕರ್ ಹೇಳಿದರು.

ತಾಲ್ಲೂಕಿನ ಕರೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶನಿವಾರ ನಡೆದ ಸ್ನೇಹ ಜೀವಿ ಕಲಾಸಂಘ ಉದ್ಘಾಟನಾ ಸಮಾ ರಂಭ, ಸಂತ ಶಿಶುನಾಳ ಶರೀಫರ ಜಯಂತಿ ಉತ್ಸವ, ಶಾಲಾ ಮಕ್ಕಳ ಕಲಾ ಪ್ರತಿಭೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕೆಲವೇ ದಿನಗಳಲ್ಲಿ ತಾಲ್ಲೂಕಿನ 120 ಗ್ರಾಮದ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ಹಾಗೂ ಶಾಲಾ ಬ್ಯಾಗ್ ವಿತರಣೆ ಮಾಡಲಾಗುವುದು ಎಂದರು.

ಕೆ.ಬಿ. ಕೋಳಿವಾಡ ಅವರು ಕಾರ್ಯಕ್ರಮ ಉದ್ಘಾಟಿಸಿ ಸಂತ ಶಿಶು ನಾಳ ಶರೀಫರ ತತ್ವಗಳನ್ನು ಜೀವನ ದಲ್ಲಿ ಅಳವಡಿಸಿಕೊಂಡು ಉತ್ತಮ ಜೀವನ ನಡೆಸಬೇಕು ಎಂದರು.

ಜಿಪಂ ಮಾಜಿ ಅಧ್ಯಕ್ಷ ಡಾ. ಬಸವರಾಜಶಾಸ್ತ್ರಿ ಅವರು ಸ್ನೇಹ ಜೀವಿ ಕಲಾಸಂಘದ ನಾಮ ಫಲಕವನ್ನು ಅನಾವರಣ ಗೊಳಿಸಿದರು. ಜಿಲ್ಲಾ ಜನಪದ ಸಂಘದ ಅಧ್ಯಕ್ಷ ಕೆ.ಸಿ. ನಾಗರಜ್ಜಿ, ಆರ್.ಶಂಕರ ಅಭಿಮಾನಿಗಳ ರಾಜ್ಯಾಧ್ಯಕ್ಷ ಆರ್. ವೆಂಕಟೇಶ ಪ್ರಸಾದ, ಜಿಕರವೇ ಅಧ್ಯಕ್ಷ ನಿತ್ಯಾನಂದ ಕುಂದಾಪುರ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಜನಾರ್ಧನ ಕಡೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ನಿಂಗಪ್ಪ ಬಕ್ಕಜ್ಜಿ, ಅರುಣಕುಮಾರ ಎಂ.ಜಿ, ನೀಲವ್ವ ಹಾಡಕರ, ರಾಮಚಂದ್ರಪ್ಪ ಪಾಚಪಾರೆ, ರಾಮಪ್ಪ ಬೆನ್ನೂರು, ಶಿವಲಿಂಗಪ್ಪ ಹಿರೇಗೌಡ್ರ, ಕಷ್ಣಮೂರ್ತಿ ನಾಡಗೇರ, ಬಸಪ್ಪ ರಾಜನಹಳ್ಳಿ, ಹರೀಶ ಸೂರ್ವೆ, ಪರಶುರಾಮ ಸೂರ್ವೇ, ರಾಜು ಕಚ್ಚರವಿ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.