ADVERTISEMENT

ರೈತ ಸಂಘದಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2013, 6:02 IST
Last Updated 17 ಸೆಪ್ಟೆಂಬರ್ 2013, 6:02 IST

ಬ್ಯಾಡಗಿ: ಜಯೋ ಪ್ರೀಮಿಯರ್‌ ಗೋಲ್ಡ್‌ ಕಳಪೆ ಬಿತ್ತನೆ ಬೀಜ ವಿತರಣೆ ಮಾಡಿದೆ ಎಂದು ಆರೋಪಿಸಿ ಪಟ್ಟಣ­ದಲೊ್ಲಿ ಸೋಮವಾರ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಕಂಪೆನಿ ಬೀಜಗಳನ್ನು ಬಿತ್ತನೆ ಮಾಡಿ ನಷ್ಟ ಅನುಭವಿಸಿರುವ ರೈತರಿಗೆ ಪರಿ­ಹಾರ ಒದಗಿಸಬೇಕು ಹಾಗೂ ಕಂಪೆನಿ­ಯನ್ನು ಕಪ್ಪು ಪಟ್ಟಿಗೆ ಸೇರಿಸ­ಬೇಕು ಎಂದೂ ಪ್ರತಿಭಟನಾ­ಕಾರರು ಆಗ್ರಹಿ­ಸಿದರು.

ಪಟ್ಟಣದ ವೀರಭದ್ರೇಶ್ವರ ದೇವ­ಸ್ಥಾನದಿಂದ ಮೆರವಣಿಗೆ ಆರಂಭಿಸಿದ ಪ್ರತಿಭಟನಾಕಾರರು ನಂತರ ತಹಶೀ­ಲ್ದಾರ್‌ ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಿದರು.

ಕಂಪನಿ ಪೂರೈಸಿರುವ ಗೋವಿನ ಜೋಳ ಬೀಜ ಸೇರಿದಂತೆ ಕುಲಾಂತರಿ ಹತ್ತಿ ತಳಿಗಳಾದ ನಿಕ್ಕಿ, ಜಾಕ್‌ಪಾಟ್‌ ಹಾಗೂ ಕನಕ ಬೀಜಗಳು ಸಹ ಕಳಪೆ­ಯಾಗಿವೆ ಎಂದು ಪ್ರತಿಭಟನಾಕಾರರು ದೂರಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ರೈತ ಮುಖಂಡ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯ ವಿರೂಪಾಕ್ಷಪ್ಪ ಬಳ್ಳಾರಿ, ಜಯೋ ಪ್ರೀಮಿಯರ್ ಗೋಲ್ಡ್‌ ಸೇರಿದಂತೆ  ಕಳಪೆ ಬೀಜಗಳನ್ನು ಪೂರೈಕೆ ಮಾಡಿ­ರುವ  ಕಂಪೆನಿಗಳನ್ನು ಕೂಡಲೇ ಕಪ್ಪು ಪಟ್ಟಿಗೆ ಸೇರಿಸಬೇಕು ಹಾಗೂ ನಷ್ಟ ಅನುಭವಿಸಿರುವ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಆಗ್ರಹಿಸಿದರು.

ಕೇಂದ್ರ ಸರ್ಕಾರದ ಕೃಷಿ ನೀತಿ­ಯಿಂ­ದಾಗಿ ರೈತರು ಸಂಕಷ್ಟಕ್ಕ ಒಳಗಾ­ಗಿ­ದ್ದಾರೆ ಎಂದೂ ಆಕ್ರೋಶ ವ್ಯಕ್ತಪಡಿಸಿದರು.
ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ರುದ್ರಗೌಡ ಕಾಡನಗೌಡ್ರ, ಹಸಿರು ಸೇನೆಯ ಅಧ್ಯಕ್ಷ ಗಂಗಣ್ಣ ಎಲಿ, ಮುಖಂಡರಾದ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿದರು.

ಚಿಕ್ಕಪ್ಪ ಛತ್ರದ, ಆಶೋಕ ಮಾಳೇನಹಳ್ಳಿ, ಶಶಿಧರ ದೊಡ್ಮನಿ, ಬಸವರಾಜ ಸಂಕಣ್ಣನವರ, ತಿರಕಪ್ಪ ಮರಬಸಣ್ಣನವರ, ಶಂಭಣ್ಣ ಬಿದರಿ, ಮಂಜಣ್ಣ ಬಾರ್ಕಿ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.