ADVERTISEMENT

‘ವಿದ್ಯಾರ್ಥಿಗಳು ವೃತ್ತಿಯೋಜನೆ ಬೆಳೆಸಿಕೊಳ್ಳಲಿ’

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2018, 10:16 IST
Last Updated 16 ಮಾರ್ಚ್ 2018, 10:16 IST

ರಾಣೆಬೆನ್ನೂರು: ‘ಸರಿಯಾದ ವೃತ್ತಿ ಯೋಜನೆಯು ವಿದ್ಯಾರ್ಥಿಗ: ಭವಿಷ್ಯವನ್ನು ಉಜ್ವಲಗೊಳಿಸುತ್ತದೆ’ ಎಂದು ಬೆಂಗಳೂರು ವಿಜ್‌ಟೂಂಝ್ ಸಂಸ್ಥೆಯ ಸಂಸ್ಥಾಪಕ ಶ್ರೀಧರ ವಿ.ಟಿ ಹೇಳಿದರು.

ನಗರದ ಎಸ್.ಜೆ.ಎಂ.ವಿ. ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶ ಮತ್ತು ವೃತ್ತಿ ಮಾರ್ಗದರ್ಶನ ವಿಭಾಗದ ವತಿಯಿಂದ ಅಂತಿಮ ಬಿಎ ಮತ್ತು ಬಿಕಾಂ. ವಿದ್ಯಾರ್ಥಿನಿಯರಿಗೆ ನಡೆದ ವೃತ್ತಿ ಯೋಜನೆ ಕುರಿತು ಒಂದು ದಿನದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ಇಂದಿನ ವಿದ್ಯಾರ್ಥಿಗಳು ಪದವಿ ಗಳಿಕೆಗಾಗಿ ಮಾತ್ರ ಒತ್ತು ಕೊಟ್ಟಿದ್ದರಿಂದ ನಿರುದ್ಯೋಗ ಸಮಸ್ಯೆಯನ್ನು ಎದುರಿಸಬೇಕಾಗಿದೆ. ಆದ್ದರಿಂದ, ಪದವಿ ಹಂತದಲ್ಲಿಯೇ ವೃತ್ತಿ ಯೋಜನೆ ಬಗ್ಗೆ ಸ್ಪಷ್ಠವಾದ ನಿಲುವನ್ನು ಹೊಂದಿ, ಆ ಯೋಜನೆಯನ್ನು ಸಾಕಾರಗೊಳಿಸಿಕೊಳ್ಳಲು ಪ್ರಯತ್ನಿಸ ಬೇಕು’ ಎಂದರು. ಜಿ.ವಿ.ಕೋರಿ, ಬಿ.ಆರ್.ಡಮ್ಮಳ್ಳಿ, ವಿಜ್‌ಟೂಂಝ್ ಸಂಸ್ಥೆಯ ಹಿರಿಯ ವ್ಯವಸ್ಥಾಪಕ ವಿ.ರಾಜೇಶ್, ಎಫ್.ಎ.ಅತ್ತಾರ ಇದ್ದರು.

ADVERTISEMENT

ಪಾದಪೂಜೆ ನಾಳೆ
ರಾಣೆಬೆನ್ನೂರು:
ನಗರದ ಗಂಗಾಪುರ ರಸ್ತೆಯ ಹಿರೇಮಠದ ಶನೈಶ್ಚರ ಮಂದಿರದಲ್ಲಿ ಲಿಂ.ಸಿದ್ಧಲಿಂಗ ಸ್ವಾಮಿಗಳ ಪುಣ್ಯ ಸ್ಮರಣೋತ್ಸವ ನಿಮಿತ್ತ ಮಾ.17 ರಂದು ಬೆಳಿಗ್ಗೆ 8ಕ್ಕೆ ಮಹಾಯಾಗ, 11ಕ್ಕೆ ಜಂಗಮ ದಂಪತಿಯ ಪಾದಪೂಜೆ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಹಿರೇಮಠದ ಶಿವಯೋಗಿ ಶಿವಾಚಾರ್ಯರು ಸಾನ್ನಿಧ್ಯ ವಹಿಸು ವರು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.