ADVERTISEMENT

ಸಂಗೂರ ಕರಿಯಪ್ಪ ಕಂಚಿನ ಪುತ್ಥಳಿ ಅನಾವರಣ ನಾಳೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2012, 5:15 IST
Last Updated 1 ಅಕ್ಟೋಬರ್ 2012, 5:15 IST

ಹಾವೇರಿ: ಸ್ವಾತಂತ್ರ್ಯ ಹೋರಾಟಗಾರ ಸಂಗೂರ ಕರಿಯಪ್ಪ ಅವರ ಕಂಚಿನ ಪುತ್ಥಳಿ ಪ್ರತಿಷ್ಠಾನ ಕಾರ್ಯಕ್ರಮವನ್ನು ಅ.2ರಂದು ನಡೆಸುವಂತೆ ನಗರದ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಗೂರ ಕರಿಯಪ್ಪ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಎಸ್. ಎಫ್. ಎನ್ ಗಾಜಿಗೌಡರ ಮಾತನಾಡಿ, ಸ್ವಾತಂತ್ರ ಹೋರಾಟಗಾರ ಸಂಗೂರ ಕರಿಯಪ್ಪನವರ ಬದುಕು ಯುವ ಪೀಳಿಗೆಗೆ ಮಾದರಿಯಾಗಲಿ ಎನ್ನುವ ಉದ್ದೇಶದಿಂದ ಜಿಲ್ಲಾ ಕೇಂದ್ರದಲ್ಲಿ ಕರಿಯಪ್ಪನವರ ಮೂರ್ತಿ ಪ್ರತಿಷ್ಠಾಪಿಸಲಾಗುತ್ತಿದೆ ಎಂದರು.

ಕಾಗಿನೆಲೆಯ ನಿರಂಜನಾನಂದಪುರಿ ಶ್ರೀಗಳು ಸಾನ್ನಿಧ್ಯ ವಹಿಸುವರು. ಜಿಲ್ಲೆಯ ಸಚಿವರು, ಶಾಸಕರು, ಚುನಾಯಿತ ಜನ ಪ್ರತಿನಿಧಿಗಳು ಹಾಗೂ ಗಣ್ಯರು ಪಾಲ್ಗೊಳ್ಳುವರು. ಅಂದು ಬೆಳಿಗ್ಗೆ ನಗರದ ಬೀರಲಿಂಗೇಶ್ವರ ದೇವಸ್ಥಾನದಿಂದ ಸಕಲ ವಾದ್ಯಗಳೊಂದಿಗೆ ಮೆರವಣಿಗೆ ನಡೆಯಲಿದೆ ಎಂದರು.

ಸ್ವಾತಂತ್ರ್ಯ ಹೋರಾಟಗಾರ ನೆಗಳೂರಿನ ಪರಮಣ್ಣ ಅರಕಂಗಿ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರರಿಗೆ ಸಮಾಜ ಗೌರವ ನೀಡುತ್ತದೆ ಎನ್ನುವುದಕ್ಕೆ ಸಂಗೂರ ಕರಿಯಪ್ಪನವರ ಕಂಚಿನ ಮೂರ್ತಿ ಪ್ರತಿಷ್ಠಾಪನೆ ಉತ್ತಮ ನಿದರ್ಶನ ಎಂದರು.

ಮುಖಂಡರಾದ ಹನಮಂತಪ್ಪ ಶರಸೂರಿ, ತಾ.ಪಂ.ಸದಸ್ಯ ತಿಪ್ಪಣ್ಣ ಆಲದಕಟ್ಟಿ, ಮಾಲತೇಶ ಬಣಕಾರ, ಪುಟ್ಟಪ್ಪ ಗುಬ್ಬೆರ, ತಿಪ್ಪೇಸ್ವಾಮಿ ಹೊಸಮನಿ, ಸಿ.ಜಿ. ಚೂರಿ, ವೈ.ಎಂ. ಬೇಲಿ, ಶಿವರಾಜ ಪಾಟೀಲ, ಅಶೋಕ ಪೂಜಾರ, ಜಗದೇಶ, ಶಿವಾನಂದ ಮಾಳಿ, ಪ್ರಕಾಶ ಬಡ್ಡಿ, ಅಶೋಕ ಗುದಿಗಿ, ಗುಡದಯ್ಯ ಕುರಗುಂದ, ಶಿವಪ್ಪ ಗುದಿಗಿ, ಬಸಪ್ಪ ತಳ್ಳಳ್ಳಿ, ಚನ್ನಬಸಪ್ಪ ಕರಗಾರ, ಶೃತಿ ಶಂಭಣ್ಣನವರ, ಎಂ. ಎಚ್. ಜಗ್ಗಿನ,
 

ನಿಂಗನಗೌಡ ಗಾಜಿಗೌಡರ, ನಾಗರಾಜ ಜಾಲವಾಡಗಿ, ಚಂದ್ರು ಬೇನಕನಹಳ್ಳಿ, ತಿರಕಪ್ಪ ಹುಳುಕೆಲ್ಲಪ್ಪನವರ, ತಿರಕಪ್ಪ ಮುದ್ದೇರ, ಶಂಕರಗೌಡ ಹಟ್ಟಿ, ಗಣೇಶ ಮೇಲ್ಮಿರಿ, ಕರಿಯಪ್ಪ ಹುಚ್ಚಣ್ಣನವರ, ಮಹಾದೇವಗೌಡ ಗಾಜಿಗೌಡರ, ನಿಂಗನಗೌಡ ಗಾಜಿಗೌಡರ, ಅರ್ಜನ ಜ್ಯೋತಪ್ಪನವರ, ಮಾಲತೇಶ ಬಣಕಾರ, ಹನಂತಪ್ಪ ಮುದ್ದೇರ, ಮಂಜಪ್ಪ ಕುರಿ ಸೇರಿದಂತೆ ಅನೇಕ ಗಣ್ಯರು ಸಭೆಯಲ್ಲಿ ಭಾಗವಹಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT