ADVERTISEMENT

ಸಾರ್ವಕಾಲಿಕ ದಾಖಲೆ ಬರೆದ ಸುಮಾ

ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ವಿದ್ಯಾರ್ಥಿನಿಯರ ಮೇಲುಗೈ

​ಪ್ರಜಾವಾಣಿ ವಾರ್ತೆ
Published 9 ಮೇ 2018, 12:18 IST
Last Updated 9 ಮೇ 2018, 12:18 IST
ಸುಮಾ
ಸುಮಾ   

ಹಾವೇರಿ: ಸವಣೂರ ಪಟ್ಟಣದ ಎಸ್‌ಎಸ್‌ಎಫ್‌ಎಸ್‌ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಸುಮಾ ಕೆ.ಆರ್‌. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 621 (ಶೇ 99.36) ಅಂಕಗಳನ್ನು ಪಡೆದಿದ್ದು, ಜಿಲ್ಲೆಯ ಇತಿಹಾಸದ ಸಾರ್ವಕಾಲಿಕ ಅತ್ಯಧಿಕ ಅಂಕವಾಗಿದೆ.

ಹಾವೇರಿಯ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಪೃಥ್ವಿ ಆರ್‌. ಮಾಂಡ್ರೆ 620 ಅಂಕ ಪಡೆದಿದ್ದಳು. ರಟ್ಟೀಹಳ್ಳಿ ಗ್ರಾಮದ ತರಳಬಾಳು ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಅಲ್ಲಹೀನಾ ಮಜೀಬ್‌ 620 (ಶೇ 99.04) ಅಂಕ ಪಡೆದು ದ್ವಿತೀಯ ಸ್ಥಾನ ಪಡೆದಿದ್ದಾಳೆ. ಎಸ್ಎಸ್ಎಫ್‌ಎಸ್ ಶಾಲೆಯ ಇನ್ನೊಬ್ಬ ವಿದ್ಯಾರ್ಥಿನಿ ಶ್ರಾವಣಿ ಪ್ರಸನ್ನ ರಾಯಚೂರ 619 (ಶೇ 99.02) ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾಳೆ. ಮೂವರೂ ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳು.

ಕನ್ನಡ ಮಾಧ್ಯಮ

ADVERTISEMENT

ಕನ್ನಡ ಮಾಧ್ಯಮದಲ್ಲಿ ಬ್ಯಾಡಗಿ ಪಟ್ಟಣದ ನೂತನ ಪ್ರೌಢ ಶಾಲೆಯ ಪಲ್ಲವಿ ಪ್ರಕಾಶ ಅಂಗಡಿ ಪ್ರಥಮ (615), ರಾಣೆಬೆನ್ನೂರು ತಾಲ್ಲೂಕಿನ ಗುಡಿಹೊನ್ನತ್ತಿ ಸರ್ಕಾರಿ ಪ್ರೌಢಶಾಲೆಯ ಸಚಿನ್ ಬಿ.ಹೊಳಲ ದ್ವಿತೀಯ(615) ಹಾಗೂ ರಾಣೆಬೆನ್ನೂರು ನಗರದ ರಾಜರಾಜೇಶ್ವರಿ ಪ್ರೌಢ ಶಾಲೆಯ ನಿರ್ಮಲಾ ವಿ.ಹಿರೇಮಠ (613) ಮತ್ತು ಗುತ್ತಲ ಎಸ್‌.ಆರ್‌.ಎಸ್‌. ಪ್ರೌಢ ಶಾಲೆಯ ವಿದ್ಯಾರ್ಥಿನಿ ಪಿ.ಆರ್‌. ಸ್ನೇಹಾ ತೃತೀಯ (613)ವನ್ನು ಪಡೆದಿದ್ದಾರೆ.

ಉರ್ದು ಮಾಧ್ಯಮ

ಶಿಗ್ಗಾವಿ ತಾಲ್ಲೂಕು ತಡಸ ಗ್ರಾಮದ ಸರ್ಕಾರಿ ಉರ್ದು ಪ್ರೌಢ ಶಾಲೆಯ ಜಾಸ್ಮಿನ್ ಬೀಡಿ ಪ್ರಥಮ (592), ಹಾವೇರಿ ತಾಲ್ಲೂಕು ಕನವಳ್ಳಿ ಗ್ರಾಮದ ಸರ್ಕಾರಿ ಉರ್ದು ಪ್ರೌಢ ಶಾಲೆಯ ರುಕ್ಸಾನಾಬಾನು ಮುಹಿದ್ದಸಾಬ್‌ ಮುಲ್ಲಾ (587) ಮತ್ತು ಹುಸೇನ್ ಉರ್ದು ಪ್ರೌಢಶಾಲೆಯ ಮೆಹಬೂಬಿ ಬಟ್ಟಿಪುರಿ ದ್ವಿತೀಯ (587) ಹಾಗೂ ರಟ್ಟೀಹಳ್ಳಿ ತಾಲ್ಲೂಕು ಮಾಸೂರು ಗ್ರಾಮದ ಉರ್ದು ಪ್ರೌಢ ಶಾಲೆಯ ತಹಮೀನಾಬಾನು ರಾಣೆಬೆನ್ನೂರು ತೃತೀಯ (584)ಸ್ಥಾನವನ್ನು ಪಡೆದಿದ್ದಾರೆ.

ಜಿಲ್ಲೆಯ ಏಳು ಶೈಕ್ಷಣಿಕ ತಾಲ್ಲೂಕುಗಳ ಪೈಕಿ ಬ್ಯಾಡಗಿ–ಪ್ರಥಮ (86.01), ಹಾವೇರಿ–ದ್ವಿತೀಯ (82.94), ಸವಣೂರ–ತೃತೀಯ (80.64), ಶಿಗ್ಗಾವಿ–ನಾಲ್ಕನೇ ಸ್ಥಾನ (80.59), ಹಿರೇಕೆರೂರ–ಐದನೇ ಸ್ಥಾನ (75.81), ಹಾನಗಲ್‌–ಆರನೇ ಸ್ಥಾನ (70.12) ಹಾಗೂ ರಾಣೆಬೆನ್ನೂರು (69.17) ಕೊನೆಯ ಸ್ಥಾನವನ್ನು ಪಡೆದಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಂದಾನಪ್ಪ ಎಂ. ವಡ್ಡಿಗೇರಿ ಪ್ರಕಟಣೆ
ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.