ADVERTISEMENT

ಹಾವೇರಿಯಲ್ಲಿ ಸಂಗೀತ ಸಮ್ಮೇಳನ 14ರಂದು

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2013, 6:21 IST
Last Updated 12 ಸೆಪ್ಟೆಂಬರ್ 2013, 6:21 IST

ಹಾವೇರಿ: ತಾಲ್ಲೂಕಿನ ಕನವಳ್ಳಿ ಗ್ರಾಮದ ಗಜಾನನ ಸಂಗೀತ ಸೇವಾ ಸಮಿತಿ ವತಿಯಿಂದ ಗಜಾನನೋತ್ಸವದ ಅಂಗವಾಗಿ ಇದೇ ೧೪ ರಂದು ಅಹೋ ರಾತ್ರಿ ೪೩ನೇ ಶಾಸ್ತ್ರೀಯ ಸಂಗೀತ ಸಮ್ಮೇಳನವನ್ನು ಶಹರದ ಹುಕ್ಕೇರಿಮಠ ಶಿವಾನುಭವ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ.

ಶಾಸಕ ಬಸವರಾಜ ಶಿವಣ್ಣನವರ ಸಂಗೀತ ಸಮ್ಮೇಳನ ಉದ್ಘಾಟಿಸ ಲಿದ್ದಾರೆ. ಹುಕ್ಕೇರಿ ಮಠದ ಸದಾಶಿವ ಶ್ರೀಗಳು, ಹೊಸರಿತ್ತಿ ಗುದ್ದಲೀಶ್ವರ ಶ್ರೀಗಳು ಹಾಗೂ ಆನಂದವನದ ಗುರುದತ್ತ ಮೂರ್ತಿ  ಶ್ರೀಗಳು ಸಾನಿಧ್ಯ ವಹಿಸಲಿದ್ದಾರೆ. ಶಾಸಕ ರುದ್ರಪ್ಪ ಲಮಾಣಿ ಅಧ್ಯಕ್ಷತೆ ವಹಿಸಲಿದ್ದಾರೆ.

ಕೆ.ಆರ್. ಬಸೇಗಣ್ಣಿ, ಎಂ.ಎಂ. ಹಿರೇಮಠ, ಶಶಿಕಲಾ ಹುಡೇದ. ಪ್ರಭಾಕರರಾವ್ ಮಂಗಳೂರ, ಡಾ.ರಾಜಣ್ಣ ವೈದ್ಯ, ಸತೀಶ ಪಂಡಿತ, ಬಸವರಾಜ ಹೊಸಮನಿ, ಮಂಜುನಾಥ ಬಸೇಗಣ್ಣಿ, ವೀರಭದ್ರಪ್ಪ ಗೊಡಚಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಖ್ಯಾತ ಹಿಂದುಸ್ತಾನಿ ಗಾಯಕಿ ಭಾರತಿ  ವೈಶಂಪಾಯನ ಕೊಲ್ಲಾಪುರ, ತಬಲಾ ವಾದಕ ಉದಯರಾಜ ಕರ್ಪೂರ ಹಾಗೂ ಖ್ಯಾತ ಗಿಟಾರ್‌ ವಾದಕ ಪ್ರಕಾಶ ಸೊಂಟಕ್ಕೆ, ಹಾನಗಲ್ಲ ಮ್ಯೂಜಿಕ್‌ ಫೌಂಡೇಶನ್ ಅಧ್ಯಕ್ಷ ಮನೋಜ ಹಾನಗಲ್ಲ ಅವರನ್ನು ಸನ್ಮಾನಿಸಲಾಗುತ್ತದೆ ಎಂದು ಸಂಗೀತ ಸೇವಾ ಸಮಿತಿ ಅಧ್ಯಕ್ಷ ಡಾ.ಜಿ.ಎಸ್. ವೈದ್ಯ ಹಾಗೂ ಕಾರ್ಯಾಧ್ಯಕ್ಷ ಎಲ್.ಎ. ನಾಡಗೇರ ತಿಳಿಸಿದ್ದಾರೆ.

ಸಂಗೀತ ಕಾರ್ಯಕ್ರಮ: ಅಹೋರಾತ್ರಿ ನಡೆಯಲಿರುವ ನೃತ್ಯ ಹಾಗೂ ಗಾಯನ ವಾದನ ಕಾರ್ಯಕ್ರಮದಲ್ಲಿ ನಾಡಿನ ಹೆಸರಾಂತ ಕಲಾವಿದರು  ಭಾಗವಹಿಸಲಿದ್ದಾರೆ.

ಪಂ. ಭಾರತಿ ವೈಶಂಪಾಯನ, ಕೃಷ್ಣೆಂದ್ರ ವಾಡಿಕರ ಹುಬ್ಬಳ್ಳಿ ವಿದ್ವಾನ ರವಿಕಿರಣ ಮಣಿಪಾಲ, ಬಾಲಚಂದ್ರ ಯಾಜಿ ಸಾಗರ, ಹುಬ್ಬಳ್ಳಿಯ ರೇಖಾ ಹೆಗಡೆ, ಬೆಂಗಳೂರಿನ ಶುತಿ ಭಟ್‌, ಧಾರವಾಡದ ಅಯ್ಯಪ್ಪಯ್ಯ ಹಡಲಿಮಠ ಸೇರಿದಂತೆ ಅನೇಕ ವಿದ್ವಾಂಸರು ಸಂಗೀತ ಪ್ರಸ್ತುತ ಪಡಿಸಲಿದ್ದಾರೆ.

ಯುವ ಕಲಾವಿದ ಹುಬ್ಬಳ್ಳಿ ನಿಖಿಲ್ ಜೋಶಿ ಅವರ ಸಿತಾರ್ ಹಾಗೂ ಪಂಡಿತ್ ಪ್ರಕಾಶ ಸೊಂಟಕ್ಕೆ ಅವರ ಗಿಟಾರ್‌ ವಾದನ ಸಮ್ಮೇಳನದ ಪ್ರಮುಖ ಆಕರ್ಷಣೆಯಾಗಿದೆ. ಸಂಜನಾ ಜೋಶಿ ನೃತ್ಯ  ಪ್ರದರ್ಶಿಸಲಿದ್ದಾರೆ.

ಪಕ್ಕವಾದ್ಯದಲ್ಲಿ ಉದಯರಾಜ ಕರ್ಪೂರ, ಎಮ್.ಎಸ್. ಕಿರಣ, ಮೇಘಶಾಮ ಹಾಗೂ ಕೇದಾರ ವೈಶಂಪಾಯನ್ ತಬಲಾ ಸಾಥ್‌, ವಾಮನ ವಾಗೂಕರ್. ಕೆ.ಎನ್. ಕುಲಕರ್ಣಿ ಹಾಗೂ ಪ್ರಕಾಶ ಹೆಗಡೆ. ಹಾರ್ಮೊನಿಯಂ ಸಾಥ್‌ ನೀಡಲಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ಅಧ್ಯಕ್ಷ ಡಾ. ಜಿ.ಎಸ್. ವೈದ್ಯ ಅವರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.