ADVERTISEMENT

‘ಕಬ್ಬಿಗೆ ಬೆಲೆ ನಿಗದಿ ಸರಿಪಡಿಸಿ’

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2013, 8:23 IST
Last Updated 2 ಡಿಸೆಂಬರ್ 2013, 8:23 IST

ಶಿಗ್ಗಾವಿ: ಕಬ್ಬಿನ ಬೆಳೆಗೆ ಬೆಲೆ ನಿಗದಿ ಪಡಿಸುವಂತೆ ಆಗ್ರಹಿಸಿ ಶಿಗ್ಗಾವಿ  ತಾಲ್ಲೂಕು ಅನ್ನದಾತ  ರೈತ ಹೋರಾಟ ಸಮಿತಿ ಅನೇಕ ಸದಸ್ಯರು ಪ್ರತಿಭಟನೆ ನಡೆಸಿ ತಹಶೀಲ್ದಾರ್‌ ಎಸ್‌.ಎ.ಚೌಗಲೆ ಅವರಿಗೆ ಮನವಿ ಅರ್ಪಿಸಿದರು.

ಪುರಸಭೆ ವೃತ್ತದಿಂದ ಆರಂಭವಾದ ರೈತರ ಪ್ರತಿಭಟನಾ ಮೆರವಣಿಗೆ ಪಟ್ಟಣದ ಪ್ರಮುಖ ಬಿದಿಯಲ್ಲಿ ಸಂಚರಿಸಿತು.  ಸರ್ಕಾರದ ನೀತಿ ವಿಳಂಬ ನೀತಿ ಖಂಡಿಸಿ ಘೋಷಣೆ ಕೂಗಿದರು.

ಪ್ರತಿ ಟನ್‌ಗೆ ಸುಮಾರು 2500 ದರ ನಿಗದಿಪಡಿಸಬೇಕು. ಸುವರ್ಣ ಸೌಧ ಮುಂಭಾಗದಲ್ಲಿ ಕಬ್ಬು ಬೆಳೆಗಾರ ಪ್ರತಿಭಟನೆಯಲ್ಲಿ ಸಾವನ್ನಪ್ಪಿದ ರೈತ ಹುತ್ಮಾನ ಕುಟುಂಬಕ್ಕೆ ಸಮಾರು 25ಲಕ್ಷ ರೂ.ಪರಿಹಾರ ನೀಡಬೇಕು. ಕಬ್ಬು ಬೆಳೆದು ಹಾನಿಯಾದ ರೈತರಿಗೆ ಪರಿಹಾರ ನೀಡಬೇಕು.   ಅಲ್ಲದೆ ರೈತರನ್ನೊಳಗೊಂಡ ಜಿಲ್ಲಾ ಮಟ್ಟದ ಸಮಿತಿ ರಚಿಸಬೇಕೆಂದ ಪ್ರತಿಭಟನಾ ನಿರತ ರೈತರು ಆಗ್ರಹಿಸಿದರು.

ವಿಧಾನ ಪರಿಷತ್‌ ಸದಸ್ಯ ಸೋಮಣ್ಣ ಬೇವಿನಮರದ ಮಾತ ನಾಡಿ, ಸರ್ಕಾರ ರೈತ ಆತ್ಮಹತ್ಯೆ ಮಾಡಿ ಕೊಳ್ಳುವ ಮುನ್ನ ಪರಿಹಾರ ನೀಡ ಬೇಕು. ಆದರೆ ಈ ನಿಟ್ಟಿನಲ್ಲಿ ವಿಳಂಬ ಮಾಡುತ್ತಿರುವ ಸರ್ಕಾರಕ್ಕೆ ರೈತರೆ ತಕ್ಕ ಪಾಠ ಕಲಿಸಲ್ಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕು ಅನ್ನದಾತ  ರೈತ ಹೋರಾಟ ಸಮಿತಿ ಅಧ್ಯಕ್ಷ ಗಂಗಣ್ಣ ಗಡ್ಡೆ, ನವೀನ ಸವಣೂರ, ರಾಜಣ್ಣ ಕುಲಕರ್ಣಿ, ರಮೇಶ ಬೆಡಿಕೆ, ಬೂದಪ್ಪ ಬೂದಿಹಾಳ, ಶಂಕ್ರಣ್ಣ ಮೂರಡಣ್ಣ ವರ, ಚನ್ನಪ್ಪ ಕೋರಿ, ಚನ್ನಪ್ಪ ಗಾಣಿಗೇರ ಸೇರಿದಂತೆ ಅನೇಕ ರೈತರು ಹಾಗೂ ಜೈ ಕರ್ನಾಟಕ ಸಂಘಟನೆ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.