ADVERTISEMENT

‘ಮಾನವ ಹಕ್ಕು ಅನುಸರಿಸಿ ನಡೆಯಿರಿ’

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2013, 6:10 IST
Last Updated 16 ಡಿಸೆಂಬರ್ 2013, 6:10 IST

ಹಾವೇರಿ: ‘ಸರ್ವರಿಗೂ ಸಮಬಾಳು ಎಂಬ ತತ್ವದಡಿ ಬದುಕಲು ಸಂವಿಧಾನ ಮಾನವ ಹಕ್ಕುಗಳನ್ನು ನೀಡಿದೆ. ಪ್ರತಿಯೊಬ್ಬರು ಅವುಗಳನ್ನು ಅನುಸರಿಸಿ ನಡೆಯಬೇಕು’ ಎಂದು ಚಿಕ್ಕಬಾಸೂರ ಕೆವಿಜಿ ಬ್ಯಾಂಕಿನ ಶಾಖಾಧಿಕಾರಿ ಡಾ. ಸಿ.ನಾರಾಯಣ ಹೇಳಿದರು.

ತಾಲ್ಲೂಕಿನ ಚಿಕ್ಕಬಾಸೂರ ಗ್ರಾಮದಲ್ಲಿ ಕೆವಿಜಿ ಬ್ಯಾಕ್‌ ಚಿಕ್ಕಬಾಸೂರ ಶಾಖೆ ವತಿಯಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ವಿಶ್ವ ಮಾನವ ಹಕ್ಕು ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಾನವ ಹಕ್ಕುಗಳಿಗೆ ತುಂಬಾ ಮಹತ್ವವಿದೆ. ಹಕ್ಕುಗಳನ್ನು ಉಲ್ಲಂಘಿಸಿ ನಡೆಯುವುದು ಭಾರತೀಯ ಪ್ರಜೆಗಳಿಗೆ ಶೋಭೆ ತರುವಂಥದ್ದಲ್ಲ. ಸಂವಿಧಾನ ನೀಡಿದ ಹಕ್ಕುಗಳ ಜತೆಗೆ ಕರ್ತವ್ಯಗಳನ್ನು ಸರಿಯಾಗಿ ಪಾಲಿಸಬೇಕು ಎಂದು ಸಲಹೆ ಮಾಡಿದರು.

ಕೂಲಿ ಕಾರ್ಮಿಕರ ಸಂಘದ ಜಿಲ್ಲಾ ಅಧ್ಯಕ್ಷ ಆಂಜನೇಯ ಹರಿಜನ ಮಾತನಾಡಿ, ಪ್ರತಿಯೊಬ್ಬರು ತಮ್ಮ ಹಕ್ಕುಗಳ ಮತ್ತು ಜವಾಬ್ದಾರಿಯನ್ನು ಅರಿತು ನಡೆದಾಗ ಮಾತ್ರ ಸುಸಂಸ್ಕೃತ ಸಮಾಜದ ನಿರ್ಮಾಣ ಸಾಧ್ಯ ಎಂದರು.ಕಾರ್ಯಕ್ರಮದಲ್ಲಿ ಕೆ.ವಿ.ಜಿ. ಬ್ಯಾಂಕಿನ ಅಧಿಕಾರಿ ಎಫ್‌.ಎಲ್‌.ಬಾಲಮ್ಮನವರ, ಸಿಬ್ಬಂದಿ ಗಳಾದ ಮಹೇಶ ನಾಯಕ, ತಿಪ್ಪಣ್ಣ, ಮಲ್ಲಯ್ಯ ಪ್ಯಾಟಿಮಠ, ಪ್ರಭು ಚೌಕಿಮಠ,  ಕೂಲಿ ಕಾರ್ಮಿಕರ ಸಂಘದ ಪದಾಧಿಕಾರಿಗಳಾದ ಕಾರ್ಯದರ್ಶಿ ರಾಜಪ್ಪ ಹಾಲದಳ್ಳಿ, ಕಾಂತಪ್ಪ ಹರಿಜನ, ಗಣೇಶ ಹೊಸಮನಿ, ವಿಜಯ್‌ ಹಂಚಿನಮನಿ, ರತ್ನಮ್ಮ ಪೂಜಾರ, ಗಣೇಶ ನಿಂಗನಗೌಡ್ರ, ಕೂಲಿ ಕಾರ್ಮಿಕರು ಹಾಗೂ ಚಿಕ್ಕಬಾಸೂರು ಗ್ರಾಮದ ಸಾರ್ವಜನಿಕರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.