ADVERTISEMENT

ದುರ್ಗಾದೇವಿ ಕೆರೆಗೆ ಬಾಗಿನ ಅರ್ಪಣೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2022, 15:54 IST
Last Updated 23 ಜುಲೈ 2022, 15:54 IST
ಹಿರೇಕೆರೂರಿನ ದುರ್ಗಾದೇವಿ ಕೆರೆಗೆ ಕೃಷಿ ಸಚಿವ ಬಿ.ಸಿ. ಪಾಟೀಲ, ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ ಬಾಗಿನ ಅರ್ಪಿಸಿದರು
ಹಿರೇಕೆರೂರಿನ ದುರ್ಗಾದೇವಿ ಕೆರೆಗೆ ಕೃಷಿ ಸಚಿವ ಬಿ.ಸಿ. ಪಾಟೀಲ, ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ ಬಾಗಿನ ಅರ್ಪಿಸಿದರು   

ಹಿರೇಕೆರೂರ(ಹಂಸಭಾವಿ): ಪಟ್ಟಣದ ಹೊರವಲಯದ ದುರ್ಗಾದೇವಿ ಕೆರೆ ತುಂಬಿರುವ ಹಿನ್ನೆಲೆಯಲ್ಲಿ ಶುಕ್ರವಾರ ಕೃಷಿ ಸಚಿವ ಬಿ.ಸಿ. ಪಾಟೀಲ, ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ ಬಾಗಿನ ಅರ್ಪಿಸಿದರು.

ಸಚಿವ ಬಿ.ಸಿ. ಪಾಟೀಲ ಮಾತನಾಡಿ, ‘ಈ ಭಾಗದ ರೈತರ ಜೀವನಾಡಿಯಾಗಿರುವ ಹಾಗೂ ಹತ್ತಾರು ಗ್ರಾಮಗಳ ಅಂತರ್ಜಲ ಮಟ್ಟ ಹೆಚ್ಚಿಸುವ ಐತಿಹಾಸಿಕ ದುರ್ಗಾದೇವಿ ಕೆರೆ ತುಂಬಿರುವುದು ಖುಷಿ ತಂದಿದೆ. ತಾಲ್ಲೂಕಿನ ಸುಮಾರು 60 ಗ್ರಾಮಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಳವಾಗಿ ಕುಡಿಯುವ ನೀರಿಗೆ ತೊಂದರೆಯಾಗುವುದಿಲ್ಲ. ಅಚ್ಚುಕಟ್ಟು ಭಾಗದಲ್ಲಿ ರೈತರು ವಾರ್ಷಿಕ ಎರಡು ಬೆಳೆಗಳನ್ನು ಪಡೆಯಲು ಅನುಕೂಲವಾಗುತ್ತದೆ’ ಎಂದರು.

ಯು.ಬಿ. ಬಣಕಾರ ಮಾತನಾಡಿ, ‘ದುರ್ಗಾದೇವಿ ಕೆರೆ ತುಂಬಿದರೆ ಸುತ್ತಲಿನ ಗ್ರಾಮಗಳ ರೈತರ ಬದುಕು ಹಸನಾಗುತ್ತದೆ’ ಎಂದರು.

ADVERTISEMENT

ಪಟ್ಟಣ ಪಂಚಾಯ್ತಿ ಅಧ್ಯಕ್ಷ ಕಂಠಾಧರ ಅಂಗಡಿ, ಜಗದೀಶ ತಂಬಾಕದ, ಉಪಾಧ್ಯಕ್ಷೆ ಕುಸುಮ ಬಣಕಾರ, ಸದಸ್ಯರಾದ ಹರೀಶ ಕಲಾಲ, ವಿಜಯಾಶ್ರೀ ಬಂಗೇರ, ಹನುಮಂತಪ್ಪ ಕುರುಬರ, ಸುಧಾ ಚಿಂದಿ, ರಜಿಯಾ ಬೇಗಂ ಅತದಿ, ರವಿಶಂಕರ ಬಾಳೀಕಾಯಿ, ಅಲ್ತಾಫ್‌ಖಾನ ಪಠಾಣ, ರಮೇಶ ಕೋಡಿಹಳ್ಳಿ, ಬಸವರಾಜ ಕಟ್ಟಿಮನಿ, ಸತೀಶ ಕೊರಿಗೌಡ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.