ADVERTISEMENT

ಪ್ರಾಯೋಗಿಕ ಕಲಿಕೆ ಅಗತ್ಯ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2018, 9:05 IST
Last Updated 27 ಮಾರ್ಚ್ 2018, 9:05 IST

ಅಫಜಲಪುರ: ‘ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಭೌತಶಾಸ್ತ್ರ ವಿಷಯಗಳು ಮನದಟ್ಟಾಗುವಂತೆ ತಿಳಿಸಿಕೊಡಬೇಕು. ಪ್ರತಿಯೊಂದು ವಿಷಯಗಳನ್ನು ಪ್ರಾಯೋಗಿಕವಾಗಿ ಅರ್ಥವಾಗುವಂತೆ ತಿಳಿಸಬೇಕು’ ಎಂದು ತೆಲಂಗಾಣ ರಾಜ್ಯದ ನಲಗೊಂಡ ಮಹಾತ್ಮಗಾಂಧಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಖಾಜಾ ಅಲ್ತಾಫ್‌ ಹುಸೇನ್ ಹೇಳಿದರು.

ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಭೌತ ಮತ್ತು ಗಣಿತ, ವಿಜ್ಞಾನಗಳಲ್ಲಿ ಇತ್ತೀಚಿನ ಸಂಶೋಧನೆಗಳ ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.

ಮೈಕ್ರೋಸ್ಕೋಪ್‌, ಸ್ಕ್ಯಾನಿಂಗ್‌, ಎಲೆಕ್ಟ್ರಾನ್‌ ಮೈಕ್ರೋಸ್ಕೋಪ್ ಇತ್ಯಾದಿ ಮಾಪನಗಳನ್ನು ಬಳಸಿ ವಿಶಿಷ್ಟವಾದ ನ್ಯಾನೋ ವಸ್ತುಗಳನ್ನು ಮಾಪನ ಮಾಡಿರುವುದನ್ನು ಎಂದು ತಿಳಿಸಿದರು.

ADVERTISEMENT

ಭೌತಿಕ ವಿಜ್ಞಾನಗಳಲ್ಲಿ ಸೂಕ್ಷ್ಮಾತಿಸೂಕ್ಷ್ಮ ಕಣಗಳ ಅಳತೆ ಮಾಡುವ ವಿವಿಧ ಮಾಪನಗಳು, ಅವುಗಳ ವೈಶಿಷ್ಠತೆ ಮತ್ತು ಮಹತ್ವದ ಕುರಿತು ವಿವರಿಸಿದರು ಪ್ರಾಚಾರ್ಯ ಎಸ್.ವೈ.ಪಾಟೀಲ ಅಧ್ಯಕ್ಷತೆ ವಹಿಸಿದ್ದರು.

ಭೌತಶಾಸ್ತ್ರ ಪ್ರಾಧ್ಯಾಪಕ ಡಾ.ವಿ.ಎಂ.ಜಾಲಿ ಮಾತನಾಡಿ, ಆಧುನಿಕ ಬೆಳವಣಿಗೆಗಳುಮಹತ್ವ ಪೂರ್ಣವಾಗಿವೆ ಎಂದರು. ಗಣಿತಶಾಸ್ತ್ರ ಪ್ರಾಧ್ಯಾಪಕ ಡಾ.ಎನ್‌.ಬಿ.ನಡುವಿನಮನಿ ಮಾತನಾಡಿದರು.

ಡಾ.ಸಂಗಣ್ಣ ಸಿಂಗೆ, ಡಾ.ಅಮೀನಾ ಪರ್ವಿನ್, ಡಾ.ಶಶಿರಾ ತನ್ವೀರ್ ಪರಿಚಯಿಸಿದರು.

ಮಲ್ಲಿಕಾರ್ಜುನ ಜಿ. ಸ್ವಾಗತಿಸಿದರು. ಡಾ.ಸೂಗುರೇಶ್ವರ ಆರ್‌. ಎಂ. ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.