ADVERTISEMENT

‘ಖರ್ಗೆ ಗೆದ್ದರೆ ಸಿಎಂ ಕುರ್ಚಿಗೆ ಕುತ್ತು’

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2014, 6:20 IST
Last Updated 7 ಏಪ್ರಿಲ್ 2014, 6:20 IST

ಗುಲ್ಬರ್ಗ: ಗುಲ್ಬರ್ಗ ಲೋಕಸಭಾ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಗೆದ್ದು ಬಂದರೆ ಮತ್ತೊಮ್ಮೆ ಕೇಂದ್ರದಲ್ಲಿ ಸಚಿವರಾ ಗುವುದು ಅನಿಶ್ಚಿತ. ಆದರೆ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ಥಾನಕ್ಕೆ ತೊಂದರೆಯಾಗಲಿದೆ ಎಂದು ಮಾಜಿ ಸಚಿವ ಬಸನಗೌಡ ಪಾಟೀಲ ಯತ್ನಾಳ್‌ ಅಭಿಪ್ರಾಯಪಟ್ಟರು.

ಸಿದ್ದರಾಮಯ್ಯ ಮುಖ್ಯಮಂತ್ರಿ ಯಾಗಿ ಮುಂದುವರಿ ಯುವ ಆಸೆ , ಹೊಂದಿದ್ದು,  ಖರ್ಗೆರನ್ನು ಸೋಲಿ ಸಲು  ಹಿಂಬಾಲಕರಿಂದ ಕಾರ್ಯನಿ ರ್ವಹಿಸುತ್ತಿದ್ದಾರೆ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಖರ್ಗೆ ಅವರನ್ನು ಬಿಜೆಪಿ ನಾಯಕರೇ ಮುಖ್ಯಮಂತ್ರಿ ಮಾಡಲು ನಿರ್ಧರಿಸಿದಂತಿದೆ ಎನ್ನುವ ಪ್ರಶ್ನೆಗೆ ಉತ್ತರಿಸಿ, ‘ಇರುವ ಸತ್ಯವನ್ನು ಹೇಳುತ್ತಿ ದ್ದೇವೆ. ಖರ್ಗೆ ಅವರು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಎಂಬುದು ಎಲ್ಲ ರಿಗೂ ಗೊತ್ತಿರುವ ಸಂಗತಿ’ ಎಂದರು.

10 ವರ್ಷ ಆಡಳಿತ ನಡೆಸಿದ ಯುಪಿಎ ಸರ್ಕಾರದಿಂದ ದೇಶದಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದೆ.  ವಸ್ತುಗಳ ದರ ಗಗನಮುಖಿಯಾಗಿದೆ. ಈ ಬಾರಿ ಜನರು ಬದಲಾವಣೆ ಬಯಸಿದ್ದಾರೆ’ ಎಂದರು. ವಿಧಾನ ಪರಿಷತ್‌ ಮಾಜಿ ಸದಸ್ಯ ಶಶೀಲ್‌ ಜಿ.ನಮೋಶಿ, ಮುಖಂಡರಾದ ಬಾಬುರಾವ್‌ ಚಹ್ವಾಣ, ನಾಮದೇವ ರಾಠೋಡ, ಉದಯಕುಮಾರ್‌ ಜೇವ ರ್ಗಿ, ಶರಣಬಸಪ್ಪ ಹೀರಾ ಇದ್ದರು.

‘ರೈಲ್ವೆ ವಿಭಾಗ: ಎನ್‌ಡಿಎ ನಿರ್ಧಾರ’
ಗುಲ್ಬರ್ಗ: ಎನ್‌ಡಿಎ ಸರ್ಕಾರದ ಅವಧಿಯಲ್ಲಿ ರಾಜ್ಯದರ್ಜೆ ರೈಲ್ವೆ ಸಚಿವನಾಗಿ ಗುಲ್ಬರ್ಗ ಜಿಲ್ಲೆಗೆ ಸಾಕಷ್ಟು ಅನುಕೂಲ ಮಾಡಿದ್ದೇನೆ. ಬಸವಾ ಎಕ್ಸ್‌ಪ್ರೆಸ್‌ ರೈಲು ಆರಂಭಿಸಲಾಯಿತು. ಅಲ್ಲದೆ ಕೆಲವು ರೈಲುಗಳ ಸೇವೆ ವಿಸ್ತರಿಸಲಾಯಿತು. ಖರ್ಗೆ ಅವರೊಬ್ಬರೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಬಿಜೆಪಿ ಸರ್ಕಾರ ಕೂಡಾ ಅಭಿವೃದ್ಧಿ ಮಾಡಿದೆ ಎಂದರು.

‘ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಈ ಹಿಂದೆ ಕೈಗೊಂಡಿದ್ದ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಹೊಸದಾಗಿ ಯಾವುದೇ ಕೆಲಸ ಮಾಡಿಲ್ಲ. ಗುಲ್ಬರ್ಗದಲ್ಲಿ ರೈಲ್ವೆ ವಿಭಾಗ ಕಚೇರಿ ಆರಂಭ ಎನ್‌ಡಿಎ ಸರ್ಕಾರದ ಅವಧಿಯಲ್ಲೇ ನಿರ್ಧಾರವಾಗಿತ್ತು. ರೈಲ್ವೆ ಸಚಿವ ರಾಗಿದ್ದ ನಿತೀಶಕುಮಾರ್‌ ಮತ್ತು ನಾನು ಒಟ್ಟಾಗಿ ಈ ನಿರ್ಧಾರ ಕೈಗೊಂಡಿದ್ದೆವು. ಆದರೆ, ತಕ್ಷಣ ಚುನಾವಣೆ ಎದುರಾಗಿದ್ದರಿಂದ ಇದನ್ನು ಘೋಷಿಸಲು ಸಾಧ್ಯವಾಗಿರಲಿಲ್ಲ’ ಎಂದು  ಸಚಿವ ಬಸನಗೌಡ ಪಾಟೀಲ ಯತ್ನಾಳ್‌ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.