ಆಳಂದ: ಪಟ್ಟಣದ ಹೊರವಲಯದಲ್ಲಿನ ಆಳಂದ ರೈತ ಸಂಪರ್ಕ ಕೇಂದ್ರದಲ್ಲಿರುವ ಅಲ್ಮೇರಾ ಒಡೆದು ಅಲ್ಲಿದ್ದ ₹ 11.50 ಲಕ್ಷ ಹಣವನ್ನು ಸೋಮವಾರ ಕಳವು ಮಾಡಲಾಗಿದೆ.
ರೈತ ಸಂಪರ್ಕ ಕೇಂದ್ರದಲ್ಲಿ ಮುಂಗಾರು ಬಿತ್ತನೆ ಬೀಜಗಳ ರಿಯಾಯಿತಿ ದರದಲ್ಲಿ ರೈತರಿಗೆ ವಿತರಣೆ ಕಾರ್ಯ ನಡೆದಿದೆ. ಜೂನ್ 7, 9ರಂದು ಬಿತ್ತನೆ ಬೀಜ ಮಾರಾಟದಿಂದ ಸಂಗ್ರಹಿಸಿದ ಹಣವನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಲು ವಿಳಂಬವಾಗಿದೆ. ರೈತರು ಅಧಿಕ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಸಂಜೆ 6 ಗಂಟೆವರೆಗೆ ಬೀಜ ವಿತರಣೆ ನಂತರ ಮರುದಿನ ಹಣವನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತಿತ್ತು. ಎರಡು ದಿನದ ಒಟ್ಟು ₹ 11.50 ಲಕ್ಷ ಹಣವನ್ನು ಕಚೇರಿಯ ಅಲ್ಮೇರಾದಲ್ಲಿ ಸಂಗ್ರಹಿಸಿಡಲಾಗಿತ್ತು. ಸೋಮವಾರ ರಾತ್ರಿ ರೈತ ಸಂಪರ್ಕ ಕೇಂದ್ರದ ಒಳಗೆ ನುಗ್ಗಿ, ಕಚೇರಿ ಕೋಣೆ ಬಾಗಿಲು ಮುರಿದು ಅಲ್ಮೇರಾ ಒಡೆದು ಹಣ ದೋಚಲಾಗಿದೆ’ ಎಂದು ಕೃಷಿ ಸಹಾಯಕ ನಿರ್ದೇಶಕ ಶರಣಗೌಡ ಪಾಟೀಲ ಮಾಹಿತಿ ನೀಡಿದರು.
ಕಚೇರಿ ಕೋಣೆಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ. ಪ್ರಸ್ತುತ ಅದು ಸಕ್ರಿಯವಾಗಿಲ್ಲ. ಘಟನೆ ಸಂಬಂಧ ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈಗಾಗಲೇ ಬೆರಳಚ್ಚು ತಜ್ಞರು, ಶ್ವಾನದಳ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.