ಕಮಲಾಪುರ: ಮ್ಯಾಕ್ಸಿಕ್ಯಾಬ್ –ಬೈಕ್ ಮಧ್ಯೆ ಡಿಕ್ಕಿ ಸಂಭವಿಸಿದ ಪರಿಣಾಮ ಮದುಮಗ ಸೇರಿ ಇಬ್ಬರು ಮೃತಪಟ್ಟ ಘಟನೆ ತಾಲ್ಲೂಕಿನ ಅಂತಪನಾಳ ಕ್ರಾಸ್ ಬಳಿ ಭಾನುವಾರ ನಡೆದಿದೆ.
ತಾಲ್ಲೂಕಿನ ಚೇಂಗಟಾ ಗ್ರಾಮದ ನಿವಾಸಿ ಸುನೀಲ ನಿಂಗಪ್ಪ ಪೂಜಾರಿ (25) ಹಾಗೂ ಇವರ ಸೋದರತ್ತೆಯ ಮಗ ಗೋಗಿ (ಕೆ) ಗ್ರಾಮದ ಶರಣಬಸಪ್ಪ ಸಾಯಿಬಣ್ಣ ಪೂಜರಿ (42) ಮೃತಪಟ್ಟಿದ್ದಾರೆ. ಮೇ 3ರಂದು ಸುನೀಲ ಅವರ ಮದುವೆ ನಿಶ್ಚಯವಾಗಿತ್ತು.
ಸುನೀಲ ಅವರ ಮದುವೆ ಸಿದ್ಧತೆ ನಿಮಿತ್ತ ಸೋದರತ್ತೆಯ ಮಗ ಶರಣಬಸಪ್ಪ ಚೇಂಗಟಾಕ್ಕೆ ಆಗಮಿಸಿದ್ದರು. ಇಬ್ಬರು ಸೇರಿ ಬೈಕ್ನಲ್ಲಿ ಮದುವೆ ಬಟ್ಟೆ ಖರೀದಿಗಾಗಿ ಕಮಲಾಪುರಕ್ಕೆ ತೆರಳುತ್ತಿದ್ದರು. ಈ ವಾಳೆ ಕಮಲಾಪುರದಿಂದ ಚೇಂಗಟಾಕ್ಕೆ ತೆರಳುತ್ತಿದ್ದ ಮ್ಯಾಕ್ಸಿಕ್ಯಾಬ್ ಡಿಕ್ಕಿ ಹೊಡೆದಿದ್ದು ಸುನೀಲ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಗೊಂಡಿದ್ದ ಶರಣಬಸಪ್ಪ ಅವರನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿಸುತ್ತಿದ್ದಂತೆ ಅವರೂ ಸಹ ಕೊನೆಯುಸಿರೆಳೆದ್ದಿದ್ದಾರೆ.
ಶರಣಬಸಪ್ಪ ಅವರಿಗೆ ತಾಯಿ, ಪತ್ನಿ, ಪುತ್ರ, ಪುತ್ರಿ ಇದ್ದಾರೆ. ಸುನೀಲ ಮದುವೆ ನಿಮಿತ್ತ ಸೋಮವಾರ ಎಲ್ಲಮ್ಮನ ಕೊಡ ಹೊರಬೇಕಿತ್ತು. ಸಂಭ್ರಮ ತುಂಬಿದ್ದ ಮನೆಗೆ ಸಾವಿನ ಸುದ್ದಿ ಬರಸಿಡಿಲು ಬಡಿದಂತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.