ADVERTISEMENT

ಭದ್ರತಾ ಸಿಬ್ಬಂದಿಗೆ ಒದಗಿಸಿದರೆ ನಿಲ್ದಾಣ ಸೇವೆಗೆ ಸಜ್ಜು

ವಿಮಾನ ನಿಲ್ದಾಣದ ನಿರ್ದೇಶಕ ಸುಶೀಲ್‌ ಶ್ರೀವಾಸ್ತವ ಅವರೊಂದಿಗೆ ಸಂವಾದ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2019, 9:49 IST
Last Updated 5 ಅಕ್ಟೋಬರ್ 2019, 9:49 IST
ಕಲಬುರ್ಗಿ ವಿಮಾನ ನಿಲ್ದಾಣದ ನಿರ್ದೇಶಕ ಸುಶೀಲ್‌ ಶ್ರೀವಾಸ್ತವ ಮಾತನಾಡಿದರು. ಎಚ್‌ಕೆಸಿಸಿಐ ಅಧ್ಯಕ್ಷ ಅಮರನಾಥ ಸಿ. ಪಾಟೀಲ, ಗೌರವ ಕಾರ್ಯದರ್ಶಿ ಶಶಿಕಾಂತ ಪಾಟೀಲ ಇದ್ದರು
ಕಲಬುರ್ಗಿ ವಿಮಾನ ನಿಲ್ದಾಣದ ನಿರ್ದೇಶಕ ಸುಶೀಲ್‌ ಶ್ರೀವಾಸ್ತವ ಮಾತನಾಡಿದರು. ಎಚ್‌ಕೆಸಿಸಿಐ ಅಧ್ಯಕ್ಷ ಅಮರನಾಥ ಸಿ. ಪಾಟೀಲ, ಗೌರವ ಕಾರ್ಯದರ್ಶಿ ಶಶಿಕಾಂತ ಪಾಟೀಲ ಇದ್ದರು   

ಕಲಬುರ್ಗಿ:ರಾಜ್ಯ ಸರ್ಕಾರವು ವಿಮಾನ ನಿಲ್ದಾಣದ ಸಂರಕ್ಷಣೆಗೆ ಅವಶ್ಯಕವಿರುವ ಪೊಲೀಸ್‌ ಸಿಬ್ಬಂದಿ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಯನ್ನು ಹದಿನೈದು ದಿನಗಳ ಮೊದಲು ಒದಗಿಸಿದರೆ, ವಿಮಾನ ನಿಲ್ದಾಣ ನವೆಂಬರ್ 1ರ ರಾಜ್ಯೋತ್ಸವ ದಿನದಂದು ಸೇವೆಗೆ ಸಜ್ಜುಗೊಳ್ಳಲಿದೆ ಎಂದು ವಿಮಾನ ನಿಲ್ದಾಣ ನಿರ್ದೇಶಕ ಸುಶೀಲ್ ಶ್ರೀವಾಸ್ತವ ಭರವಸೆ ನೀಡಿದರು.

ಹೈದರಾಬಾದ್‌ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ (ಎಚ್‌ಕೆಸಿಸಿಐ) ಆಹ್ವಾನದ ಮೇರೆಗೆ ಶುಕ್ರವಾರ ಉದ್ಯಮಿಗಳು ಹಾಗೂ ಬ್ಯಾಂಕ್‌ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದ ಅವರು,ಈಗಾಗಲೇ ಅಲಯನ್ಸ್‌ ಏರ್‌ ಮತ್ತು ಸ್ಟಾರ್ ಏರ್‌ವೇಸ್‌ ಸಂಸ್ಥೆಗಳು ವಿಮಾನ ಹಾರಾಟಗಳಿಗೆ ಸಿದ್ಧವಾಗಿವೆ. ತಿರುಪತಿ, ಬೆಂಗಳೂರು ಮತ್ತು ದೆಹಲಿಗೆ ನಿಕಟವಾಗಿರುವ ಗಾಜಿಯಾಬಾದ್ ನಗರಗಳಿಗೆ ವಾಯುಯಾನ ಸಂಪರ್ಕವನ್ನು ಒದಗಿಸಲಾಗುವದು ಎಂದರು.

ಎಚ್‌ಕೆಸಿಸಿಐ ಅಧ್ಯಕ್ಷ ಅಮರನಾಥ ಸಿ. ಪಾಟೀಲ ಮಾತನಾಡಿ, ಈ ಪ್ರದೇಶದ ಜನರ ಪ್ರಯಾಣವು ಮುಂಬೈ–ಕಲಬುರ್ಹೈಗಿ–ಹೈದರಾಬಾದ್ ನಗರಗಳಿಗೆ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ, ಅವರ ಅನುಕೂಲಕ್ಕಾಗಿ ಈ ನಗರಗಳಿಗೆ ವಾಯುಯಾನ ಸಂಪರ್ಕವನ್ನು ಕಲ್ಪಿಸಬೇಕೆಂದು ವಿನಂತಿಸಿದರು. ಇದಲ್ಲದೆ ಕಲಬುರಗಿ ವಿಮಾನ ನಿಲ್ದಾಣದಿಂದ ವಿಮಾನಗಳ ನಿರ್ಗಮನದ ಸಮಯವನ್ನು ಕಾರ್ಯಾಲಯಗಳ ಸಮಯಗಳಿಗೆ ಅನುಕೂಲವಾಗುವ ಹಾಗೆ ನಿರ್ಧರಿಸಬೇಕೆಂದು ಕೋರಿದರು.

ADVERTISEMENT

ಕೆನರಾ ಬ್ಯಾಂಕ್ ಎಜಿಎಂ ಎಚ್.ಕೆ. ಗಂಗಾಧರ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.