ADVERTISEMENT

ಪರೋಪಕಾರದಿಂದ ಜೀವನ ಸಾರ್ಥಕ: ಬಸವಲಿಂಗ ಪಟ್ಟದ್ದೇವರು

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2025, 13:28 IST
Last Updated 20 ಫೆಬ್ರುವರಿ 2025, 13:28 IST
ಅಫಜಲಪುರ ಪಟ್ಟಣದ ನ್ಯಾಷನಲ್ ಫಂಕ್ಷನ್ ಹಾಲ್‌ನಲ್ಲಿ ನಡೆದ ಶರಣ ಸಂಗಮ ಹಾಗೂ ಗುರು ನಮನ ಕಾರ್ಯಕ್ರಮದಲ್ಲಿ ಡಾ.ಬಸವರಾಜ ಕೆಂಗನಾಳ ಅವರಿಗೆ ಕಲಿಸಿದ ಗುರುಗಳನ್ನು ಸನ್ಮಾನಿಸಲಾಯಿತು
ಅಫಜಲಪುರ ಪಟ್ಟಣದ ನ್ಯಾಷನಲ್ ಫಂಕ್ಷನ್ ಹಾಲ್‌ನಲ್ಲಿ ನಡೆದ ಶರಣ ಸಂಗಮ ಹಾಗೂ ಗುರು ನಮನ ಕಾರ್ಯಕ್ರಮದಲ್ಲಿ ಡಾ.ಬಸವರಾಜ ಕೆಂಗನಾಳ ಅವರಿಗೆ ಕಲಿಸಿದ ಗುರುಗಳನ್ನು ಸನ್ಮಾನಿಸಲಾಯಿತು   

ಅಫಜಲಪುರ: ‘ಪರೋಪಕಾರಿ ಹಾಗೂ ದಾಸೋಹ ಕಾರ್ಯಗಳಿಂದ ನಡೆದುಕೊಂಡಾಗ ಮಾತ್ರ ಶ್ರೇಷ್ಠ ಬದುಕು ನಮ್ಮದಾಗಿಸಿಕೊಳ್ಳಲು ಸಾಧ್ಯವಾಗುತ್ತದೆ. ವಿಶ್ವಮಾನ್ಯ ಬಸವ ತತ್ವವನ್ನು ಜಗತ್ತಿನೆಲ್ಲಡೆ ಪಸರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ’ ಎಂದು ಭಾಲ್ಕಿಯ ಬಸವಲಿಂಗ ಪಟ್ಟದ್ದೇವರು ಹೇಳಿದರು.

ಪಟ್ಟಣದ ನ್ಯಾಷನಲ್ ಫಂಕ್ಷನ್ ಹಾಲ್‌ನಲ್ಲಿ ಡಾ.ಬಸವರಾಜ ಕೆಂಗನಾಳ ಅವರ ಸೇವಾ ನಿವೃತ್ತಿ ನಿಮಿತ್ತ ನಡೆದ ಶರಣ ಸಂಗಮ ಹಾಗೂ ಗುರು ನಮನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಜಿ.ಪಂ ಮಾಜಿ ಸದಸ್ಯ ಅರುಣಕುಮಾರ ಪಾಟೀಲ ಮಾತನಾಡಿದರು.

ADVERTISEMENT

ಕಾರ್ಯಕ್ರಮದಲ್ಲಿ ಶರಣಪ್ಪಮುತ್ಯಾ ಒಡೆಯರ್, ಡಾ.ಬಸವರಾಜ ಕೆಂಗನಾಳ, ಸದಾಶಿವ ಮೇತ್ರಿ, ಅವಮ್ಮ ಕೆಂಗನಾಳ, ಡಾ.ಎಂ.ಎಸ್.ಗಂಗನಳ್ಳಿ, ಡಾ.ಕೆ.ಎಂ.ಕೋಟೆ, ಸಂಜಯ ಮಾಕಲ, ಎಂ.ಎಸ್.ಬಿರಾದಾರ, ಜಗದೇವಪ್ಪ ಅಂಜುಟಗಿ, ಚಂದು ದೇಸಾಯಿ, ಶಾಂತಪ್ಪ ಅಂಜುಟಗಿ, ಬಸಲಿಂಗಪ್ಪ ಬನಸೋಡೆ, ಶಿವಾನಂದ ಗಾಡಿಸಾಹುಕಾರ, ಶಿವಶರಣಪ್ಪ ಮಳ್ಳಿ, ಗುರು ಸಾಲಿಮಠ, ಎಸ್.ಎಸ್.ಪಾಟೀಲ, ಅಮೃತರಾವ್ ಪಾಟೀಲ, ರಾಮಣ್ಣ ಬೂಶಿ, ಶ್ರೀಮಂತ ಬಿರಾದಾರ, ಅಂಬರೀಶ ಮೇತ್ರಿ, ಸಂಜಯ ಮಾಕಲ್, ಚಂದ್ರಕಾಂತ ಇಬ್ರಾಹಿಂಪೂರ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.