ಕಲಬುರಗಿಯಲ್ಲಿ ರೇವಣಸಿದ್ದಪ್ಪ ದುಕಾನ ಅವರ ‘ಹೂಗನಸು’ ಕವನ ಸಂಕಲನವನ್ನು ಸಿದ್ಧರಾಮ ಹೊನ್ಕಲ್ ಬಿಡುಗಡೆಗೊಳಿಸಿದರು.
ಕಲಬುರಗಿ: ‘ಯಾವುದೇ ಕವಿಗೆ ಒಂದು ಸಾಮಾಜಿಕ ಜವಾಬ್ದಾರಿ ಇರುತ್ತದೆ. ಅವರು ಇಂದು ಬರೆದದ್ದು ಮುಂದಿನ ತಲೆಮಾರಿಗೆ ಹೋಗುವಂತಹ ಸೌಹಾರ್ದದ ಬದುಕಿನ ಕಾವ್ಯ ರಚಿಸಬೇಕು’ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಸಿದ್ಧರಾಮ ಹೊನ್ಕಲ್ ಹೇಳಿದರು.
ನಗರದ ಕಲಾ ಮಂಡಳದಲ್ಲಿ ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಆಯೋಜಿಸಿದ್ದ ರೇವಣಸಿದ್ದಪ್ಪ ದುಕಾನ ಅವರ ‘ಹೂಗನಸು’ ಕವನ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದ ಅವರು, ‘ಸಮಕಾಲೀನ ಸಂಕಟಗಳಿಗೆ ಕವಿ ದನಿಯಾಗಬೇಕು. ಸಮಾಜವನ್ನು ತಿದ್ದಿ ಸರಿದಾರಿಗೆ ತರುವ ರೀತಿಯಲ್ಲಿ ಅಕ್ಷರಗಳನ್ನು ಪೋಣಿಸಬೇಕು. ಕವಿಗೆ ಬದ್ಧತೆ ಮತ್ತು ಸುತ್ತಲಿನ ಸಂಗತಿಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ ಅಭಿವ್ಯಕ್ತಿಸುವ ಒಳದನಿ ಇರಬೇಕು’ ಎಂದು ಹೇಳಿದರು.
ಸಾನ್ನಿಧ್ಯವನ್ನು ರೇವಣಸಿದ್ಧ ಶಿವಾಚಾರ್ಯರು ಹಾಗೂ ಚಿಕ್ಕ ಗುರು ನಂಜೇಶ್ವರ ಸ್ವಾಮಿ ವಹಿಸಿದ್ದರು. ಮಧುಕರ ದೇಶಪಾಂಡೆ, ಕವಿ ರೇವಣಸಿದ್ದಪ್ಪ ದುಕಾನ ಉಪಸ್ಥಿತರಿದ್ದರು. ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಬಿ.ಎಚ್. ನಿರಗುಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅರುಣಾ ನಿರೂಪಿಸಿದರು. ಶ್ವೇತಾ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.