ADVERTISEMENT

ಚಿಂಚೋಳಿ | ‘ಸ್ವಾಮೀಜಿಗಳು ಶರಣರಲ್ಲ’

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2025, 16:22 IST
Last Updated 30 ಏಪ್ರಿಲ್ 2025, 16:22 IST
ಚಿಂಚೋಳಿಯ ಬಸವೇಶ್ವರ ವೃತ್ತದಲ್ಲಿ ಬಸವ ಜಯಂತಿ ಆಚರಿಸಲಾಯಿತು
ಚಿಂಚೋಳಿಯ ಬಸವೇಶ್ವರ ವೃತ್ತದಲ್ಲಿ ಬಸವ ಜಯಂತಿ ಆಚರಿಸಲಾಯಿತು   

ಚಿಂಚೋಳಿ: ‘12ನೇ ಶತಮಾನದ ಶರಣರನ್ನು ಫೋಟೊಗಳಲ್ಲಿ ಹುಡುಕಿದರೆ ಅವರು ಸಿಗುವುದಿಲ್ಲ ಬದಲಾಗಿ ಪುಸ್ತಕಗಳಲ್ಲಿ ಹುಡುಕಿ’ ಎಂದು ಸೇಡಂನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪಂಡಿತ ಬಿ.ಕೆ ತಿಳಿಸಿದರು.

ಇಲ್ಲಿನ ಬಸವೇಶ್ವರ ವೃತ್ತದಲ್ಲಿ ತಾಲ್ಲೂಕು ಆಡಳಿತ ಹಮ್ಮಿಕೊಂಡ ಬಸವೇಶ್ವರರ 892ನೇ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.

‘ತನು, ಮನ ಹಾಗೂ ಭಾವ ಶುದ್ಧಿಯಾದ, ಆಸೆ ಆಮಿಷಗಳಿಂದ ದೂರವಿರುವ ವ್ಯಕ್ತಿ ಪ್ರಜ್ಞೆಗಿಂತಲೂ ಸಮಷ್ಠಿ ಪ್ರಜ್ಙೆಯಲ್ಲಿ ನಂಬಿಕೆಯಿರಿಸಿದ ಅಂತರಂಗ ಮತ್ತು ಬಹಿರಂಗ ಶುದ್ಧತೆಯಿಂದ ಕೂಡಿದ ನಡೆ ನುಡಿ ಒಂದಾಗಿದ್ದವರು ಶರಣರು. ಸ್ವಾಮೀಜಿಗಳಾದವರು ಶರಣರಲ್ಲ. ಸ್ವಾಮೀಜಿಗಳನ್ನು ಶರಣರಿಗೆ ಹೋಲಿಸುವುದು ಸಲ್ಲದು’ ಎಂದರು.

ADVERTISEMENT

ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ ಮಾತನಾಡಿದರು. 

ಕಾರ್ಯಕ್ರಮದಲ್ಲಿ ಚಿತ್ರಶೇಖರ ಪಾಟೀಲ, ವಿಶ್ವನಾಥ ಪಾಟೀಲ, ಬಸವಣಪ್ಪ ಕುಡಳ್ಳಿ, ಬಸವರಾಜ ಬೆಳಕೇರಿ, ವೀರಶೆಟ್ಟಿ ಇಮ್ಡಾಪುರ, ಸಂಗಪ್ಪ ಪಾಲಾಮೂರ, ಮಲ್ಲಿಕಾರ್ಜುನ ಬೆಳಕೇರಿ ಮೊದಲಾದವರಿಗೆ ಸನ್ಮಾನಿಸಿದರು. ಪುರಸಭೆ ಅಧ್ಯಕ್ಷ ವೆಂಕಟೇಶ ದುಗ್ಗನ್, ವೀರಶೆಟ್ಟಿ ಇಮ್ಡಾಪುರ ಮಾತನಾಡಿದರು. ವೆಂಕಟೇಶ ದುಗ್ಗನ್, ಕಾಶಿನಾಥ ಧನ್ನಿ, ಶಂಕರ ರಾಠೋಡ್, ಕೇಶವ ಕುಲಕರ್ಣಿ ಮೊದಲಾದವರು ಇದ್ದರು.

ಶರಣು ಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ಜಯಪ್ಪ ಚಾಪಲ್ ಸ್ವಾಗತಿಸಿದರು. ಮಲ್ಲಿಕಾರ್ಜುನ ಪಾಲಾಮೂರ ನಿರೂಪಿಸಿದರು. ನಾಗಶೆಟ್ಟಿ ಭದ್ರಶೆಟ್ಟಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.