ಅರಳಗುಂಡಗಿ: ಯಡ್ರಾಮಿ ತಾಲ್ಲೂಕಿನ ಅರಳಗುಂಡಗಿ ಗ್ರಾಮದಲ್ಲಿ ಚೌಡೇಶ್ವರಿ ದೇವಿ ಜಾತ್ರಾ ಮಹೋತ್ಸವ ಅಂಗವಾಗಿ ದೇವಸ್ಥಾನ ಆವರಣದಲ್ಲಿ ಸೋಮವಾರ ಹೋಮ ಹವನ ನಡೆಯಿತು. ಮಂಗಳವಾರ ಮಹಾಪುರಾಣ ಮಂಗಲಗೊಂಡು ಗ್ರಾಮದ ಪ್ರಮುಖ ಬೀದಿಗಳಲ್ಲಿ ಬಾಜಾ ಭಜಂತ್ರಿ, ಡೊಳ್ಳು ಕುಣಿತದೊಂದಿಗೆ ದೇವಿಯಮೂರ್ತಿ ಮೆರವಣಿಗೆ ನಡೆಯಿತು.
ಯಡ್ರಾಮಿಯ ವೀರೇಶ ಪಾಟೀಲ ಸಂಗೀತ ಸೇವೆ ಸಲ್ಲಿಸಿದರು. ಕಟ್ಟಿಸಂಗಾವಿಯ ವೀರೇಶ ಕುಮಾರ್ ತಬಲಾ ಸಾಥ್ ನೀಡಿದರು.
ಮೆರವಣಿಗೆಯಲ್ಲಿ ಬಸವರಾಜಗೌಡ ಮಾಲಿ ಪಾಟೀಲ, ಸಿದ್ದಣ್ಣ ಸೊನ್ನದ, ಚೆನ್ನಪ್ಪ ರೇವೂರ, ಮಾಂತಗೌಡ ಕಮಾನಮನಿ, ಶ್ರೀಶೈಲ ಯಂಕಂಚಿ, ಶಿವಾನಂದ ಗೋಗಿ, ಶಿವಾನಂದ ಯಂಕಂಚಿ, ಶಿವಾನಂದ ಗುತ್ತರಗಿ, ಮಲ್ಲಿನಾಥ ತೋಳನೂರ, ಈರಣ್ಣ ಬಡಿಗೇರ ಸೇರಿ ನೂರಾರು ಭಕ್ತರು ಭಾಗವಹಿಸಿದ್ದರು.
ಮೇ 12 ರಿಂದ 27ರವರಗೆ ಮೈಂದರಗಿಯ ಮೃತ್ಯುಂಜಯ ಸ್ವಾಮೀಜಿ ಅವರಿಂದ ಚೌಡೇಶ್ವರಿ ದೇವಿಯ ಪುರಾಣ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.