ADVERTISEMENT

ಗುವಿವಿ: ವಿವಿಧ ಘಟಕಗಳಿಗೆ ಸಂಯೋಜಕರ ನೇಮಕ

ಪರೀಕ್ಷಾ ವಿಭಾಗಕ್ಕೆ ಲಂಡನಕರ್, ಎನ್‌ಎಸ್ಎಸ್‌ಗೆ ಕಣ್ಣೂರ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2022, 5:00 IST
Last Updated 25 ಫೆಬ್ರುವರಿ 2022, 5:00 IST

ಕಲಬುರಗಿ: ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯದ ವಿವಿಧ ವಿಭಾಗ, ಘಟಕಗಳಿಗೆ ನೂತನ ಸಂಯೋಜಕರು, ವಿಶೇಷಾಧಿಕಾರಿಗಳನ್ನಾಗಿ ನೇಮಕ ಮಾಡಿ ಕುಲಸಚಿವ ಡಾ.ಶರಣಬಸಪ್ಪ ಕೋಟೆಪ್ಪಗೋಳ ಆದೇಶ ಹೊರಡಿಸಿದ್ದಾರೆ.

ಕಳೆದ ಏಳು ವರ್ಷಗಳಿಂದ ಎನ್‌ಎಸ್‌ಎಸ್‌ ಸಂಯೋಜಕರಾಗಿದ್ದ ಡಾ.ರಮೇಶ ಲಂಡನಕರ್ ಅವರನ್ನು ಪರೀಕ್ಷಾ ವಿಭಾಗದ ಎಲ್ಲ ಸ್ನಾತಕ ಕೋರ್ಸುಗಳ ವಿಶೇಷಾಧಿಕಾರಿಯನ್ನಾಗಿ ನೇಮಿಸಲಾಗಿದೆ. ಪರೀಕ್ಷಾ ವಿಭಾಗದ ಎಲ್ಲ ಸ್ನಾತಕೋತ್ತರ ಪಿ.ಜಿ. ಡಿಪ್ಲೊಮಾ ಹಾಗೂ ಪಿಎಚ್‌.ಡಿ. ಕೋರ್ಸುಗಳ ವಿಶೇಷಾಧಿಕಾರಿಯನ್ನಾಗಿ ಪ್ರೊ. ಕೆ. ಸಿದ್ದಪ್ಪ, ವಿದ್ಯಾರ್ಥಿ ಕಲ್ಯಾಣಾಧಿಕಾರಿಯನ್ನಾಗಿ ಪ್ರೊ. ಕೆ. ಲಿಂಗಪ್ಪ, ಕೆಕೆಸಿಆರ್‌ಎಸ್‌ಡಿ ನಿರ್ದೇಶಕರನ್ನಾಗಿ ಪ್ರೊ. ರಾಜನಾಳಕರ ಲಕ್ಷ್ಮಣ, ಕೃಷ್ಣಾ ವಸತಿ ನಿಲಯದ ಪರಿಪಾಲಕರನ್ನಾಗಿ ಡಾ.ಹನಮಂತ ಜಂಗೆ, ಗಂಗಾ ವಸತಿ ನಿಲಯ ಹಾಗೂ ಹೊಸ ವೃತ್ತಿಪರ ಮಹಿಳಾ ವಸತಿ ನಿಲಯಕ್ಕೆ ಪ್ರೊ.ಜೆ. ಲಲಿತಾ, ವೃತ್ತಿಪರ ಮಹಿಳಾ ವಸತಿ ನಿಲಯಕ್ಕೆ ಡಾ.ವಾಣಿ ಆರ್‌.ಎಂ, ಉಪ ಹಣಕಾಸು ಅಧಿಕಾರಿಯಾಗಿ ಪ್ರೊ. ಸುಜಾತಾ ಇಂಗಿನಶೆಟ್ಟಿ, ರೂಸಾ ಸಂಯೋಜಕರಾಗಿ ಪ್ರೊ.ಅಮಲಪ್ಪ ಹೊಸಮನಿ, ಶಿವಶರಣೆ ಸಾಧ್ವಿ ಶಿರೋಮಣಿ ಹೇಮರೆಡ್ಡಿ ಮಲ್ಲಮ್ಮ ಪೀಠದ ನಿರ್ದೇಶಕರನ್ನಾಗಿ ಪ್ರೊ.ಕೆ.ಎಸ್. ಮಾಲಿಪಾಟೀಲ ಅವರನ್ನು ನೇಮಕ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT